ಅಗ್ರಜ ಸೌಹಾರ್ದ ಸಹಕಾರಿ ಸಂಘ ನಿಯಮಿತ – ಸರ್ವಸದಸ್ಯರ ವಾರ್ಷಿಕ ಮಹಾಸಭೆ: 15% ಡಿವಿಡೆಂಡ್ ಘೋಷಣೆ

66

ಅಗ್ರಜ ಸೌಹಾರ್ದ ಸಹಕಾರಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಬನ್ನಂಜೆಯ “ಶ್ರೀ ನಾರಾಯಣ ಗುರುಸಭಾಭವನ” ಇಲ್ಲಿ ಅಗಸ್ಟ್ 30 ರ ಶನಿವಾರ ಸಹಕಾರಿಯ ಅಧ್ಯಕ್ಷರಾಗಿರುವ ಶ್ರೀ ನವೀನ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

2024-25ನೇ ಸಾಲಿನಲ್ಲಿ ಸಹಕಾರಿಯು ಸುಮಾರು 9 ಕೋಟಿ 56 ಲಕ್ಷ ರೂಪಾಯಿಗಿಂತಲೂ ಅಧಿಕ ದುಡಿಯುವ ಬಂಡವಾಳವನ್ನು ಹೊಂದಿದ್ದು ಈ ವರ್ಷ 17 ಲಕ್ಷ ರೂ. ಲಾಭ ಗಳಿಸಿ ಅತ್ಯುತ್ತಮವಾಗಿ ಮುನ್ನಡೆಯುತ್ತಿದ್ದು ಸದಸ್ಯರಿಗೆ ಶೇ. 15% ಡಿವಿಡೆಂಡ್ ಘೋಷಿಸಲಾಗಿದೆ. ಸಂಘವು ತನ್ನಲ್ಲಿರುವ ಠೇವಣಾತಿಗಳನ್ನು ಸಮರ್ಪಕವಾಗಿ ಸಾಲ ವಿತರಣೆ ಹಾಗೂ ಸುಸ್ಥಿರ ಹೂಡಿಕೆ ಮಾಡಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಗಣೇಶ್ ಎನ್ ಕೋಟ್ಯಾನ್ ಇವರು 2024-25 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ. ನಿಯಮಿತ ಇದರ ಸೌಹಾರ್ದ ಅಭಿವೃದ್ಧಿ ಅಧಿಕಾರಿಯಾದ ಶ್ರೀ ವಿಜಯ್ ಬಿ. ಎಸ್. ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಮನೀಷ್ ಭಟ್, ನಿರ್ದೇಶಕರಾದ ಶ್ರೀ ನಂದಕಿಶೋರ್, ಶ್ರೀಮತಿ ರೋಹಿಣಿ ಜಿ. ಕೋಟ್ಯಾನ್, ಶ್ರೀಮತಿ ಪ್ರೇಮಾ ಕೆ ಶೆಟ್ಟಿ,

ಶ್ರೀ ಚಂದನ್ ಕುಮಾರ್, ಶ್ರೀ ನಾಗೇಶ್ ನಾಯಕ್, ಶ್ರೀ ಗಿರೀಶ್ ಶೇರಿಗಾರ್, ಶ್ರೀ ಶ್ರೀನಿವಾಸ ನಾಯ್ಕ, ಶ್ರೀ ಸದಾನಂದ ನಾಯಕ್ ಹಾಜರಿದ್ದರು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ 85% ಕ್ಕಿಂತ ಅಧಿಕ ಅಂಕ ಗಳಿಸಿದ ಸಹಕಾರಿಯ ಸದಸ್ಯರ ಹಾಗೂ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಹಕಾರಿಯ ಹಿರಿಯ ಸದಸ್ಯರಾದ ಶ್ರೀ ಕೆ ಗೋಪಾಲ ಭಟ್ ಹೆಬ್ರಿ, ಶ್ರೀ ಮಂಜುನಾಥ ಸರಳಾಯ, ಮೂಡುಬೆಳ್ಳೆ ಮತ್ತು ಅಗ್ರಜ ಸ್ವ ಸಹಾಯ ಗುಂಪಿನ ಪ್ರತಿನಿಧಿಯಾಗಿರುವ ಶ್ರೀಮತಿ ಸವಿತ ಕೆ ಹೆಬ್ರಿ ಇವರನ್ನು ಸನ್ಮಾನಿಸಲಾಯಿತು. ಕುಮಾರಿ ರಚಿತಾ ಕುಲಾಲ್ ಪ್ರಾರ್ಥನೆ ನೆರವೇರಿಸಿದರು.

ಹೆಬ್ರಿ ಶಾಖೆಯ ಶಾಖಾ ಪ್ರಬಂಧಕರಾದ ಶ್ರೀ ಕಿರಣ್ ಕುಮಾ‌ರ್ ಇವರು ಧನ್ಯವಾದ ಸಮರ್ಪಣೆ ನೆರವೇರಿಸಿದರು, ಮುಖ್ಯ ಕಛೇರಿಯ ಸಿಬ್ಬಂದಿಯಾಗಿರುವ ಶ್ರೀಮತಿ ಸವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...