ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 3ರಷ್ಟು ತುಟ್ಟಿಭತ್ಯೆ (ಡಿಎ, ಡಿಆರ್) ಹೆಚ್ಚಳಕ್ಕೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡುವ ಸಾಧ್ಯತೆ ಇದೆ.
ಹಣದುಬ್ಬರ ಪರಿಣಾಮ ತಗ್ಗಿಸಿ, ಜೀವನ ಮಟ್ಟ ಸುಧಾರಿಸಲು ಇದು ಸಹಕಾರಿ. ದೀಪಾವಳಿ ಹಬ್ಬದ ಸನಿಹದಲ್ಲಿ ನಿರೀಕ್ಷಿಸಲಾಗಿದ್ದ ಈ ಘೋಷಣೆ ವಿಳಂಬವಾಗಿದೆ. 18,000 ರೂ. ಮೂಲ ವೇತನ ಪಡೆಯುವವರಿಗೆ ತಿಂಗಳಿಗೆ 540 ರೂ. ಹೆಚ್ಚುವರಿ ಸಿಗಲಿದ್ದು, ನೌಕರರ ಸಂಘಗಳು ಡಿಎ ಹೆಚ್ಚಳ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಹೈಲೈಟ್ಸ್: ಕೇಂದ್ರ ಸರ್ಕಾರವು ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ. ತುಟ್ಟಿಭತ್ಯೆ ಶೇಕಡಾ 3 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡುವ ಸಾಧ್ಯತೆ. ಈಗಾಗಲೇ ಕೇಂದ್ರ ಸರ್ಕಾರ ರೈಲ್ವೆ ನೌಕರರಿಗೆ ಕಾರ್ಯಕ್ಷಮತೆ ಆಧಾರಿತ ಬೋನಸ್ ಅನ್ನು ಅನುಮೋದಿಸಿದೆ.

ಹೊಸದಿಲ್ಲಿ: ರೈಲ್ವೆ ನೌಕರರಿಗೆ ಭರ್ಜರಿ ಬೋನಸ್ ನೀಡಿದ ಕೇಂದ್ರ ಸರ್ಕಾರವು ಇತರೆ ಎಲ್ಲಾ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಬುಧವಾರ ಕೇಂದ್ರ ಕ್ಯಾಬಿನೆಟ್ ತುಟ್ಟಿ ಭತ್ಯೆಯನ್ನು (ಡಿಎ, ಡಿಆರ್) ಶೇಕಡಾ 3 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಈ ಹೆಚ್ಚಳವು ಹಣದುಬ್ಬರದ ಪರಿಣಾಮಗಳನ್ನು ತಗ್ಗಿಸಲು ಮತ್ತು ನೌಕರರ ಜೀವನ ಮಟ್ಟ ಸುಧಾರಣೆಗೆ ಸಹಾಯ ಮಾಡುತ್ತದೆ. ದೀಪಾವಳಿ ಹಬ್ಬದ ಸನಿಹದಲ್ಲಿ ಈ ಘೋಷಣೆ ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿ ಅಧಿಸೂಚನೆಯಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.”

Leave a comment