ಕೊಲ್ಲೂರು ದೇವಸ್ಥಾನದಲ್ಲಿ ಜನಜಂಗುಳಿಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರಕಳ್ಳತನ

69
ಕೊಲ್ಲೂರು ದೇವಸ್ಥಾನದಲ್ಲಿ ಸರಕಳ್ಳರ ಕೈಚಳಕ  ಜಯಂತಿ ,ಮುದ್ರಾಡಿ  ಹೆಬ್ರಿ ಇವರು ಮಗಳು ಪ್ರತಿಮಾ ಹಾಗೂ ಅಳಿಯ ದೀರಜ್‌‌‌ ನೊಂದಿಗೆ ಕಾರಿನಲ್ಲಿ ಪ್ರಯಾಣಿಸಿ ಮಧ್ಯಾಹ್ನ 12:30 ಗಂಟೆಗೆ, ಕೊಲ್ಲೂರು  ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿರುತ್ತಾರೆ.


ಪ್ರತಿಮಾ ಹಾಗೂ ಅಳಿಯ ದೀರಜ್‌‌‌ ರವರು ಕ್ಯೂನಲ್ಲಿ ನಿಂತುಕೊಂಡ ಸಮಯ ಜಯಂತಿಯವರು ಶ್ರೀ ವೀರಭದ್ರ ದೇವರಿಗೆ ಕೈ ಮುಗಿದು ಬರುವುದಾಗಿ ಹೇಳಿ ಅಲ್ಲಿಗೆ ಹೋದ ಸಮಯ ಒಮ್ಮೇಲೆ ಮಳೆ ಬಂದಿದ್ದು
ಈ ಸಮಯ ದೇವಸ್ಥಾನದ ಹೊರಾಂಗಣದಲ್ಲಿ ನೆರೆದ ಜನರು ಒಮ್ಮೇಲೆ ವೀರಭದ್ರ ದೇವರ ಗುಡಿಯ ಕಡೆಗೆ ನುಗ್ಗಿ ಜಯಂತಿಯವರ ಮೈ ಮೇಲೆ ಬಿದ್ದಿದ್ದು, ಜನರು ಹೋದ ಬಳಿಕ ಮಗಳಿದ್ದ ಕ್ಯೂ ಸ್ಥಳಕ್ಕೆ ಹೋಗಿ ನೋಡಲಾಗಿ ಜಯಂತಿಯವರ ಕುತ್ತಿಗೆಯಲ್ಲಿದ್ದ 5 ಪವನ್‌‌ ಇರುವ ಚಿನ್ನದ ಸರವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ತಿಳಿದಿರುತ್ತದೆ.
ಮಧ್ಯಾಹ್ನ 12:30 ಗಂಟೆಯಿಂದ 01:00 ಗಂಟೆಯ ಮಧ್ಯೆ ಅವಧಿಯಲ್ಲಿ ಶ್ರೀ ವೀರಭದ್ರ ದೇವರ ಗುಡಿಯಲ್ಲಿ ಇರುವ ಸಮಯದಲ್ಲಿ ಯಾರೋ ಕಳ್ಳರು ಜಯಂತಿ ಯವರ ಕುತ್ತಿಗೆಯಲ್ಲಿದ್ದ 5 ಪವನ್‌‌ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a comment

Leave a Reply

Your email address will not be published. Required fields are marked *

Related Articles

ಪ್ರೀತಿ ನಾಟಕವಾಡಿ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಕೈಕೊಟ್ಟು ಪರಾರಿಯಾದ ಮುಸ್ಲಿಂ ಯುವಕ

“ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ,...

ತಾಯಿಯ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಮಗಳು ಪ್ರಕರಣ ದಾಖಲು

“ಬೆಂಗಳೂರು: ತಾಯಿಯ ಒಪ್ಪಿಗೆ ಇಲ್ಲದೆ ಆಕೆಯ ಖಾಸಗಿ ಪೋಟೋಗಳನ್ನು ತನ್ನ ಲವರ್ ಗೆ ಕಳುಹಿಸಿದ 23...

10ನೇ ತರಗತಿ ಬಾಲಕಿ ಗರ್ಭಿಣಿ,ಪೋಕ್ಸೊ ಪ್ರಕರಣದಾಖಲು ಆರೋಪಿ ಬಂಧನ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಸತಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ....