6ನೇ ಬಾರಿಗೆಅಂಡರ್ 19 ವರ್ಲ್ಡ್ ಕಪ್ ಗೆದ್ದ ಭಾರತೀಯ ಯುವ ತಂಡ

22

ಐಸಿಸಿ ಅಂಡರ್-19 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ದಾಖಲೆಯ 6ನೇ ಬಾರಿಗೆ ಅಂಡರ್ 19 ವರ್ಲ್ಡ್ ಕಪ್ ಗೆದ್ದು ಬೀಗಿದೆ. ಹರಾರೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು.


ಭಾರತದ ಸ್ಟಾರ್ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ 175 ರನ್ ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಪೇರಿಸಿತ್ತು. ಭಾರತ ನೀಡಿದ 412 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಯುವಪಡೆ 311 ರನ್ ಗಳಿಗೆ ಆಲೌಟ್ ಆಗುವ ಮೂಲಕ 100 ರನ್ ಗಳಿಂದ ಸೋಲು ಕಂಡಿದೆ
ಭಾರತ ಪರ ನಾಯಕ ಆಯುಷ್ ಮ್ಹಾತ್ರೆ 53 ರನ್ ಗಳಿಸಿದರೇ, ಅಭಿಗ್ಯಾನ್ ಕುಂಡು 40, ಕನಿಷ್ಕ್ ಚೌಹಾಣ್ ಅಜೇಯ 37 ಮತ್ತು ವೇದಾಂತ್ ತ್ರಿವೇದಿ 32 ರನ್ ಗಳಿಸಿದರು. ಜೇಮ್ಸ್ ಮಿಂಟೊ ಇಂಗ್ಲೆಂಡ್ ಪರ ಮೂರು ವಿಕೆಟ್ ಪಡೆದರು.

ಇಂಗ್ಲೆಂಡ್ ಪರ ಕ್ಯಾಲೆಬ್ ಫಾಲ್ಕನರ್ ಸ್ಫೋಟಕ ಬ್ಯಾಟಿಂಗ್ ಮಾಡಿ 115 ರನ್ ಕಲೆಹಾಕಿದರು. ಬೆನ್ ಡಾಕಿನ್ಸ್ ಉತ್ತಮ ಬ್ಯಾಟಿಂಗ್ ಮಾಡಿ 66 ರನ್ ಕಲೆ ಹಾಕಿದರು. ಬೆನ್ ಮೇಯಸ್ 45, ಥಾಮಸ್ ರೆವ್ 31 ರನ್ ಕಲೆ ಹಾಕಿದರು. ಭಾರತದ ಪರ ಅಂಬರೀಶ್ 3, ದೀಪೇಶ್ ದೇವೇಂದ್ರನ್, ಕನಿಷ್ಕ್ ಚೌಹಾನ್ ತಲಾ 2 ವಿಕೆಟ್, ಕಿಲಾನ್ ಪಟೇಲ್ ಮತ್ತು ಆಯೂಶ್ ಮಾತ್ರೆ ತಲಾ 1 ವಿಕೆಟ್ ಪಡೆದಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಕೊಲಂಬೊದಲ್ಲಿ  ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ

2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಕೊಲಂಬೊದಲ್ಲಿ ನಡೆಯುವ ನಿರ್ಣಾಯಕ ಪಂದ್ಯಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು,...

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವ ಪಾಕಿಸ್ತಾನಕ್ಕೆ ಐಸಿಸಿ ಎಚ್ಚರಿಕೆ ಬಾಲ ಮುದುರಿಕೊಂಡ ಪಾಕಿಸ್ತಾನ

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವ ಮಾತುಗಳನ್ನಾಡುತ್ತಿದ್ದ ಪಾಕಿಸ್ತಾನದ ಬಾಲ ಮುದುರಿಕೊಂಡಂತೆ...

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಿಕ ಪಂದ್ಯದಲ್ಲೇ ಭಾರತ ತಂಡಕ್ಕೆ ಭರ್ಜರಿ ಜಯದೊಂದಿಗೆ  ಟೂರ್ನಿಯಲ್ಲಿ ಶುಭಾರಂಭ

“ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಭರ್ಜರಿ ಜಯ ಸಾಧಿಸುವ...

ಸತತ ಎರಡನೇ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು

“ವಡೋದರಾದಲ್ಲಿ ನಡೆದ ಡಬ್ಲ್ಯುಪಿಎಲ್ 2026 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ತಂಡದ ವಿರುದ್ಧ...