ಕಾಪು ಸಾರ್ವಜನಿಕ ಸ್ಥಳದಲ್ಲಿ ಗುಂಪು ಘರ್ಷಣೆ ಬಸ್ ಚಾಲಕ, ನಿರ್ವಾಹಕ, ಟೈಮ್ ಕೀಪರ್ ವಿರುದ್ಧ ಪ್ರಕರಣ ದಾಖಲು

41

ಕಾಪು ಪೇಟೆಯಲ್ಲಿರುವ ಕಾಪು ಉಡುಪಿ ಬಸ್ ನಿಲ್ದಾಣದ ಬಳಿ ಸಂಜೆ 4:03 ಗಂಟೆಗೆ  ಓರ್ವ ಬಸ್ಸು ಚಾಲಕನು ತನ್ನ ಬಸ್ಸನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಅದರ ನಿರ್ವಾಹಕ ಹಾಗೂ ಟೈಮ್‌ ಕೀಪರ್‌ ನಡುವೆ ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಬೈದಾಡಿಕೊಂಡು ಜಗಳವಾಡುತ್ತಾ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ನಡೆಸಿದ ಘಟನೆ ನಡೆದಿದೆ
ಸ್ಥಳಕ್ಕೆ ಧಾವಿಸಿದ ಕಾಪು ಪೊಲೀಸರಿಗೆ ದೊರೆತ  ಮಾಹಿತಿಯಂತೆ ಬಸ್ಸು ಉಡುಪಿ ಕಡೆಗೆ ಹೋಗಿದ್ದು ಅದರ ಚಾಲಕ ಹಾಗೂ ನಿರ್ವಾಹಕರ ಹೆಸರು ವಿಳಾಸ ತಿಳಿಯದಿದ್ದು ಟೈಮ್‌ ಕೀಪರ್‌ ಆದ ಚೇತನ್‌ ರವರು ಮನೆ ಕಡೆ ಹೋಗಿರುವುದಾಗಿ ತಿಳಿದುಬಂದಿದ್ದು,
ಗಲಾಟೆ ಮಾಡಿದವರ ವಿಡಿಯೋ ರೆಕಾರ್ಡ ಮಾಡಿದ ಬಗ್ಗೆ ತಿಳಿದುಬಂದಿದ್ದು ವಿಡಿಯೋವನ್ನು ನೋಡಿ ಪರಿಶೀಲಿಸಿ ವಿಚಾರಿಸಲಾಗಿ ದಿನಾಂಕ: 17.09.2025 ರಂದು ಸಂಜೆ ಗಲಾಟೆ ಮಾಡಿದ KA 20 AB 3199 ನೇ ಬಸ್ಸಿನ ಚಾಲಕನಾದ ನಿಜಾಮುದ್ದೀನ್‌ ಹಾಗೂ ಬಸ್ಸಿನ ನಿರ್ವಾಹಕ ಶೇಖ್‌ ಅಹಮ್ಮದ್‌ ಹಾಗೂ ಟೈಮ್‌ ಕೀಪರ್‌ ಆದ ಚೇತನ್‌ ಎಂಬುದಾಗಿ ತಿಳಿದುಬಂದಿದ್ದು.

KA20 AB3199 ನೇ ಬಸ್ಸನ್ನು ಹಾಗೂ ಗಲಾಟೆ ಮಾಡಿದ ನಿಜಾಮುದ್ದೀನ್‌, ಶೇಖ್‌ ಅಹಮ್ಮದ್‌ ಹಾಗೂ ಚೇತನ್‌ ರವರನ್ನು ದಿನಾಂಕ: 18.09.2025 ರಂದು ಬೆಳಿಗ್ಗೆ ವಶಕ್ಕೆ ಪಡೆದು ಸದ್ರಿಯವರು ಸಮಾನ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡುವಂತೆ ವರ್ತಿಸಿದವರ ವಿರುದ್ದ ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಪ್ರೀತಿ ನಾಟಕವಾಡಿ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಕೈಕೊಟ್ಟು ಪರಾರಿಯಾದ ಮುಸ್ಲಿಂ ಯುವಕ

“ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ,...

ತಾಯಿಯ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಮಗಳು ಪ್ರಕರಣ ದಾಖಲು

“ಬೆಂಗಳೂರು: ತಾಯಿಯ ಒಪ್ಪಿಗೆ ಇಲ್ಲದೆ ಆಕೆಯ ಖಾಸಗಿ ಪೋಟೋಗಳನ್ನು ತನ್ನ ಲವರ್ ಗೆ ಕಳುಹಿಸಿದ 23...

10ನೇ ತರಗತಿ ಬಾಲಕಿ ಗರ್ಭಿಣಿ,ಪೋಕ್ಸೊ ಪ್ರಕರಣದಾಖಲು ಆರೋಪಿ ಬಂಧನ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಸತಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ....

ಅನ್ಯಕೋಮಿನ  ಗಂಡ ಹೆಂಡತಿ ಜಗಳ ನಿಲ್ಲಿಸಲು ಹೋದ ನೆರೆಮನೆಯ ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ

ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಹಿಂದೂ ಯುವಕನೊಬ್ಬನ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ...