ಆಹಾರ ವಸ್ತುಗಳ ಬೆಲೆಗಳು ಭರ್ಜರಿ ಇಳಿಕೆ :  ಕನಿಷ್ಠ ಮಟ್ಟಕ್ಕೆ ಕುಸಿದ ಹಣದುಬ್ಬರ

36

ಚೆನ್ನೈ: ಜಿಎಸ್ ಟಿ ಕಡಿತದ ಪರಿಣಾಮವಾಗಿ ದೇಶದಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಭಾರತದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ 2025 ರಲ್ಲಿ ರಲ್ಲಿ ಶೇ. 0.25ಕ್ಕೆ ತೀವ್ರವಾಗಿ ಕುಸಿದಿದೆ. ಇದು ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಹಣದುಬ್ಬರವಾಗಿದೆ. ಸೆಪ್ಟೆಂಬರ್‌ನಲ್ಲಿ ಶೇ. 1.54 ಇದ್ದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ನಲ್ಲಿ ಕೇವಲ ಶೇ. 0.25 ದಾಖಲಾಗಿದೆ. ಪ್ರಸ್ತುತ ಗ್ರಾಹಕ ಬೆಲೆ ಸೂಚ್ಯಂಕ(CPI) ಸರಣಿಯಲ್ಲಿ ಇದು ಅತ್ಯಂತ ಕಡಿಮೆ ಮಟ್ಟವನ್ನು ಗುರುತಿಸಿದೆ.

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ(MoSPI) ಮಾಹಿತಿಯ ಪ್ರಕಾರ, ಆಹಾರವಸ್ತುಗಳ ಬೆಲೆಗಳು ಭರ್ಜರಿ ಇಳಿಕೆಯಾಗಿರುವುದು ಹಣದುಬ್ಬರ ಕುಸಿತಕ್ಕೆ ಕಾರಣವಾಗಿದೆ. ಆಹಾರ ಹಣದುಬ್ಬರವು ಸೆಪ್ಟೆಂಬರ್ನಲ್ಲಿ ಮೈನಸ್ ಶೇ. 2.33 ಇದ್ದದ್ದು ಈಗ ಮೈನಸ್ 5.02ಕ್ಕೆ ಕುಸಿದಿದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.1.55ಕ್ಕೆ ಇಳಿಕೆ;

ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ ತರಕಾರಿ, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಬೆಲೆಗಳು ಗಮನಾರ್ಹ ಕುಸಿತವನ್ನು ದಾಖಲಿಸಿವೆ. ಅಲ್ಲದೆ ಸೆಪ್ಟೆಂಬರ್ ಅಂತ್ಯದಲ್ಲಿ ಜಾರಿಗೆ ತರಲಾದ ಜಿಎಸ್‌ಟಿ ದರ ಕಡಿತ ಸಹ ಹಣದುಬ್ಬರ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇನ್ನು ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಹೆಚ್ಚು ಹಣದುಬ್ಬರ ದಾಖಲಾಗಿದೆ. ಈ ದಕ್ಷಿಣ ರಾಜ್ಯದಲ್ಲಿ ಹಣದುಬ್ಬರ ಬರೋಬ್ಬರಿ ಶೇ. 8.56 ಇದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕದಲ್ಲೂ ಶೇ. 2ಕ್ಕಿಂತಲೂ ಹೆಚ್ಚು ಹಣದುಬ್ಬರ ದಾಖಲಾಗಿದೆ. ಹಣದುಬ್ಬರ ಮೈನಸ್ ಹೊಂದಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿವೆ”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...