ಉಡುಪಿಗೆ ಏರ್‌ಪೋರ್ಟ್‌ ಬೇಕೆನ್ನುವ ಎರಡು ದಶಕಗಳ ಕನಸಿಗೆ ಈಗ ರೆಕ್ಕೆಪುಕ್ಕ

12

ಪಡುಬಿದ್ರಿಯಲ್ಲಿ ಏರ್‌ಪೋರ್ಟ್‌: ಉಡುಪಿಗೆ ಬರುವ ಪ್ರಧಾನಿ ಮೋದಿಗೂ ಏರ್‌ಪೋರ್ಟ್‌ ಬೇಡಿಕೆ ಸಲ್ಲಿಕೆಯಾಗಲಿದೆ. ಬಜ್ಪೆ ಮತ್ತು ಪ್ರಸ್ತಾಪಿತ ವಿಮಾನ ನಿಲ್ದಾಣ ಪ್ರದೇಶವಾದ ಪಡುಬಿದ್ರಿ ನಡುವೆ ಕೇವಲ 30 ಕಿ.ಮೀ. ಅಂತರವಿದೆ. ಉಡುಪಿಗೆ ಏರ್ಪೋರ್ಟ್ ಬೇಡಿಕೆ

ಉಡುಪಿ: ಶ್ರೀಕೃಷ್ಣನ ನಾಡು ಉಡುಪಿಗೆ ಏರ್‌ಪೋರ್ಟ್‌ ಬೇಕೆನ್ನುವ ಎರಡು ದಶಕಗಳ ಕನಸಿಗೆ ಈಗ ರೆಕ್ಕೆಪುಕ್ಕ ಮೂಡಿದೆ. ಪಡುಬಿದ್ರಿಯಲ್ಲಿ ಏರ್‌ಪೋರ್ಟ್‌ ನಿರ್ಮಾಣಕ್ಕಾಗಿ ರಾಜ್ಯ ಸರಕಾರದ ಐಡಿಡಿ (ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ)ಗೆ ಉಡುಪಿ ಜಿಲ್ಲಾಡಳಿತ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿದೆ. ಸಾಮಾನ್ಯ ನಾಗರಿಕರೂ ವಿಮಾನದಲ್ಲಿ ಪ್ರಯಾಣಿಸುವ ಕನಸು ಬಿತ್ತಿದ ಪ್ರಧಾನಿ ಮೋದಿ ಆಶಯದಂತೆ ಜಾರಿಗೆ ಬಂದ ಉಡಾನ್‌ 1 (ಉಡೇ ದೇಶ್‌ ಕಾ ಆಮ್‌ ನಾಗರಿಕ್‌) ಬಳಿಕ ಉಡಾನ್‌ 2 ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣದ ಚಿಂತನೆ ನಡೆದಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ನ.28ರಂದು ನಡೆಯುವ ಲಕ್ಷ ಕಂಠ ಗೀತಾಗಾಯನ, ಪಾರಾಯಣ ಹಾಗೂ ಸುವರ್ಣಮಯ ತೀರ್ಥಮಂಟಪ ಹಾಗೂ ಸುವರ್ಣ ಹೊದಿಸಿದ ಕನಕನ ಕಿಂಡಿಯ ಸಮರ್ಪಣೆಗೆ ಬರುವ ಪ್ರಧಾನಿ ಮೋದಿಗೂ ಏರ್‌ಪೋರ್ಟ್‌ ಬೇಡಿಕೆ ಸಲ್ಲಿಕೆಯಾಗಲಿದೆ. ತಾಂತ್ರಿಕ ಸಮಸ್ಯೆ ಏನು?: ಬಜ್ಪೆ ವಿಮಾನ ನಿಲ್ದಾಣಕ್ಕೂ ಉಡುಪಿ ಜಿಲ್ಲೆಯಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣಕ್ಕೂ ಇರುವ ಅಂತರವನ್ನು ಲೆಕ್ಕ ಹಾಕಿ 150 ನಾಟಿಕಲ್‌ ಒಳಗಿರುವ ಹಿನ್ನೆಲೆಯಲ್ಲಿ ಅನುಮತಿಯ ತಕರಾರು ತೆಗೆಯಲಾಗುತ್ತಿದೆ.

ಬಜ್ಪೆ ಮತ್ತು ಪ್ರಸ್ತಾಪಿತ ವಿಮಾನ ನಿಲ್ದಾಣ ಪ್ರದೇಶವಾದ ಪಡುಬಿದ್ರಿ ನಡುವೆ ಕೇವಲ 30 ಕಿ.ಮೀ. ಅಂತರವಿದೆ. ಹೀಗಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಪಡುಬಿದ್ರಿಯನ್ನು ಟ್ವಿನ್‌ ಏರ್‌ಪೋರ್ಟ್‌ ಅಥವಾ ಟರ್ಮಿನಲ್‌ 2 (ಮುಂಬಯಿ, ದಿಲ್ಲಿ ಮಾದರಿ) ನೆಲೆಯಲ್ಲಿ ಪರಿಗಣಿಸಲು ಹಾಗೂ ಮಂಗಳೂರಿನಲ್ಲಿ ರನ್‌ವೇ ವಿಸ್ತರಣೆ ಅಸಾಧ್ಯವೆನ್ನುವುದನ್ನು ಮನವಿಯಲ್ಲಿ ಮನದಟ್ಟು ಮಾಡುವ ಯತ್ನ ನಡೆದಿದೆ. ಅದಾನಿ ಯುಪಿಸಿಎಲ್‌ ಎರಡನೇ ಹಂತದ ಉಷ್ಣ ವಿದ್ಯುತ್‌ ಸ್ಥಾವರ ಯೋಜನೆಯನ್ನು ಜನರ ವಿರೋಧ ಹಾಗೂ ಪರಿಸರ ತಕರಾರಿನ ಹಿನ್ನೆಲೆಯಲ್ಲಿ ಕೈಬಿಟ್ಟಿದೆ.

546 ಎಕರೆ ಭೂಮಿ ಕೆಐಎಡಿಬಿ ಕೈಯಲ್ಲಿದೆ. ಜತೆಗೆ ಖಾಸಗಿ, ಸರಕಾರಿ ಭೂಮಿ ಸೇರಿದರೆ ಒಟ್ಟು 935 ಎಕರೆ ಲಭ್ಯವಾಗಲಿದೆ. ಮಂಗಳೂರು, ಉಡುಪಿಯಲ್ಲಿ ವೆಚ್ಚ ಎಷ್ಟು? *ಮಂಗಳೂರು ರನ್‌ವೇ ವಿಸ್ತರಣೆ ನಿಟ್ಟಿನಲ್ಲಿ ಲ್ಯಾಂಡ್‌ ಫಿಲ್ಲಿಂಗ್‌ ಸಹಿತ ಒಟ್ಟಾರೆ 33 ಸಾವಿರ ಕೋಟಿ ರೂ. ಅಗತ್ಯವಿದೆ. *ಪಡುಬಿದ್ರಿಯಲ್ಲಿ 500 ರಿಂದ 1,000 ಎಕರೆ ಭೂಮಿ ಲಭ್ಯವಿರುವ ಹಿನ್ನೆಲೆಯಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯ.

ಗ್ರೀನ್‌ ಸಿಗ್ನಲ್‌ ಸಿಕ್ಕರೆ ಅಧ್ಯಯನ ವರದಿ ಹೆಲಿ ಟ್ಯಾಕ್ಸಿ ಸಹಿತ ಟೂರಿಸಂ ಹಬ್‌ ನಿರ್ಮಾಣಕ್ಕೂ ಅವಕಾಶ ಮಾಡಿಕೊಡುವ ಪಡುಬಿದ್ರಿಯಲ್ಲಿ ಏರ್‌ಪೋರ್ಟ್‌ ಸಾಧ್ಯತೆ, ಸಾಧಕ-ಬಾಧಕ, ಲಾಭ-ನಷ್ಟಗಳ ಅಧ್ಯಯನ ವರದಿ ಅಗತ್ಯವಿದೆ. ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೂ ವಿಮಾನ ನಿಲ್ದಾಣ ಪೂರಕವಾಗಲಿದೆ. ರಸ್ತೆ, ರೈಲಿನಲ್ಲಿ ಉಡುಪಿಗೆ ಬರುವ ಪ್ರಯಾಣಿಕರ ಒತ್ತಡವೂ ಕಡಿಮೆಯಾಗಲಿದೆ.

ಉಡುಪಿ, ಮಂಗಳೂರನ್ನು ಐಟಿ ಸಿಲಿಕಾನ್‌ ಸಿಟಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಪರ್ಧೆ ಇಲ್ಲ. ಪರಸ್ಪರ ಸೌಹಾರ್ದ ಅಗತ್ಯ. ಪಡುಬಿದ್ರಿಯಲ್ಲಿ ಏರ್‌ಪೋರ್ಟ್‌ ನಿರ್ಮಾಣದಿಂದ ಉದ್ಯೋಗ ಸೃಷ್ಟಿ, ಆರ್ಥಿಕತೆ ವೃದ್ಧಿಯಾಗಲಿದೆ ಎಂದಿದ್ದಾರೆ ಸ್ವರೂಪಾ ಟಿ.ಕೆ., ಜಿಲ್ಲಾಧಿಕಾರಿ, ಉಡುಪಿ ಸಾಸ್ತಾನದ ಕಾರ್ಕಡದಲ್ಲಿರುವ 600 ಎಕರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವವಿತ್ತು.

ಜಿಲ್ಲಾಉಸ್ತುವಾರಿ ಸಚಿವ ಡಾ.ವಿ.ಎಸ್‌.ಆಚಾರ್ಯರ ಜತೆ ಚರ್ಚಿಸಿ ಬೈಂದೂರಿನ ಒತ್ತಿನೆಣೆಯಲ್ಲಿ ಸೂಕ್ತವೆಂದು ವರದಿ ಕೊಟ್ಟಿದ್ದೆ. ಮಂಗಳೂರಿನಲ್ಲಿ ಏರ್‌ ಬಸ್‌ ಇಳಿಯುತ್ತಿಲ್ಲ, ಹೀಗಾಗಿ ಅದು ಡೊಮೆಸ್ಟಿಕ್‌ ಏರ್‌ಪೋರ್ಟ್‌, ಪಡುಬಿದ್ರಿಯಲ್ಲಿ ಇಂಟರ್‌ನ್ಯಾಷನಲ್‌ ಏರ್‌ ಪೋರ್ಟ್‌ ಸೂಕ್ತ ಎಂದಿದ್ದಾರೆ. ಕೆ.ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಂಸದ”

Leave a comment

Leave a Reply

Your email address will not be published. Required fields are marked *

Related Articles

ಕೆಂಪು ಕಲ್ಲಿನ ದರ ಕಡಿಮೆ ಮಾಡಿ ಬಡ ಜನರಿಗೆ ನೆರವಾಗುವಂತೆ ಜಿಲ್ಲಾಧಿಕಾರಿಗಳಿಗೆ:: ನವೀನ್ ಸಾಲಿಯನ್ ಮನವಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ರಾಜಧನ ಇಳಿಕೆ...

ಐಟಿ ಉದ್ಯೋಗಿಗಳಿಗೆ ‘ಆರ್ಬಿಟ್ ವಾಲೆಟ್ ರೂಪೇ ಕಾರ್ಡ್’ ಮೂಲಕ 1,500 ರೂ. ಮೆಟ್ರೋ ಪ್ರೋತ್ಸಾಹಧನ

ಬೆಂಗಳೂರು:250 ಐಟಿ ಉದ್ಯೋಗಿಗಳಿಗೆ ತಲಾ 1,500 ರೂ ಮೌಲ್ಯದ ಮೆಟ್ರೋ ಪ್ರೋತ್ಸಾಹಧನವನ್ನು ‘ಆರ್ಬಿಟ್ ವಾಲೆಟ್ ರೂಪೇ...

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲು ಸಿದ್ಧತೆ

ಬೆಂಗಳೂರು : 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣದಿಂದ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆ ರಸ್ತೆಯುದ್ದಕ್ಕೂ...

ರೈಲು ಪ್ರಯಾಣಿಕರ ಸುರಕ್ಷತೆಗಾಗಿ  ‘ಆಪರೇಷನ್‌ ರಕ್ಷಿತ’ ಕಾರ್ಯಾಚರಣೆ ಆರಂಭ

 ಪೆರ್ಲ:ರೈಲು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ‘ಆಪರೇಷನ್‌ ರಕ್ಷಿತ’ ಕೈಗೊಳ್ಳಲಾಗಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ತಪಾಸಣೆಗಳನ್ನು ನಡೆಸಲಾಗುತ್ತಿದೆ....