thekarnatakatoday.com
News

ಭ್ರಷ್ಟ ಉಡುಪಿ ಜಿಲ್ಲೆ ಗಣಿ ಅಧಿಕಾರಿ ಸಂದೀಪ್ ಜಿ ಬೆನ್ನಿಗೆ ನಿಂತ ಮಾಜಿ ಸಚಿವ ಹಾಗೂ ಮಾಜಿ ಶಾಸಕ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಉಡುಪಿ ಜಿಲ್ಲೆಯಲ್ಲಿ ಬಾರಿ ಸದ್ದು ಮಾಡುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳದ ಹಿರಿಯ ಭೂ ವಿಜ್ಞಾನಿ ಸಂದೀಪ್ ಜಿ ಬಗ್ಗೆ ಸಾರ್ವಜನಿಕ  ಬಾರಿ ಆಕ್ರೋಶ ವ್ಯಕ್ತವಾಗಿ ಉಡುಪಿ ಜಿಲ್ಲೆಯಿಂದ ವರ್ಗಾವಣೆ ಮಾಡಲಾಗಿತ್ತು.

ಇದೀಗ ಉಡುಪಿ ಜಿಲ್ಲೆಯ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಒಬ್ಬರು ಭ್ರಷ್ಟ ಅಧಿಕಾರಿಯ ಬೆನ್ನ ಹಿಂದೆ ನಿಂತು ವರ್ಗಾವಣೆಯನ್ನು ಹಿಂಪಡೆಯುವಲ್ಲಿ ಕಾರಣರಾದ ಬಗ್ಗೆ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು

ಈ ಬಗ್ಗೆ ಸಾರ್ವಜನಿಕರ ಹೊರತಾಗಿಯೂ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಅಸಮಾಧಾನ ಭುಗಿಲೆದ್ದಿದ್ದುದ್ದು ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಕಾಂಗ್ರೆಸ್ ಮುಖಂಡರು ಯುವ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು

ಈ ಭ್ರಷ್ಟ ಅಧಿಕಾರಿ ಸಂದೀಪ್ ಜಿ ಅವರನ್ನು ಬೇರೆ ಕಡೆಗೆ ವರ್ಗಾವಣೆಗೊಳಿಸಿ ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ಉಡುಪಿ ಜಿಲ್ಲೆಗೆ ನೇಮಕ ಮಾಡುವಂತೆ ಸರಕಾರದಲ್ಲಿ ಸರಕಾರದ ಗಮನ ಸೆಳೆಯುವಂತೆ ಮನವಿ ಸಲ್ಲಿಸಿದ ಘಟನೆ ನಡೆದಿದೆ.

ಇತ್ತೀಚೆಗಷ್ಟೇ ಕೊಡಗು ಜಿಲ್ಲೆಗೆ ವರ್ಗಾವಣೆಯಾದ *ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಶ್ರೀ ಸಂದೀಪ್ ಜಿ* ಅವರನ್ನು ಮತ್ತೆ *ಉಡುಪಿ ಜಿಲ್ಲೆಗೆ ಮರುವರ್ಗಾವಣೆ ಮಾಡಿರುವ

ಈ ನಿರ್ಧಾರವು ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಮುಖಂಡರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಶ್ರೀ ಸಂದೀಪ್ ಜಿಯವರು ಕಳೆದ ಬಿಜೆಪಿ ಸರಕಾರದ ಅವಧಿಯಿಂದಲೂ ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲ ನಾಯಕರ ಒತ್ತಡಕ್ಕೆ ಮಣಿದು ಹಲವಾರು ಗಣಿ ಮಾಫಿಯಾ ಪ್ರಕರಣಗಳಿಗೆ ಕೃಪಾಶ್ರಯ ನೀಡಿದ ಹಿನ್ನೆಲೆ ಇದೆ.

ಇವರ ಮರುವರ್ಗಾವಣೆ, ಜಿಲ್ಲಾ ಮಟ್ಟದ ಪ್ರಾಮಾಣಿಕ ಅಧಿಕಾರಿಗಳ ನಿರೀಕ್ಷೆಯ ವಿರುದ್ಧವಾದುದಾಗಿದ್ದು, ಜಿಲ್ಲೆಯಲ್ಲಿ ರಾಜಕೀಯ ನಿಷ್ಠೆಗಿಂತ ಮೇಲಿರುವ ಆಡಳಿತ ವ್ಯವಸ್ಥೆಗೆ ಧಕ್ಕೆ ತರುತ್ತದೆ.

ಈ ಹಿನ್ನೆಲೆಯಲ್ಲಿ: ಉಡುಪಿ ಜಿಲ್ಲೆಗೆ ಹೊಸ, ಪ್ರಾಮಾಣಿಕ ಹಾಗೂ ತಟಸ್ಥ ಅಧಿಕಾರಿ ನೇಮಕ ಮಾಡಬೇಕು ಪಕ್ಷದ ಕಾರ್ಯಕರ್ತರಲ್ಲಿ ನ್ಯಾಯ ಮತ್ತು ಆತ್ಮವಿಶ್ವಾಸ ಉಳಿಸಿ ಕೊಳ್ಳಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವವರು ಅವರಿಗೆ ಮನವಿ ಸಲ್ಲಿಸಲಾಗಿದ್ದು,

ಈ ನಿರ್ಧಾರದ ವಿರುದ್ಧ ರಾಜ್ಯದ ಉಸ್ತುವಾರಿ ಸಚಿವರಿಗೆ, ಗಣಿ ಸಚಿವರಿಗೆ ಹಾಗೂ ಎಐಸಿಸಿ ನಾಯಕರಿಗೂ ಸಹ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಾಧ್ಯಕ್ಷರು ಪ್ರಖ್ಯಾತ್ ಶೆಟ್ಟಿರವರು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕ್ರಷ್ಣ ಶೆಟ್ಟಿ ಬಜಗೋಳಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ

ಕಾಪು ಯುವ ಕಾಂಗ್ರೆಸ್ ಮುಖಂಡರಾದ ನವೀನ್ ಸಾಲ್ಯಾನ್ ಹಾಗೂ ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಮಮತಾ ಜಿ ನಾಯಕ್ ಹಾಗೂ ಹಲವು ಕಾಂಗ್ರೆಸ್ ಹಿರಿಯ ಕಿರಿಯ ಮುಖಂಡರು ಉಡುಪಿ ಜಿಲ್ಲಾ ಎಲ್ಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ವಿರೋಧವ್ಯಕ್ತಪಡಿಸಿದರು.

Related posts

ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲರಾದರೆ ಪೋಲಿಸ್ ಆಯುಕ್ತರು ಅಥವಾ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಜಿ ಪರಮೇಶ್ವರ್

The Karnataka Today

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ ಮುಂದಿನ 48 ಗಂಟೆಗಳಲ್ಲಿ ಮತ್ತೆ ಬಾರಿ ಮಳೆ ಆಗುವ ಸಂಭವ ರೆಡ್ ಅಲರ್ಟ್ ಘೋಷಣೆ

The Karnataka Today

ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹತ್ಯೆಗೆ ಬಿಜೆಪಿಯಿಂದ ಸಂಚು ಆರೋಪ ಅತಿಶಿ ದೆಹಲಿ ಮುಖ್ಯ ಮಂತ್ರಿ

The Karnataka Today

Leave a Comment