ಅಮೆರಿಕಾದ ಚಿತ್ರವಿಚಿತ್ರ ಸುಂಕದ ಹೇರಿಕೆಯ ನಡುವೆಯೂ, ಐಫೋನ್ ರಫ್ತಿನಲ್ಲಿ ಭಾರತ ಗಮನಾರ್ಹ ಅಭಿವೃದ್ದಿಯನ್ನು ಸಾಧಿಸಿದೆ.

28

2025-26ರ ಮೊದಲಾರ್ಧದಲ್ಲೇ $10 ಬಿಲಿಯನ್ ಮೌಲ್ಯದ ರಫ್ತು ಕಳೆದ ವರ್ಷಗಳಿಗಿಂತ ಶೇ.75ರಷ್ಟು ಪ್ರಗತಿ; ರಫ್ತು ದ್ವಿಗುಣ ಪ್ರಸಕ್ತ ಸೆಪ್ಟೆಂಬರ್‌ನಲ್ಲಿ ಶೇ.155ರಷ್ಟು ಫೋನ್‌ ಉತ್ಪಾದನೆ ಹೆಚ್ಚಳ ಹಬ್ಬದ ಋತುವಿನಲ್ಲಿ ಹೆಚ್ಚುತ್ತಲೇ ಇದೆ ಜಾಗತಿಕ ಸಾಗಣೆ : ಐಫೋನ್ ರಫ್ತಿನಲ್ಲಿ ಜಾಗತಿಕ ದಾಖಲೆ ಬರೆದ ಭಾರತ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳಲ್ಲಿ ವಿಶಿಷ್ಠ ಗುಣಮಟ್ಟದಿಂದ ಜಾಗತಿಕವಾಗಿ ಛಾಪು ಮೂಡಿಸಿರುವ ಭಾರತ ಇದೀಗ ಐಫೋನ್‌ ರಫ್ತಿನಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. 2025-26ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲೇ ಬರೋಬ್ಬರಿ $10 ಬಿಲಿಯನ್ ಪ್ರಮಾಣದ ಐಫೋನ್ ರಫ್ತು ಮಾಡಿ ಇತಿಹಾಸ ನಿರ್ಮಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಿಂದ ಪ್ರತಿ ವಲಯದಲ್ಲೂ ಮುನ್ನಡೆ ಸಾಧಿಸುತ್ತಿರುವ ಭಾರತ ಐ ಫೋನ್‌ ರಫ್ತಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತದಲ್ಲಿ ಅಭೂತಪೂರ್ವ ಎನ್ನುವಂತೆ ಶೇ.75ರಷ್ಟು ಪ್ರಗತಿಗೈದಿದೆ. ಭಾರತದಲ್ಲಿ ನಿರ್ಮಾಣಗೊಳ್ಳುವ ಐಫೋನ್ ಗಳು ರಫ್ತಾಗುವ ರಾಷ್ಟ್ರಗಳ ಪೈಕಿ, ಅಮೆರಿಕಾ ಮಂಚೂಣಿಯಲ್ಲಿದೆ. ಭಾರತದ ಬದಲು, ಅಮೆರಿಕಾದಲ್ಲೇ ಐಫೋನ್ ಘಟಕ ನಿರ್ಮಿಸುವಂತೆ, ನೇರವಾಗಿ ಆಪಲ್ ಸಂಸ್ಥೆಗೆ ಅಮೆರಿಕಾದ ಅಧ್ಯಕ್ಷ ತಾಕೀತು ಮಾಡಿದ್ದರು.   

ಆಪಲ್ ದಾಖಲೆಯನ್ನು ಸಾಧಿಸಿದೆ: ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಭಾರತದಿಂದ $10 ಬಿಲಿಯನ್ (ಸುಮಾರು ₹88,730 ಕೋಟಿ) ಮೌಲ್ಯದ ಐಫೋನ್‌ಗಳು ರಫ್ತಾಗಿವೆ. ಕಳೆದ ವರ್ಷ ಇದರ ಅರ್ಧದಷ್ಟು ಅಂದರೆ $5.71 ಬಿಲಿಯನ್‌ ಮೌಲ್ಯದ ಐಫೋನ್‌ ರಫ್ತಾಗಿತ್ತು. ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮೊಬೈಲ್‌ ಬಳಕೆದಾರರ ನಿರೀಕ್ಷೆಯಂತೆ ಕಂಪನಿಗಳು ಹೊಸ ಮಾದರಿಗಳನ್ನು ಪರಿಚಯಿಸಿದ್ದರಿಂದ ಐಫೋನ್‌ ರಫ್ತು ದ್ವಿಗುಣಗೊಂಡಿದೆ.

$1.25 ಬಿಲಿಯನ್‌ಗೆ ತಲುಪಿದೆ: ದೇಶೀಯ ಬೇಡಿಕೆ ಹೊರತಾಗಿಯೂ ಐಫೋನ್‌ ರಫ್ತು ಜಾಗತಿಕವಾಗಿ ಬಹು ದೊಡ್ಡ ಪ್ರಮಾಣದಲ್ಲಿ ಪೂರೈಸಲಾಗಿದೆ. ಆಪಲ್ $1.25 ಬಿಲಿಯನ್ ಮೌಲ್ಯದ ಮಾರಾಟವನ್ನು ಮಾಡಿ ದಾಖಲೆ ನಿರ್ಮಿಸಿದೆ. ಹಬ್ಬದ ಋತುವಿನಲ್ಲಿ ಜಾಗತಿಕ ಸಾಗಣೆ ಹೆಚ್ಚಾಗುತ್ತಲೇ ಇದೆ.

$10 ಬಿಲಿಯನ್‌ನತ್ತ ದಾಪುಗಾಲು: ಪ್ರಸಕ್ತ ವರ್ಷ ಹಬ್ಬದ ಋತುವಿನಲ್ಲಿ ಶೇ.80ರಷ್ಟು ಅಂದರೆ $17.5 ಬಿಲಿಯನ್ ಮೌಲ್ಯದ ಐಫೋನ್‌ಗಳು ರಫ್ತಾಗಲು ಸಿದ್ಧವಾಗಿವೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಭಾರತದಿಂದ ರಫ್ತಾಗುವ ಪ್ರಮಾಣ ಪ್ರತಿ ವರ್ಷವೂ ದುಪ್ಪಟ್ಟು ಹೆಚ್ಚುತ್ತಲೇ ಇದೆ. 2023ರ ಏಪ್ರಿಲ್‌-ಸೆಪ್ಟೆಂಬರ್‌ನಲ್ಲಿ $1.7 ಬಿಲಿಯನ್‌, 2024ರಲ್ಲಿ $4.3 ಬಿಲಿಯನ್‌, 2025ರಲ್ಲಿ $5.7 ಬಿಲಿಯನ್‌ ಹಾಗೂ 2026ರಲ್ಲಿ $10 ಬಿಲಿಯನ್‌ ಐಫೋನ್‌ ಉತ್ಪಾದನೆ-ರಫ್ತಿನತ್ತ ದಾಪುಗಾಲಿಟ್ಟಿದೆ.

ಭಾರತದಲ್ಲಿನ 5 ಐಫೋನ್ ಕಾರ್ಖಾನೆಗಳು ಯುಎಸ್‌ಗೆ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ $8.43 ಬಿಲಿಯನ್ ಸ್ಮಾರ್ಟ್‌ಫೋನ್ಗಳನ್ನು ಪೂರೈಸಿವೆ. ಇದಲ್ಲದೇ, ಮೊಬೈಲ್‌ ಉತ್ಪಾದನಾ ಘಟಕಗಳು ದೇಶದಲ್ಲಿ 3.50 ಲಕ್ಷ ಉದ್ಯೋಗ ಸೃಷ್ಟಿಸಿವೆ. 1.20 ಲಕ್ಷ ನೇರ ಉದ್ಯೋಗಗಳನ್ನು ಒದಗಿಸಿಕೊಟ್ಟಿವೆ.

ಡೊನಾಲ್ಡ್ ಟ್ರಂಪ್ ಎಚ್ಚರಿಕೆಗೆ ಮಣಿದ ಆಪಲ್‌, ಅಮೆರಿಕದಲ್ಲಿ 600 ಬಿಲಿಯನ್ ಡಾಲರ್‌ ಹೂಡಿಕೆ! ಭಾರತದಲ್ಲಿ ಐಫೋನ್‌ ತಯಾರಿಗೆ ಕೊಕ್ಕೆ? ಭಾರತೀಯ ಉತ್ಪನ್ನಕ್ಕೆ ಎಲ್ಲಿಲ್ಲದ ಬೇಡಿಕೆ: ಇದೇ ಮೊದಲ ಬಾರಿಗೆ ಪ್ರೊ, ಪ್ರೊ ಮ್ಯಾಕ್ಸ್ ಮತ್ತು ಏರ್ ಸೇರಿದಂತೆ ಎಲ್ಲಾ ಐಫೋನ್ ಮಾದರಿಗಳು ಭಾರತೀಯ ಕಾರ್ಖಾನೆಗಳಲ್ಲಿ ತಯಾರಾಗುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತಿವೆ.

ಈ ಹಿಂದೆ ಭಾರತದಲ್ಲಿ ಸಿದ್ಧಪಡಿಸುವ ಪ್ರೊ ಮಾದರಿಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಕೆಲವು ತಿಂಗಳುಗಳೇ ಬೇಕಿತ್ತು. ಆದರೆ, ಆ ಕಾಲವೀಗ ಬದಲಾಗಿ ಭಾರತೀಯ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತಿದೆ. ಆಪಲ್ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್ ಬಿಡುಗಡೆ ಮಾಡುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆಯಿಂದಾಗಿ ದೀಪಾವಳಿಯ ನಂತರ ಆಪಲ್‌ ಫೋನ್‌ ರಫ್ತು ಮತ್ತಷ್ಟು ವೇಗ ಪಡೆಯುತ್ತದೆ ಎಂಬುದು ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆ ತಜ್ಞರ ಅಭಿಪ್ರಾಯ.”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...