ರಾಮನಗರ ಜಿಲ್ಲೆ ಚನ್ನಪಟ್ಟಣದ ಬಳಿ ಇರುವ ಜಾನಪದ ಲೋಕಕ್ಕೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗಿದೆ. ಸುಮಾರು ಹದಿನೈದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಇಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿದ ಲಕ್ಷಾಂತರ ಜನಪದ ವಸ್ತುಗಳಿವೆ. ಆದರೆ, ಹೆದ್ದಾರಿ ಮೇಲ್ದರ್ಜೆಗೆ ಏರಿದ ನಂತರ ಇದರ ವೈಭವ ಕಮ್ಮಿಯಾಗಿದೆ. ಅದಕ್ಕಾಗಿ, ಸಂಘಟನೆಗಳು, ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದೆ.

ಜಾನಪದ ಲೋಕದಲ್ಲಿ ಜನರಿಗೆ ಕರ್ನಾಟಕದ ಹಳ್ಳಿಯ ಜೀವನಶೈಲಿಯ ಸುಂದರ ಪರಿಚಯ ಕರ್ನಾಟಕದ ಜಾನಪದ ಕಲೆ, ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವ ವಸ್ತುಸಂಗ್ರಹಾಲಯ ಜಾನಪದ ಲೋಕದ ವೈಭವ ಮರಳಿ ತರಲು ಸಚಿವ ತಂಗಡಗಿ ಅವರಿಗೆ ಮನವಿ ಜನಪದ ಲೋಕದ ವೈಭವ ಮರಳಿ ತರಲು ಸಚಿವ ತಂಗಡಗಿ ಅವರಿಗೆ ಮನವಿ

ರಾಮನಗರ : ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿನ ಚನ್ನಪಟ್ಟಣದ ಬಳಿ ಇರುವ ಜಾನಪದ ಲೋಕಕ್ಕೆ ಪ್ರವಾಸಿಗರನ್ನು ಆಕರ್ಷಿಸಲು, ಹೊಸ ಯೋಜನೆಗೆ ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲೀಕರ ಸಂಘ ಹಾಗೂ ಬೆಂಗಳೂರಿನ ಹೋಟೆಲ್ ಮಾಲಿಕರ ಸಂಘ, ಸಿದ್ದರಾಮಯ್ಯನವರ ಸರ್ಕಾರದ ಸಚಿವರಿಗೆ ಮನವಿಯನ್ನು ಸಲ್ಲಿಸಿದೆ.

ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಏರಿ ಮೇಲ್ಸೇತುವೆ ನಿರ್ಮಾಣವಾದ ಬಳಿಕ ಚನ್ನಪಟ್ಟಣದ ಪಕ್ಕದಲ್ಲಿರುವ ಜಾನಪದ ಲೋಕದ ವೈಭವಕ್ಕೆ ಧಕ್ಕೆ ಉಂಟಾಗಿದೆ. ಪ್ರವಾಸಿಗರನ್ನೇ ಅವಲಂಬಿತವಾಗಿದ್ದರಿಂದ, ಈಗ ಜನರ ಭೇಟಿ ಗಣನೀಯವಾಗಿ ಇಳಿಮುಖಗೊಂಡ ಹಿನ್ನಲೆಯಲ್ಲಿ ಇದರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಸಂಘ ಆತಂಕವನ್ನು ವ್ಯಕ್ತ ಪಡಿಸಿದೆ.”
Leave a comment