
ಸಾಮಾಜಿಕ ಹೋರಾಟಗಾರ ಜಯಂತ್ ಎಂಬುವವರು ದೂರು ಸಲ್ಲಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಠಾಣೆಗೆ ಆಗಮಿಸಿ 2010ರಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಸಂಬಂಧ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಂತ್ ಅವರು, ಏಪ್ರಿಲ್ 6, 2010 ರಂದು ಧರ್ಮಸ್ಥಳದ ಲಾಡ್ಜ್‌ನಲ್ಲಿ 35 ರಿಂದ 40 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿತ್ತು. ನಾನು ಆರ್‌ಟಿಐ ಮೂಲಕ ಕೆಲವು ವಿವರಗಳನ್ನು ಸಂಗ್ರಹಿಸಿದ್ದೇನೆ. ಮಹಿಳೆಯನ್ನು ಕೊಲೆ ಮಾಡಲಾಗಿತ್ತು.
ಆದರೆ, ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ಕೊಂದು ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದು ತಿಳಿದಿದ್ದರೂ, ಸ್ಥಳೀಯ ಪೊಲೀಸರು ಒಂದು ದಿನದೊಳಗೆ ಶವವನ್ನು ವಿಲೇವಾರಿ ಮಾಡಲು ಹೇಗೆ ಅವಕಾಶ ನೀಡಿದರು?
ಆ ದಿನ ಕರ್ತವ್ಯದಲ್ಲಿದ್ದ ಪೊಲೀಸರು ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ನಂತರ ಅಂತ್ಯಕ್ರಿಯೆಗಾಗಿ ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದರು, ಈ ಕೊಲೆ ಪ್ರಕರಣವನ್ನು ಯಾರ ಸೂಚನೆಯ ಮೇರೆಗೆ ಮುಚ್ಚಲಾಯಿತು ಎಂದು ಪ್ರಶ್ನಿಸಿದ್ದಾರೆ
ಆ ಅವಧಿಯಲ್ಲಿ 160 ಅಸ್ವಾಭಾವಿಕ ಸಾವುಗಳು ಸಂಭವಿಸಿವೆ ಎಂದು ಆರ್‌ಟಿಐ ಮಾಹಿತಿಯಿಂದ ತಿಳಿದುಬಂದಿದೆ. ಬಸ್ ನಿಲ್ದಾಣಗಳು, ಬೆಟ್ಟದ ರಸ್ತೆಯಲ್ಲಿ ಅನೇಕ ಶವಗಳು ಕಂಡುಬಂದಿವೆ.
ಕೆಲವು ಆತ್ಮಹತ್ಯೆ ಪ್ರಕರಣಗಳಾಗಿವೆ. ಸರಿಯಾದ ತನಿಖೆ ನಡೆಸದೆ ಅಧಿಕಾರಿಗಳು ಆ ಎಲ್ಲಾ ಶವಗಳನ್ನು ವಿಲೇವಾರಿ ಮಾಡಿದ್ದಾರೆ ಎಂಬ ಅನುಮಾನಗಳಿವೆ ಎಂದು ಹೇಳಿದ್ದಾರೆ.
Leave a comment