ಎಚ್ಎಎಲ್ ನಿರ್ಮಿತ ತೇಜಸ್ ಮಾರ್ಕ್- 1ಎ ಫೈಟರ್ ಜೆಟ್ ಭಾರತೀಯ ಸೇನಾ ಬತ್ತಳಿಕೆಗೆ ಸೇರಲು ಸಿದ್ಧತೆ 

78

ಬೆಂಗಳೂರು: ಮುಂದಿನ ತಿಂಗಳು ಎಚ್‌ಎಎಲ್ ತಾನು ನಿರ್ಮಿಸಿದ 2 ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ಗಳನ್ನು ಭಾರತೀಯ ಸೇನೆಗೆ ತಲುಪಿಸುವ ಸಾಧ್ಯತೆ ಇದೆ ಎಂದು ಕೇಂದ್ರ ರಕ್ಷಣಾ ಕಾರ್ಯದರ್ಶಿ ಆರ್ ಕೆ ಸಿಂಗ್ ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮುಂದಿನ ತಿಂಗಳು ಎರಡು ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ಗಳನ್ನು ತಲುಪಿಸುವ ಸಾಧ್ಯತೆ ಇದೆ.



ಎರಡು ವಿಮಾನಗಳ ವಿತರಣೆಯ ನಂತರ 97 ತೇಜಸ್ ಜೆಟ್‌ಗಳ ಹೆಚ್ಚುವರಿ ಬ್ಯಾಚ್ ಅನ್ನು ಖರೀದಿಸಲು ಸರ್ಕಾರ ಎಚ್‌ಎಎಲ್‌ನೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ಆರ್ ಕೆ ಸಿಂಗ್ ಹೇಳಿದ್ದಾರೆ. ಹಿಂದಿನ ಒಪ್ಪಂದದಡಿಯಲ್ಲಿ ತೇಜಸ್ ಮಾರ್ಕ್ 1ಎ ಜೆಟ್‌ಗಳ ವಿತರಣೆಯಲ್ಲಿ ವಿಳಂಬದ ಬಗ್ಗೆ ಭಾರತೀಯ ವಾಯುಪಡೆ (ಐಎಎಫ್) ಕಳವಳ ವ್ಯಕ್ತಪಡಿಸಿತ್ತು.

ಇದೇ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ರಕ್ಷಣಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್ ಕೆ ಸಿಂಗ್, ತೇಜಸ್ ಕುರಿತ ಆಶಾದಾಯಕ ಬೆಳವಣಿಗಗಳು ನಡೆಯುತ್ತಿದ್ದು, ಮೊದಲ ಎರಡು ವಿಮಾನಗಳನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಶಸ್ತ್ರಾಸ್ತ್ರ ಏಕೀಕರಣದೊಂದಿಗೆ ತಲುಪಿಸಲಾಗುವುದು. ಸುಮಾರು 38 ತೇಜಸ್ ಜೆಟ್‌ಗಳು ಈಗಾಗಲೇ ಸೇವೆಯಲ್ಲಿದ್ದು, ಇನ್ನೂ 80ಕ್ಕೂ ಹೆಚ್ಚು ವಿಮಾನಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು.


ಇದಕ್ಕೆ ಇಂಬು ನೀಡುವಂತೆ ಕಳೆದ ವಾರ ಕೂಡ ಕೇಂದ್ರ ಸರ್ಕಾರವು ಸುಮಾರು ರೂ. 67,000 ಕೋಟಿ ವೆಚ್ಚದಲ್ಲಿ 97 ತೇಜಸ್ ಯುದ್ಧವಿಮಾನಗಳ ಹೆಚ್ಚುವರಿ ಬ್ಯಾಚ್ ಅನ್ನು ಅನುಮೋದಿಸಿತು. ಫೆಬ್ರವರಿ 2021 ರಲ್ಲಿ, ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಗಾಗಿ 83 ತೇಜಸ್   ಎಮ್ ಕೆ-1ಎ ಜೆಟ್‌ಗಳ ಖರೀದಿಗಾಗಿ  ಎಚ್ಎಎಲ್   ಜೊತೆ ರೂ. 48,000 ಕೋಟಿ ಒಪ್ಪಂದ ಮಾಡಿಕೊಂಡಿತ್ತು.

ತೇಜಸ್ ಜೆಟ್‌ ವಿಮಾನಗಳ ವಿತರಣೆಯು ಪ್ರಾಥಮಿಕವಾಗಿ ಅಮೆರಿಕದ ರಕ್ಷಣಾ ಪ್ರಮುಖ ಜಿ ಇ   ಏರೋಸ್ಪೇಸ್ ಜೆಟ್‌ಗಳಿಗೆ ಶಕ್ತಿ ತುಂಬಲು ತನ್ನ ಏರೋ ಎಂಜಿನ್‌ಗಳ ಪೂರೈಕೆ ಮಾಡಬೇಕಿತ್ತು. ಆದರೆ ಈ ಸಂಸ್ಥೆ ಹಲವಾರು ಗಡುವುಗಳನ್ನು ತಪ್ಪಿಸಿಕೊಂಡ ಕಾರಣ ಭಾರತದಲ್ಲಿ ಎಚ್ ಎಎಲ್ ಜೆಟ್ ವಿಮಾನ ತಯಾರಿಕೆಗೆ ವಿಳಂಬವಾಗಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿದ ಆರ್ ಕೆ ಸಿಂಗ್, “ಎಚ್ ಎ ಎಲ್ ಸಂಪೂರ್ಣ ಪ್ಯಾಕೇಜ್ ಅನ್ನು ಒಳಗೊಂಡ ಎರಡು ತೇಜಸ್‌ಗಳನ್ನು ವಿತರಿಸಿದ ನಂತರವೇ ನಾವು ಈ ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಎಂದು ನಾನು ಎಚ್ ಎ ಎಲ್ ಗೆ ಸ್ಪಷ್ಟಪಡಿಸಿದ್ದೇನೆ.  ಎಚ್ ಎ ಎಲ್ ನಾಲ್ಕರಿಂದ ಐದು ವರ್ಷಗಳವರೆಗೆ ಆರ್ಡರ್ ಪುಸ್ತಕವನ್ನು ಹೊಂದಿರುತ್ತದೆ. ಆಶಾದಾಯಕವಾಗಿ, ಅವರು  ಈ ವೇದಿಕೆಯನ್ನು ಪರಿಪೂರ್ಣಗೊಳಿಸಲು, ರಾಡಾರ್ ಮತ್ತು ಭಾರತೀಯ ಶಸ್ತ್ರಾಸ್ತ್ರಗಳನ್ನು ಸಂಯೋಜಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಅದು ಸುಖೋಯ್ ಜೊತೆಗೆ ನಮಗೆ ಕೆಲಸ ಮಾಡುತ್ತದೆ” ಎಂದು ಹೇಳಿದರು.

ತೇಜಸ್ ಜೆಟ್ ಗಳ ಸೇರ್ಪಡೆ ಹೊರತಾಗಿಯೂ ವಾಯುಪಡೆ ಸ್ಕ್ವಾಡ್ರನ್ ಗಳಲ್ಲಿ ಇನ್ನೂ ಅಂತರವಿರುತ್ತದೆ ಮತ್ತು ಆ ಅಂತರವನ್ನು ತುಂಬಲು ನಾವು ಬೇರೆ ಕೆಲವು ಆಯ್ಕೆಗಳನ್ನು ನೋಡಬೇಕಾಗುತ್ತದೆ” ಎಂದು ಹೇಳುವ ಮೂಲಕ ಆರ್ ಕೆ ಸಿಂಗ್ ಐ ಎ ಎಫ್ ಗಾಗಿ ಹೆಚ್ಚಿನ ವೇದಿಕೆಗಳ ಖರೀದಿಯ ಬಗ್ಗೆ ಸುಳಿವು ನೀಡಿದರು. ಅಂದಹಾಗೆ ಸಿಂಗಲ್-ಎಂಜಿನ್ ಎಮ್ ಕೆ -1ಎ ಐಎಎಫ್ ನ  ಮಿಗ್ -21 ಯುದ್ಧವಿಮಾನಗಳಿಗೆ ಬದಲಿಯಾಗಿರುತ್ತದೆ

ಐ ಎ ಎಫ್    ತನ್ನ ಫೈಟರ್ ಸ್ಕ್ವಾಡ್ರನ್‌ಗಳ ಸಂಖ್ಯೆ ಅಧಿಕೃತವಾಗಿ ಅನುಮೋದಿಸಲಾದ 42 ರಿಂದ 31ಕ್ಕೆ ಇಳಿದಿರುವುದರಿಂದ ಯುದ್ಧವಿಮಾನಗಳನ್ನು ಸೇರಿಸಿಕೊಳ್ಳಲು ಎದುರು ನೋಡುತ್ತಿದೆ. ತೇಜಸ್ ಒಂದು ಸಿಂಗಲ್-ಎಂಜಿನ್ ಬಹು-ಪಾತ್ರದ ಯುದ್ಧವಿಮಾನವಾಗಿದ್ದು, ಹೆಚ್ಚಿನ ಅಪಾಯದ ವಾಯು ಪರಿಸರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ವಾಯು ರಕ್ಷಣೆ, ಕಡಲ ವಿಚಕ್ಷಣ ಮತ್ತು ದಾಳಿಯ ಪಾತ್ರಗಳನ್ನು ಕೈಗೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ

Leave a comment

Leave a Reply

Your email address will not be published. Required fields are marked *

Related Articles

ಕರ್ನಾಟಕ ಹೈಕೋರ್ಟ್ ನಲ್ಲಿ 101 ಹುದ್ದೆಗಳ ಭರ್ತಿಗೆ ಕ್ರಮ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಲ್ಲಿ 101 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ....

ಶಬರಿಮಲೆ ಅಯ್ಯಪ್ಪ ಬ್ರಹ್ಮಚಾರಿ; ಅಗತ್ಯ ಧಾರ್ಮಿಕ ನಿರ್ಬಂಧ ಎತ್ತಿ ಹಿಡಿಯಬಹುದು: ಸುಪ್ರೀಂ ಕೋರ್ಟ್ ನಲ್ಲಿ ದೇವಾಲಯದ ಪರ ವಕೀಲರ ವಾದ

“ನವದೆಹಲಿ: ಸುಪ್ರೀಂ ಕೋರ್ಟ್ ಮಂಗಳವಾರ ಶಬರಿಮಲೆ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕರನ್ನು, ಜನ್ಮ ಅಥವಾ ಸ್ಥಾನಮಾನದ...

ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂಕ 625ಕ್ಕೆ ಬದಲಿಗೆ 525 ಅಂಕಗಳಿಗೆ ಇಳಿಕೆ ಸಚಿವ ಮಧು ಬಂಗಾರಪ್ಪ

“ಬೆಂಗಳೂರು: SSLC ಪರೀಕ್ಷೆಯ ಅಂಕಗಳನ್ನು 625ಕ್ಕೆ ಬದಲಿಗೆ 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ. ಹಿಂದಿ ಸೇರಿ...

ಶಿವಸೇನೆಯಿಂದ ಮೇಯರ್ ಆದ್ರೆ ಬಾಳಾ ಠಾಕ್ರೆ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರಿಗೆ ನೀಡುವ ಗೌರವ :: ಏಕನಾಥ್ ಶಿಂಧೆ

ಇತ್ತೀಚಿಗೆ ನಡೆದ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಹಾಯುತಿಯಲ್ಲಿ ಈಗ...