ಐಟಿ ಉದ್ಯೋಗಿಗಳಿಗೆ ‘ಆರ್ಬಿಟ್ ವಾಲೆಟ್ ರೂಪೇ ಕಾರ್ಡ್’ ಮೂಲಕ 1,500 ರೂ. ಮೆಟ್ರೋ ಪ್ರೋತ್ಸಾಹಧನ

21

ಬೆಂಗಳೂರು:250 ಐಟಿ ಉದ್ಯೋಗಿಗಳಿಗೆ ತಲಾ 1,500 ರೂ ಮೌಲ್ಯದ ಮೆಟ್ರೋ ಪ್ರೋತ್ಸಾಹಧನವನ್ನು ‘ಆರ್ಬಿಟ್ ವಾಲೆಟ್ ರೂಪೇ ಕಾರ್ಡ್’ ಮೂಲಕ ನೀಡಲಾಗಿದೆ. ಸೌಲಭ್ಯಕ್ಕೆ ನೋಂದಾಯಿಸಿಕೊಂಡ ಮೊದಲ 250 ಉದ್ಯೋಗಿಗಳಿಗೆ ಈ ಕೊಡುಗೆ ಲಭ್ಯವಿದೆ. ಮೆಟ್ರೋ ಪ್ರಯಾಣ ದರ 45 ರೂ ಆಗಿದ್ದರೆ, ಕಡಿಮೆ ಜನದಟ್ಟಣೆ ಸಮಯದಲ್ಲಿ ಶೇ. 10 ಮತ್ತು ಅಧಿಕ ಜನದಟ್ಟಣೆ ಸಮಯದಲ್ಲಿ ಶೇ. 5 ರಿಯಾಯಿತಿ ಲಭ್ಯವಿದೆ.

  ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಹಾಗೂ ಹಳದಿ ಮಾರ್ಗದ ಮೆಟ್ರೋ ಬಳಕೆದಾರರನ್ನು ಹೆಚ್ಚು ಮಾಡಲು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯನಿರ್ವಹಿಸುವ 250 ಐಟಿ ಉದ್ಯೋಗಿಗಳಿಗೆ ತಲಾ 1,500 ರೂ ಮೌಲ್ಯದ ಮೆಟ್ರೋ ಪ್ರೋತ್ಸಾಹಧನವನ್ನು ‘ಆರ್ಬಿಟ್ ವಾಲೆಟ್ ರೂಪೇ ಕಾರ್ಡ್’ ಮೂಲಕ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಈ ಯೋಜನೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ವಿಶ್ವ ಸಾರ್ವಜನಿಕ ಸಾರಿಗೆ ದಿನದ ಅಂಗವಾಗಿ, ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ (ELCIA), ಟೊಯೋಟಾ ಮೊಬಿಲಿಟಿ ಫೌಂಡೇಶನ್ (TMF), ಮತ್ತು ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (WRI) ಇಂಡಿಯಾ ಸಂಸ್ಥೆಗಳು, ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಸಹಯೋಗದೊಂದಿಗೆ ಈ ಕ್ರಮಕ್ಕೆ ಚಾಲನೆ ನೀಡಿವೆ.

ಈ ಯೋಜನೆಯ ಮುಖ್ಯ ಉದ್ದೇಶ, ನಮ್ಮ ಮೆಟ್ರೋದ ಹೊಸ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವುದಾಗಿದೆ.

ಆರ್ಬಿಟ್ ವಾಲೆಟ್‌ನ ಸಹ-ಸಂಸ್ಥಾಪಕಿ ಶಿಖಾ ಚೌಕ್ಸೆ ಮಾತನಾಡಿ, “ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇಂಧನ ಮತ್ತು ಪಾರ್ಕಿಂಗ್ ವೆಚ್ಚವನ್ನು ಮರುಪಾವತಿ ಮಾಡುತ್ತವೆ. ಈಗ ಆರ್ಬಿಟ್ ವಾಲೆಟ್ ಮೂಲಕ, ಮೆಟ್ರೋ ಮತ್ತು ಬಸ್ ಬಳಸುವವರಿಗೂ ಅದೇ ಮಾದರಿಯ ಪ್ರಯೋಜನಗಳನ್ನು ವಿಸ್ತರಿಸಲು ಸಾಧ್ಯವಾಗುತ್ತದೆ,” ಎಂದರು. 1,500 ರೂ ಪ್ರೋತ್ಸಾಹಧನ ಹೇಗೆ ಕೆಲಸ ಮಾಡುತ್ತದೆ? ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡ ಮೊದಲ 250 ಉದ್ಯೋಗಿಗಳಿಗೆ ಈ ಕೊಡುಗೆ ಲಭ್ಯವಿದೆ.

ಪ್ರತಿಯೊಬ್ಬ ಉದ್ಯೋಗಿಯ ಆರ್ಬಿಟ್ ವಾಲೆಟ್ ಕಾರ್ಡ್‌ಗೆ 750 ರೂಪಾಯಿಯನ್ನು ಮುಂಗಡವಾಗಿ ಲೋಡ್ ಮಾಡಲಾಗುತ್ತದೆ. ಇದರ ಜೊತೆಗೆ, ಅವರು ಮೆಟ್ರೋ ಬಳಸಿದಂತೆ 750 ರೂಪಾಯಿ ಮೌಲ್ಯದ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಲಿದ್ದಾರೆ. ಉದಾಹರಣೆಗೆ, ಎಲೆಕ್ಟ್ರಾನಿಕ್ ಸಿಟಿಯಿಂದ ಜಯನಗರಕ್ಕೆ ಪ್ರಯಾಣಿಸುವ ಉದ್ಯೋಗಿಯೊಬ್ಬರು ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ನಂತರ ಕೂಡಾ, ಕಡಿಮೆ ಜನದಟ್ಟಣೆಯ ಸಮಯದಲ್ಲಿ ಕೇವಲ 40 ರೂ ಪಾವತಿಸಬಹುದು.

ಮೆಟ್ರೋ ಪ್ರಯಾಣ ದರ 45 ರೂ ಆಗಿದ್ದು, ಕಡಿಮೆ ಜನದಟ್ಟಣೆ ಸಮಯದಲ್ಲಿ ಶೇ. 10 ಮತ್ತು ಅಧಿಕ ಜನದಟ್ಟಣೆ ಸಮಯದಲ್ಲಿ ಶೇ. 5 ರಿಯಾಯಿತಿ ಲಭ್ಯವಿದೆ. ಕ್ಯಾಶ್‌ಬ್ಯಾಕ್ ಸೇರಿ, ಪ್ರಯಾಣದ ವೆಚ್ಚ ಮತ್ತಷ್ಟು ಕಡಿಮೆಯಾಗಲಿದೆ. ಕಾರ್ಪೊರೇಟ್ ಕಂಪನಿಗಳಿಗೂ ಅನುಕೂಲ ‘ಸ್ಟ್ಯಾಂಪ್ ನಡ್ಜ್ ಚಾಲೆಂಜ್’ ಸ್ಪರ್ಧೆಯ ವಿಜೇತರಲ್ಲಿ ಒಂದಾದ ಆರ್ಬಿಟ್ ವಾಲೆಟ್, ELCIA ಉದ್ಯೋಗಿಗಳಿಗಾಗಿಯೇ ಈ ಕಾರ್ಡ್‌ಗಳನ್ನು ವಿನ್ಯಾಸಗೊಳಿಸಿದೆ.

“ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇಂಧನ, ಪಾರ್ಕಿಂಗ್ ಮತ್ತು ಚಾಲಕರ ವೆಚ್ಚವನ್ನು ಮರುಪಾವತಿಸುತ್ತವೆ. ಈಗ ಆರ್ಬಿಟ್ ವಾಲೆಟ್ ಮೂಲಕ, ಮೆಟ್ರೋ ಮತ್ತು ಬಸ್ ಬಳಸುವ ಉದ್ಯೋಗಿಗಳಿಗೂ ಅದೇ ರೀತಿಯ ಪ್ರಯಾಣ ಭತ್ಯೆಯನ್ನು ನೇರವಾಗಿ ಕಾರ್ಡ್‌ಗೆ ಜಮಾ ಮಾಡಬಹುದು. ಇದು ಸುಸ್ಥಿರ ಆಯ್ಕೆಗಳನ್ನು ಪ್ರೋತ್ಸಾಹಿಸುತ್ತದೆ,” ಎಂದು ಆರ್ಬಿಟ್ ವಾಲೆಟ್‌ನ ಸಹ-ಸಂಸ್ಥಾಪಕಿ ಶಿಖಾ ಚೌಕ್ಸೆ ಹೇಳಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಧಮಾಕ; ಹಳದಿ ಮಾರ್ಗದಲ್ಲಿ 5ನೇ ರೈಲು ಸಂಚಾರ ಶುರು; ವೇಳಾಪಟ್ಟಿ ಏನು? “ಪ್ರೋತ್ಸಾಹಧನ, ಡಿಜಿಟಲ್ ಪರಿಕರಗಳು ಮತ್ತು ಪಾಲುದಾರಿಕೆಗಳ ಮೂಲಕ ದೈನಂದಿನ ಪ್ರಯಾಣವನ್ನು ಸಾರ್ವಜನಿಕ ಸಾರಿಗೆಯ ಕಡೆಗೆ ಹೇಗೆ ಬದಲಾಯಿಸಬಹುದು ಎಂಬುದನ್ನು ನಾವು ಈ ಯೋಜನೆಯ ಮೂಲಕ ತೋರಿಸುತ್ತಿದ್ದೇವೆ,” ಎಂದು ಟೊಯೋಟಾ ಮೊಬಿಲಿಟಿ ಫೌಂಡೇಶನ್‌ನ ಕಾರ್ಯಕಾರಿ ಕಾರ್ಯಕ್ರಮ ನಿರ್ದೇಶಕ ಪ್ರಸ್ ಗಣೇಶ್ ಹೇಳಿದರು. “ಆರ್ಬಿಟ್ ವಾಲೆಟ್ ಕಾರ್ಡ್‌ಗಳನ್ನು ಪರಿಚಯಿಸುವ ಮೂಲಕ, ಬೆಂಗಳೂರಿನ ಇತರ ಉದ್ಯೋಗ ಕೇಂದ್ರಗಳಲ್ಲೂ ಅಳವಡಿಸಬಹುದಾದ ಒಂದು ಮಾದರಿಯನ್ನು ರೂಪಿಸಲು ನಾವು ಆಶಿಸುತ್ತೇವೆ,” ಎಂದು ELCIA ಪ್ರತಿನಿಧಿಯೊಬ್ಬರು ತಿಳಿಸಿದರು.”

Leave a comment

Leave a Reply

Your email address will not be published. Required fields are marked *

Related Articles

ತಿರುಪತಿ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಕೆ ಸಾಬೀತು, ಕಠಿಣ ಕ್ರಮಕ್ಕೆ ಆಗ್ರಹ

ನಕಲಿ ತುಪ್ಪವನ್ನು ಬಳಸಿ ತಿರುಪತಿ ಲಡ್ಡು ತಯಾರಿಸಲಾಗಿದೆ ಎನ್ನುವ ಸುದ್ದಿ, ಹಿಂದೂ ಭಕ್ತರನ್ನು ಕೆರಳಿಸಿದೆ. ಈ...

ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಏರಿಕೆ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಹೈಬ್ರಿಡ್

ಹೊಸದಿಲ್ಲಿ : ವಾಯುಮಾಲಿನ್ಯದ ಮಟ್ಟ ‘ಅತ್ಯಂತ ಕೆಟ್ಟ’ ದಿಂದ ‘ಭಯಾನಕ’ ವರ್ಗಕ್ಕೆ ತಲುಪಿದೆ ದಿಲ್ಲಿ ವಾಯುಮಾಲಿನ್ಯ...

ದೆಹಲಿ ಸ್ಫೋಟಕ್ಕೂ ಪುಲ್ವಾಮಾ ದಾಳಿಗೂ ನಂಟು? ಬಹು ಆಯಾಮಗಳಲ್ಲಿ ತನಿಖೆ

ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಭಯೋತ್ಪಾದ ದಾಳಿ ಸಂಭವಿಸಿದ್ದು, ಈ ದಾಳಿಯಲ್ಲಿ ಆತ್ಮಹತ್ಯ ಬಾಂಬರ್ ಆಗಿದ್ದ ಉಗ್ರ...

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲು ಸಿದ್ಧತೆ

ಬೆಂಗಳೂರು : 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣದಿಂದ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆ ರಸ್ತೆಯುದ್ದಕ್ಕೂ...