ಇದು ನವಭಾರತ, ಅಣ್ವಸ್ತ್ರ ದಾಳಿಗೆ ಬೆದರಲ್ಲ: ಮಧ್ಯಪ್ರದೇಶದಲ್ಲಿ ನರೇಂದ್ರ ಮೋದಿ ಗುಡುಗು ಪ್ರಧಾನಿ ಮೋದಿ ಅವರು ‘ಆಪರೇಷನ್ ಸಿಂದೂರ’ದ ಯಶಸ್ಸನ್ನು ಶ್ಲಾಘಿಸಿದ್ದು, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತದ ದಿಟ್ಟತನವನ್ನು ಎತ್ತಿ ತೋರಿಸಿದ್ದಾರೆ. ಮಧ್ಯಪ್ರದೇಶದ ಧಾರ್‌ನಲ್ಲಿ ‘ಪಿಎಂ ಮಿತ್ರ’ ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿ, ಸ್ವದೇಶಿ ವಸ್ತುಗಳ ಖರೀದಿಗೆ ಕರೆ ನೀಡಿದ್ದಾರೆ. ಈ ಯೋಜನೆಯಿಂದ 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಆಪರೇಷನ್ ಸಿಂದೂರ ಶ್ಲಾಘಿಸಿದ ಪ್ರಧಾನಿ ನಮ್ಮ ಯೋಧರು ಕಣ್ಣು ಮಿಟುಕಿಸುವುದರೊಳಗೆ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದರು,” ಎಂದು ಸೇನೆಯ ಪರಾಕ್ರಮವನ್ನು ಶ್ಲಾಘಿಘಿಸಿದರು. ಜಾಮೀಯಾ ಮಸೀದಿ ಸುಭಾನ್ ಅಲ್ಲಾ’ ಕಟ್ಟಡದ ಮೇಲೆ ನಡೆಸಿದ ದಾಳಿಗೆ ಜೈಷೆ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ಸರ್ವನಾಶ ಮಧ್ಯಪ್ರದೇಶದಲ್ಲಿ ನರೇಂದ್ರ ಮೋದಿ

ಭೋಪಾಲ್: ”ಇದು ನವ ಭಾರತ. ಯಾವುದೇ ಅಣ್ವಸ್ತ್ರ ದಾಳಿಯ ಬೆದರಿಕೆಗಳಿಗೆ ಬಗ್ಗುವುದಿಲ್ಲ. ತಂಟೆಗೆ ಬಂದ ಉಗ್ರರ ನೆಲೆಗಳಿಗೆ ನುಗ್ಗಿ ಹೊಡೆದಿದ್ದೇವೆ,” ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ‘ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟ್‌ಟೈಲ್ ರೀಜನ್ ಆ್ಯಂಡ್ ಅಪ್ಯಾರೆಲ್’ (ಪಿಎಂ-ಮಿತ್ರ) ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ”ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಜೈಷೆ ಮೊಹಮ್ಮದ್ ಉಗ್ರ ಅಜರ್ ಮಸೂದ್ ಕುಟುಂಬ ಸರ್ವನಾಶವಾಗಿದ್ದನ್ನು ಸ್ವತಃ ಜೈಷೆ ಮೊಹಮ್ಮದ್ ಕಮಾಂಡರ್ ಒಪ್ಪಿಕೊಂಡಿರುವುದು ನವ ಭಾರತದ ತಾಕತ್ತು ಏನು ಎಂಬುದನ್ನು ಜಗತ್ತಿಗೆ ತೋರಿಸಿದೆ,” ಐಸಿಸಿ ಮುಂದೆ ನಡೆಯದ ಹೈಡ್ರಾಮಾ ”ಪಾಕಿಸ್ತಾನ ಪೋಷಿತ ಉಗ್ರರು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ನಮ್ಮ ಸಹೋದರಿಯರ ಸಿಂದೂರ ಅಳಿಸಿ ದುಷ್ಟತನ ಮೆರೆದರು. ಈ ಹೇಡಿತನದ ಕೃತ್ಯಕ್ಕೆ ಭಾರತವು ‘ಆಪರೇಷನ್ ಸಿಂದೂರ’ ಮೂಲಕ ದಿಟ್ಟ ಉತ್ತರ ನೀಡಿತು.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಉಡಾಯಿಸುವ ಮೂಲಕ ಅವರ ಹುಟ್ಟಡಗಿಸಿದೆವು. ನಮ್ಮ ಯೋಧರು ಕಣ್ಣು ಮಿಟುಕಿಸುವುದರೊಳಗೆ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದರು,” ಎಂದು ಸೇನೆಯ ಪರಾಕ್ರಮವನ್ನು ಶ್ಲಾಘಿಸಿದರು. ಜೈಷ್ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿಯು, ”ಮೇ 7ರಂದು ಭಾರತದ ರಕ್ಷಣಾ ಪಡೆಗಳು ಪಾಕಿಸ್ತಾನದ ಬಹವಲ್ಪುರದಲ್ಲಿ ಜೈಷೆ ಕೇಂದ್ರ ಕಚೇರಿ ಎನಿಸಿದ ‘ಜಾಮೀಯಾ ಮಸೀದಿ ಸುಭಾನ್ ಅಲ್ಲಾ’ ಕಟ್ಟಡದ ಮೇಲೆ ನಡೆಸಿದ ದಾಳಿಗೆ ಜೈಷೆ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ಸರ್ವನಾಶವಾಯಿತು,” ಎಂದು ಹೇಳಿದ್ದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಮೋದಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.”

Leave a comment