ತಿರುಪತಿ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಕೆ ಸಾಬೀತು, ಕಠಿಣ ಕ್ರಮಕ್ಕೆ ಆಗ್ರಹ

6

ನಕಲಿ ತುಪ್ಪವನ್ನು ಬಳಸಿ ತಿರುಪತಿ ಲಡ್ಡು ತಯಾರಿಸಲಾಗಿದೆ ಎನ್ನುವ ಸುದ್ದಿ, ಹಿಂದೂ ಭಕ್ತರನ್ನು ಕೆರಳಿಸಿದೆ. ಈ ಸಂಬಂಧ, ಆಂಧ್ರ ಪದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಟ್ವೀಟ್ ಮೂಲಕ ಸಂದೇಶವೊಂದನ್ನು ರವಾನಿಸಿದ್ದಾರೆ. ಪರಿರಕ್ಷಣಾ ಬೋರ್ಡ್ ಸ್ಥಾಪಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ತಿರುಪತಿ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಕೆ ಸಾಬೀತು, ಕಠಿಣ ಕ್ರಮಕ್ಕೆ ಆಗ್ರಹ ಅಜಯ್ ಕುಮಾರ್ ಸುಗಂಧ ಎಂಬಾತನ ಬಂಧನದೊಂದಿಗೆ ಆಘಾತಕಾರಿ ಜಾಲದ ಮಾಹಿತಿ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮಹತ್ವದ ಟ್ವೀಟ್ ಸಂದೇಶ ತಿರುಪತಿ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಕೆ ಸಾಬೀತು, ಕಠಿಣ ಕ್ರಮಕ್ಕೆ ಆಗ್ರಹ ತಿರುಪತಿ (ಆಂಧ್ರ ಪ್ರದೇಶ) : ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ತಿರುಮಲ ತಿರುಪತಿ ದೇವಾಲಯದ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿದ ಸುದ್ದಿ, ದೇಶಾದ್ಯಂತ ಭಾರೀ ಸದ್ದನ್ನು ಮಾಡುತ್ತಿದೆ.

ಡೇರಿಯೊಂದರ ಬಂಡವಾಳವನ್ನು ಸಿಬಿಐ ಬಯಲು ಮಾಡಿದೆ. ಈ ಸಂಬಂಧ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಟ್ವೀಟ್ (ಎಕ್ಸ್) ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ತಿರುಪತಿ ಲಡ್ಡು ಕೇವಲ ಸಿಹಿ ತಿಂಡಿಯಲ್ಲ, ಅದು ಹಿಂದೂಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ವಸ್ತುವಾಗಿದೆ ಎಂದು ಹೇಳಿದ್ದಾರೆ.

ವಿಶೇಷ ತನಿಖಾ ದಳದ ವರದಿಯ ಪ್ರಕಾರ, ಭೋಲೆಬಾಬಾ ಡೇರಿ, ರೂರ್ಕಿಯಲ್ಲಿರುವ ತನ್ನ ಡೇರಿ ಸ್ಥಾವರದಲ್ಲಿ ತಾಳೆ ಎಣ್ಣೆ ಜೊತೆಗೆ ರಾಸಾಯನಿಕಗಳನ್ನು ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸುತ್ತಿತ್ತು. ವೈಷ್ಣವಿ, ಮಾಲ್ ಗಂಗಾ ಮತ್ತು ಎಆರ್ ಡೇರಿಯ ಮೂಲಕ, ಅದನ್ನು ಟಿಟಿಡಿಗೆ ( Tirumala Tirupati Devasthanams ) ತಲುಪಿಸುತ್ತಿತ್ತು ಎನ್ನುವ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ. ” ಜಗತ್ತಿನ ಹಿಂದೂ ಸಮುದಾಯಕ್ಕೆ ತಿರುಮಲ ತಿರುಪತಿ ದೇವಾಲಯ ಕೇವಲ ಯಾತ್ರಾಸ್ಥಳ ಮಾತ್ರವಲ್ಲ, ಅದೊಂದು ಆಧ್ಯಾತ್ಮಿಕ ತಾಣವೂ ಕೂಡಾ. ದೇವಾಲಯದ ಜಗತ್ಪ್ರಸಿದ್ದ ಲಡ್ಡು ಕೇವಲ ಸಿಹಿತಿಂಡಿಯಲ್ಲ, ಅದೊಂದು ಭಾವನೆ.

ಅದನ್ನು ನಾವು ನಮ್ಮ ಸ್ನೇಹಿತರು, ಕುಟುಂಬಸ್ಥರಿಗೆ ಮಾತ್ರವಲ್ಲ, ಪರಿಚಯ ಇಲ್ಲದವರಿಗೂ ಹಂಚುತ್ತೇವೆ ” ಎಂದು ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ. ಹಿಂದೂ ಸಮುದಾಯದಲ್ಲಿ ಸಾಮೂಹಿಕವಾಗಿ ತಿರುಪತಿ ದೇವರ ಮೇಲೆ ನಂಬಿಕೆಯನ್ನು ಇಟ್ಟಿದ್ದಾರೆ. ತಿರುಪತಿ ದೇವಾಲಯ ಎನ್ನುವುದು ಭಕ್ತಿಯ ಪ್ರತೀಕವಾಗಿದೆ. ಪ್ರತೀ ವರ್ಷ ಸುಮಾರು ಎರಡೂವರೆ ಕೋಟಿ ಭಕ್ತರು ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಸನಾತನ ಧರ್ಮದ ಭಾವನೆಗಳೂ ಮತ್ತು ಆಚರಣೆಗಳನ್ನು ಅಪಹಾಸ್ಯ ಮಾಡಿದಾಗ, ಅದು ಬರೀ ನೋವನ್ನು ತರುವುದಿಲ್ಲ, ಭಕ್ತರ ನಂಬಿಕೆ ಮತ್ತು ಭಕ್ತಿಯನ್ನು ಛಿದ್ರಗೊಳಿಸುತ್ತದೆ ಎಂದು ಪವನ್ ಕಲ್ಯಾಣ್ ಬೇಸರ ವ್ಯಕ್ತ ಪಡಿಸಿದ್ದಾರೆ. ಸನಾತನ ಧರ್ಮ ಅತ್ಯಂತ ಪ್ರಾಚೀನ ಮತ್ತು ವೇಗವಾಗಿ ಬೆಳೆಯುತ್ತಿರುವ ಧರ್ಮಗಳಲ್ಲಿ ಒಂದಾಗಿದೆ. ತಿರುಪತಿ ಅಥವಾ ಯಾವುದೇ ದೇವಾಲಯಗಳಿರಬಹುದು, ಹಿಂದುತ್ವವನ್ನು ಅಪಹಾಸ್ಯ ಮಾಡುವ ವಿದ್ಯಮಾನಗಳು ಹೆಚ್ಚಾಗುತ್ತಿವೆ.

ಎಲ್ಲರ ಒಮ್ಮತದಿಂದ ’ಸನಾತನ ಧರ್ಮ ಪರಿರಕ್ಷಣಾ ಬೋರ್ಡ್’ ಸ್ಥಾಪಿಸುವ ಸಮಯ ಹತ್ತಿರ ಬಂದಿದೆ ಮತ್ತು ಅದಕ್ಕಾಗಿ ನಾವು ಒತ್ತಾಯಿಸಬೇಕಾಗಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಪವನ್ ಕಲ್ಯಾಣ್ ಅವರ ಟ್ವೀಟ್ ವೈರಲ್ ಆಗುತ್ತಿದ್ದು, ಒಂದು ಗಂಟೆಯಲ್ಲೇ ಸುಮಾರು 2.2 ಲಕ್ಷ ವೀವ್ಸ್ ಅನ್ನು ಪಡೆದುಕೊಂಡಿದೆ. ಜೊತೆಗೆ, ನೂರಾರು ಕಾಮೆಂಟುಗಳು ಪವನ್ ಕಲ್ಯಾಣ್ ಟ್ವೀಟಿಗೆ ಬಂದಿದೆ.

ಲಡ್ಡುವಿಗಾಗಿ, ಟಿಟಿಡಿಯೇ ಬೃಹತ್ ಗೋಶಾಲೆಯನ್ನು ನಿರ್ಮಿಸಲಿ ಎನ್ನುವ ಸಲಹೆಯೊಂದು, ಅವರ ಟ್ವೀಟಿಗೆ ಬಂದಿದೆ. ಭೋಲೆಬಾಬಾ ಅರ್ಗಾನಿಕ್ ಎನ್ನುವ ಹೆಸರಿನ ಡೇರಿಯು, 2019 – 2024ರ ಅವಧಿಯಲ್ಲಿ ಒಂದೇ ಒಂದು ಹನಿ ಹಾಲು ಅಥವಾ ಬೆಣ್ಣೆಯನ್ನು ಪಡೆಯದಿದ್ದರೂ, 68 ಲಕ್ಷ ಕೆಜಿ ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡಿತ್ತು. ತಿರುಪತಿ ಲಡ್ಡು ಕಲಬೆರಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ.”

Leave a comment

Leave a Reply

Your email address will not be published. Required fields are marked *

Related Articles

ಐಟಿ ಉದ್ಯೋಗಿಗಳಿಗೆ ‘ಆರ್ಬಿಟ್ ವಾಲೆಟ್ ರೂಪೇ ಕಾರ್ಡ್’ ಮೂಲಕ 1,500 ರೂ. ಮೆಟ್ರೋ ಪ್ರೋತ್ಸಾಹಧನ

ಬೆಂಗಳೂರು:250 ಐಟಿ ಉದ್ಯೋಗಿಗಳಿಗೆ ತಲಾ 1,500 ರೂ ಮೌಲ್ಯದ ಮೆಟ್ರೋ ಪ್ರೋತ್ಸಾಹಧನವನ್ನು ‘ಆರ್ಬಿಟ್ ವಾಲೆಟ್ ರೂಪೇ...

ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಏರಿಕೆ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಹೈಬ್ರಿಡ್

ಹೊಸದಿಲ್ಲಿ : ವಾಯುಮಾಲಿನ್ಯದ ಮಟ್ಟ ‘ಅತ್ಯಂತ ಕೆಟ್ಟ’ ದಿಂದ ‘ಭಯಾನಕ’ ವರ್ಗಕ್ಕೆ ತಲುಪಿದೆ ದಿಲ್ಲಿ ವಾಯುಮಾಲಿನ್ಯ...

ದೆಹಲಿ ಸ್ಫೋಟಕ್ಕೂ ಪುಲ್ವಾಮಾ ದಾಳಿಗೂ ನಂಟು? ಬಹು ಆಯಾಮಗಳಲ್ಲಿ ತನಿಖೆ

ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಭಯೋತ್ಪಾದ ದಾಳಿ ಸಂಭವಿಸಿದ್ದು, ಈ ದಾಳಿಯಲ್ಲಿ ಆತ್ಮಹತ್ಯ ಬಾಂಬರ್ ಆಗಿದ್ದ ಉಗ್ರ...

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲು ಸಿದ್ಧತೆ

ಬೆಂಗಳೂರು : 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣದಿಂದ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆ ರಸ್ತೆಯುದ್ದಕ್ಕೂ...