ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಿಂದ ಮುಂಬೈ ಮೂಲದ ಐಟಿ ಕಂಪೆನಿ  ಮಾರುಕಟ್ಟೆಯಿಂದ ಬ್ಯಾನ್

29

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ ಖಡಕ್ ನಿರ್ಧಾರ ಮುಂಬೈ ಮೂಲದ ಐಟಿ ಕಂಪೆನಿಯನ್ನು ಮಾರುಕಟ್ಟೆಯಿಂದ ಬ್ಯಾನ್ ಗೊಳಿಸಿದ ಸೆಬಿ ಹತ್ತೊಂಬತ್ತು ಕೋಟಿ ಹಣ ದುರುಪಯೋಗದ ಆರೋಪದ ಹಿನ್ನಲೆಯಲ್ಲಿ ಈ ನಿರ್ಧಾರ 17 ವರ್ಷದ ಹಿಂದಿನ ಈ ಐಟಿ ಕಂಪೆನಿಯನ್ನು ಮಾರುಕಟ್ಟೆಯಿಂದ ’ನಿಷೇಧಿಸಿದ’ SEBI ಮುಂಬಯಿ : ಹಣ ದುರುಪಯೋಗದ ಹಿನ್ನಲೆಯಲ್ಲಿ ಮುಂಬೈ ಮೂಲದ ಐಟಿ ಸಂಸ್ಥೆ ಮತ್ತು ಆ ಸಂಸ್ಥೆಯ ಮೂವರು ಪ್ರಮೋಟರ್ಸ್ ಗಳನ್ನು ಸೆಬಿ, ಮಾರುಕಟ್ಟೆಯಿಂದ ನಿಷೇಧಿಸಿದೆ.

ಐಪಿಒ  ಹಣವನ್ನು ದುರುಪಯೋಗ ಪಡಿಸಿಕೊಂಡ ಈ ಹಿನ್ನಲೆಯಲ್ಲಿ ಈ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ  ಮುಂಬೈ ಮೂಲದ ಐಟಿ ಕಂಪೆನಿ ಸಿನಾಪ್ಟಿಕ್ಸ್ ಟೆಕ್ನಾಲಜೀಸ್ ಸಂಸ್ಥೆಯನ್ನು ಮಾರುಕಟ್ಟೆಯಿಂದ ಬ್ಯಾನ್ ಮಾಡಿದೆ. ಈ ಸಂಸ್ಥೆ, ಹದಿನೇಳು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿತ್ತು. ಐಪಿಒದಲ್ಲಿ ಸಂಗ್ರಹವಾದ ಹತ್ತೊಂಬತ್ತು ಕೋಟಿ ರೂಪಾಯಿ ದುರುಪಯೋಗದ ಆರೋಪ ಈ ಸಂಸ್ಥೆಯ ಮೇಲಿದೆ.   

ಸಿನಾಪ್ಟಿಕ್ಸ್ ಟೆಕ್ನಾಲಜೀಸ್ ಮತ್ತು ಅದರ ಮೂವರು ಪ್ರಮೋಟರ್ಸ್ ಗಳಾದ ಜತಿನ್ ಷಾ, ಜಗಮೋಹನ್ ಮಣಿಲಾಲ್ ಷಾ ಮತ್ತು ಜಾನ್ವಿ ನತಿನ್ ಷಾ, ಅವರನ್ನೂ ಸೆಬಿ ಮಾರುಕಟ್ಟೆಯಿಂದ ನಿಷೇಧಿಸಿದೆ. ಆರೋಪ ಬಂದ ಹಿನ್ನಲೆಯಲ್ಲಿ ಸೆಬಿ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಸೆಬಿಯ ಮೇ 6, 2025ರ ಮಧ್ಯಂತರ ಆದೇಶ ಇದನ್ನು ಖಚಿತ ಪಡಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಈ ನಿಷೇಧ ಜಾರಿಯಲ್ಲಿ ಇರುತ್ತದೆ. ಕಂಪೆನಿಯು, ಫಸ್ಟ್ ಓವರ್ ಸೀಸ್ ಕ್ಯಾಪಿಟಲ್ ಜೊತೆ ಸೇರಿ, ಐಪಿಒ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ. ಷೇರುಗಳ ವಹಿವಾಟು ಆರಂಭಗೊಳ್ಳುವ ಒಂದು ದಿನದ ಮೊದಲು ಎಸ್ಕ್ರೋ ನಿಯಮವನ್ನು ಸಂಸ್ಥೆ ಉಲ್ಲಂಘಿಸಿದೆ ಎಂದು ಸೆಬಿ ಸ್ಪಷ್ಟನೆಯನ್ನು ನೀಡಿದೆ.

ಸೆಬಿ ಆಡಳಿತ ಮಂಡಳಿಯ ಸದಸ್ಯ ಕಮಲೇ ವರ್ಶ್ನಿ ಅವರು ಮೇ ಆರರಂದು ಮಧ್ಯಂತರ ಆದೇಶವನ್ನು ನೀಡಿದ್ದರು. ಸಿನಾಪ್ಟಿಕ್ಸ್ ಟೆಕ್ನಾಲಜೀಸ್ ಸಂಸ್ಥೆ 2008ರಲ್ಲಿ ಸ್ಥಾಪನೆಗೊಂಡಿತ್ತು. ಇದು ಮುಂಬೈ ಮೂಲದ ಸಂಸ್ಥೆಯಾಗಿದ್ದು, ನೆಟ್ವರ್ಕ್ ಸೊಲ್ಯೂಶನ್ ಸೇವೆಯನ್ನು ನೀಡುತ್ತದೆ. ಕಂಪೆನಿಯಲ್ಲಿ 450ಕ್ಕೂ ಹೆಚ್ಚು ಜನ ಉದ್ಯೋಗಿಗಳಿದ್ದಾರೆ. ಸಂಸ್ಥೆಯಲ್ಲಿನ ವೆಬ್ ಸೈಟ್ ಪ್ರಕಾರ, ಸಂಸ್ಥೆಯು ಗ್ರಾಹಕರಿಗೆ ನೆಟ್ವರ್ಕ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೂಡಿಕೆಯ ಮೇಲಿನ ಆದಾಯವನ್ನು ಹೆಚ್ಚಿಸಲು, ಡಿಜಿಟಲ್ ಕನ್ವರ್ಷನ್ ಮೇಲೆ ಹೆಚ್ಚಿನ ಗಮನವನ್ನು ಹರಿಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.

ಇನ್ನು, ಜೂನ್ ಮೂವತ್ತರಿಂದ ಜುಲೈ ಐದರವರೆಗೆ  ವಿಂಡೋವನ್ನು ತೆರೆದಿತ್ತು. ಜುಲೈ 13, 2023 ರಂದು ಎನ್ಎಸ್ಇ ಎಸ್ಎಂಇ ಎಕ್ಸ್‌ ಚೇಂಜ್‌ ನಲ್ಲಿ ತನ್ನ ವಹಿವಾಟನ್ನು ಆರಂಭಿಸಿತ್ತು. ಐಪಿಒದಲ್ಲಿ ಸಂಗ್ರಹವಾದ ಹತ್ತೊಂಬತ್ತು ಕೋಟಿ ರೂಪಾಯಿಯನ್ನು, ಫಸ್ಟ್ ಓವರ್ ಸೀಸ್ ಕ್ಯಾಪಿಟಲ್ ಜೊತೆ ಸೇರಿಕೊಂಡು ದುರುಪಯೋಗ ಪಡಿಸಿಕೊಂಡಿದೆ ಎನ್ನುವ ಆರೋಪ ಸಂಸ್ಥೆಯ ಮೇಲಿದೆ. ಈ ಮೊತ್ತವನ್ನು, ನಿರ್ವಹಣಾ ಶುಲ್ಕ, ರಿಜಿಸ್ಟ್ರಾರ್ ಶುಲ್ಕ, ಕಮಿಷನ್ ಎನ್ನುವ ನೆಪದಲ್ಲಿ ವರ್ಗಾಯಿಸಿಕೊಂಡಿದೆ.

ಈ ಖರ್ಚುಗಳಿಗೆ ಎಂಬತ್ತು ಲಕ್ಷ ರೂಪಾಯಿ ಎಂದು ಕಂಪೆನಿಯು ಮೊದಲು ಹೇಳಿಕೊಂಡಿತ್ತು. ಇಗ, ಎಂಬತ್ತು ಲಕ್ಷ ರೂಪಾಯಿ ಇದ್ದದ್ದು ಹತ್ತೊಂಬತ್ತು ಕೋಟಿ ರೂಪಾಯಿ ಆಗಿದೆ. ಇದು, ಈ ಹಿಂದೆ ಘೋಷಿಸಿದ ಮೊತ್ತಕ್ಕೆ ತದ್ವಿರುದ್ದವಾಗಿದೆ ಎಂದು ಸೆಬಿ ಹೇಳಿದೆ. ಸೆಬಿಯ ಆರಂಭಿಕ ತನಿಖೆಯ ಅನ್ವಯ, ದುರುಪಯೋಗ ಪಡಿಸಿಕೊಂಡಿರುವ ಹಣವು ಹೊಸ ಷೇರುಗಳ ವಿತರಣೆಯ ಮೂಲಕ ಸಂಗ್ರಹಿಸಿದ 35.08 ಕೋಟಿ ರೂಪಾಯಿಗಳಲ್ಲಿ ಸುಮಾರು 54% ರಷ್ಟಿದೆ ಎಂದು ಸೆಬಿ ಹೇಳಿದೆ. ಸೆಬಿಯ ಮಧ್ಯಂತರ ಆದೇಶವು ಜುಲೈ 12, 2023 ರಂದು ಈ ಹಣ ವರ್ಗಾವಣೆ ನಡೆದಿದೆ ಎಂದು ಹೇಳುತ್ತಿದೆ.”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...