ಭಾರತದ ವಿರುದ್ಧ ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯಕ್ಕಾಗಿ ಪಾಕಿಸ್ತಾನಕ್ಕೆ ಮೂರನೇ ಜಲಾಂತರ್ಗಾಮಿ ಹಸ್ತಾಂತರಿಸಿದ ಚೀನಾ

97

“ಪಾಕಿಸ್ತಾನದ ನೌಕಪಡೆ ಬಲಪಡಿಸುವುದರೊಂದಿಗೆ ಹಿಂದೂ ಮಹಾಸಾಗರದಲ್ಲಿ ಭಾರತಕ್ಕೆ ಸೆಡ್ಡು ಹೊಡೆದು ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುವ ಚೀನಾ ʻಹ್ಯಾಂಗೋರ್ʼ ಜಲಾಂತರ್ಗಾಮಿ  ನೌಕೆಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.
ಮಧ್ಯ ಚೀನಾದ ಹುಬೈ ಪ್ರಾಂತ್ಯದ ವುಹಾನ್‌ನಲ್ಲಿ ಮೂರನೇ ಸುಧಾರಿತ ಜಲಾಂತರ್ಗಾಮಿ ನೌಕೆ ಹಸ್ತಾಂತರ ಸಮಾರಂಭ ಗುರುವಾರ ನಡೆಯಿತು ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಶನಿವಾರ ವರದಿ ಮಾಡಿದೆ. ಪಾಕಿಸ್ತಾನಕ್ಕಾಗಿ ಚೀನಾ ನಿರ್ಮಿಸುತ್ತಿರುವ ಎಂಟು ಜಲಾಂತರ್ಗಾಮಿ ನೌಕೆಗಳ ಪೈಕಿ ಎರಡನೆಯದನ್ನು ಈ ವರ್ಷದ ಮಾರ್ಚ್‌ನಲ್ಲಿ ಹಸ್ತಾಂತರಿಸಲಾಗಿತ್ತು.
ಬಲೂಚಿಸ್ತಾನ ಪ್ರಾಂತ್ಯದ ಗ್ವಾದರ್ ಬಂದರು ಇರುವ ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾದ ನೌಕಾಪಡೆಯ ಪ್ರಾಬಲ್ಯ ವಿಸ್ತರಣೆ ನಡುವೆ ಪಾಕಿಸ್ತಾನದ ನೌಕಾಪಡೆಯ ಬಲವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಕಳೆದ ಕೆಲವು ವರ್ಷಗಳಲ್ಲಿ ಚೀನಾವು ಪಾಕಿಸ್ತಾನಕ್ಕೆ ನಾಲ್ಕು ಆಧುನಿಕ ಯುದ್ಧ ನೌಕೆಗಳನ್ನು ಪೂರೈಸಿದೆ.

ಮೂರನೇ ಜಲಾಂತರ್ಗಾಮಿ ನೌಕೆ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಪಾಕಿಸ್ತಾನದ ನೌಕ ಸಿಬ್ಬಂದಿ ಪ್ರಾಜೆಕ್ಟ್ -2 ಉಪ ಮುಖ್ಯಸ್ಥ ಅಡ್ಮಿರಲ್ ಅಬ್ದುಲ್ ಸಮದ್, ಹ್ಯಾಂಗೋರ್ ಜಲಾಂತರ್ಗಾಮಿ ನೌಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಸಂವೇದಕಗಳು ಪ್ರಾದೇಶಿಕ ಶಕ್ತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಕಡಲ ಸ್ಥಿರತೆ ಖಾತ್ರಿಗೆ ಸಹಕಾರಿಯಾಗಲಿವೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನ ಇತ್ತೀಚಿನ ವರದಿಯ ಪ್ರಕಾರ, ಪಾಕಿಸ್ತಾನದ ಮಿಲಿಟರಿ ಉಪಕರಣಗಳ ಶೇ. 81 ಕ್ಕಿಂತ ಹೆಚ್ಚು ಉಪಕರಣಗಳನ್ನು ಚೀನಾ ಪೂರೈಸಿದೆ. ಪಾಕಿಸ್ತಾನಕ್ಕೆ ಅತ್ಯಾಧುನಿಕ, ಬೃಹತ್ ಯುದ್ಧನೌಕೆ ರವಾನಿಸಿದ ಚೀನಾ ಮೊದಲ ಗೂಢಚರ್ಚೆಯ ಹಡಗು ರಿಜ್ವಾನ್ ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ಪ್ರಮುಖ ಮಿಲಿಟರಿ ಸಾಧನಗಳನ್ನು ಪಾಕಿಸ್ತಾನ ಪಡೆದುಕೊಂಡಿದೆ.

ಚೀನಾ 2022 ರಲ್ಲಿ ಪಾಕಿಸ್ತಾನದ ವಾಯುಪಡೆಗೆ ಬಹು-ಪಾತ್ರ ದJ-10CE ಫೈಟರ್ ಜೆಟ್‌ಗಳನ್ನು ಪೂರೈಸಿತ್ತು. JF-17 ಯುದ್ಧವಿಮಾನಗಳನ್ನು ಎರಡೂ ದೇಶಗಳು ಜಂಟಿಯಾಗಿ ತಯಾರಿಸಿದ್ದವು. ಭಾರತದೊಂದಿಗಿನ ಇತ್ತೀಚಿನ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನವು ಈ ಯುದ್ಧ ವಿಮಾನಗಳನ್ನು ಬಳಸಿತ್ತು.

Leave a comment

Leave a Reply

Your email address will not be published. Required fields are marked *

Related Articles

ಭಾರತ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಉದ್ಧಟತನ

“ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ವಿವಾದದ ನಡುವೆ ಭಾರತಕ್ಕೆ ಪಾಕಿಸ್ತಾನ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದೆ....

ತನ್ನ ಪ್ರದೇಶಗಳಿಗೆ ಇಸ್ಲಾಮಿ ಹೆಸರುಗಳ ಕೈ ಬಿಟ್ಟು ಹಿಂದೂ ಹೆಸರು ಮರುನಾಮಕರಣ, ಬದಲಾಗುತ್ತಿದೇಯಾ ಪಾಕಿಸ್ತಾನ??

ಲಾಹೋರ್: ಭಾರತದ ಪ್ರಧಾನಿ ಮೋದಿ ಅಖಂಡ ಭಾರತದ ಕುರಿತು ಮಾಡಿದ್ದ ಭಾಷಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲಿ...

ದೇಶ ರಕ್ಷಣೆಗೆ 92 ಶತಕೋಟಿ ಡಾಲರ್ ಬಜೆಟ್ ವಿಶ್ವದ 5ನೇ ರಾಷ್ಟ್ರವಾಗಿ ಎಲೈಟ್ ಗ್ರೂಪ್ ಸೇರಿದ ಭಾರತ!

ನವದೆಹಲಿ: ರಕ್ಷಣಾ ವಿಭಾಗದಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ದೇಶದ ರಕ್ಷಣಾ ಬಜೆಟ್ 92 ಶತಕೋಟಿ...

ಅಮೆರಿಕ ಶ್ವೇತಭವನದಲ್ಲಿ ಔತಣಕೂಟ ವೇಳೆ ಶೂಟೌಟ್ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್,

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದೆ....