“ದಕ್ಷಿಣ ಕೊಲ್ಕತ್ತಾದ ಕಾನೂನು ಕಾಲೇಜಿನಲ್ಲಿ 24 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರದ ಕುರಿತು ತೃಣಮೂಲ ಕಾಂಗ್ರೆಸ್‌ನ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಸ್ನೇಹಿತೆಯನ್ನು ಸ್ನೇಹಿತನೇ ರೇಪ್ ಮಾಡಿದ್ರೆ ಏನು ಮಾಡೋಕೆ ಆಗುತ್ತೆ! ಎಂಬ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ.
ಸ್ನೇಹಿತೆಯನ್ನು ಸ್ನೇಹಿತನೇ ರೇಪ್ ಮಾಡಿದ್ರೆ ಏನು ಮಾಡೋಕೆ ಆಗುತ್ತೆ. ಪೊಲೀಸರು ಶಾಲೆಗಳಲ್ಲಿ ಇರುತ್ತಾರೆಯೇ? ಓರ್ವ ವಿದ್ಯಾರ್ಥಿ ಇನ್ನೋರ್ವ ವಿದ್ಯಾರ್ಥಿಗೆ ಇದನ್ನು ಮಾಡಿದ್ದಾರೆ. ಹಾಗಾದರೆ ಸಂತ್ರಸ್ತೆಯನ್ನು ಯಾರು ರಕ್ಷಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ
. ಈ ಎಲ್ಲಾ ಅಪರಾಧ ಮತ್ತು ಕಿರುಕುಳವನ್ನು ಯಾರು ಮಾಡುತ್ತಾರೆ? ಕೆಲ ಪುರುಷರು ಮಾಡ್ತಾರೆ. ಆದ್ದರಿಂದ, ಮಹಿಳೆಯರು ಯಾರ ವಿರುದ್ಧ ಹೋರಾಡಬೇಕು? ಮಹಿಳೆಯರು ಈ ವಿಕೃತ ಪುರುಷರ ವಿರುದ್ಧ ಹೋರಾಡಬೇಕು” ಎಂದು ಹೇಳಿದ್ದಾರೆ.
ಇಂತಹ ಹೇಳಿಕೆಗಳು ಸರ್ಕಾರ ಹೊಣೆಗಾರಿಕೆಯನ್ನು ದಿಕ್ಕು ತಪ್ಪಿಸುವಂತೆ ತೋರುತ್ತಿವೆ ಎಂಬ ಟೀಕೆಗೆ ಗುರಿಯಾಗಿದೆ. ಪ್ರಮುಖ ಆರೋಪಿ ಮತ್ತು ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದ ನಡುವಿನ ಸಂಪರ್ಕವನ್ನು ತಿಳಿಸಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.
ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ಬುಧವಾರ ತಡರಾತ್ರಿ ಭದ್ರತಾ ಕೊಠಡಿಯಲ್ಲಿ 24 ವರ್ಷದ ಕೋಲ್ಕತ್ತಾ ಕಾಲೇಜು ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆದಿತ್ತು
ಸಂತ್ರಸ್ಥೆ ನೀಡಿರುವ ದೂರಿನಲ್ಲಿ ಏನಿದೆ? ಸಂತ್ರಸ್ತೆ ನೀಡಿರುವ ಪೊಲೀಸ್ ದೂರಿನ ಪ್ರಕಾರ, ವಿದ್ಯಾರ್ಥಿ ಸಂಘದ ಕಚೇರಿಯ ಪಕ್ಕದಲ್ಲಿರುವ ಸೆಕ್ಯೂರಿಟಿ ಗಾರ್ಡ್ ಕೊಠಡಿಗೆ ಮೂವರು ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಅವರಲ್ಲಿ 31 ವರ್ಷದ ಮಾಜಿ ವಿದ್ಯಾರ್ಥಿ ಮೊನೊಜಿತ್ ಮಿಶ್ರಾ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಮತ್ತಿಬ್ಬರು ಪಕ್ಕದಲ್ಲಿ ನಿಂತು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಮುಖ ಆರೋಪಿ ಮನೋಜಿತ್ ಮಿಶ್ರಾಗೆ ಆಡಳಿತಾರೂಢ ಟಿಎಂಸಿ ಜೊತೆಗೆ ನಂಟಿದೆ ಎನ್ನಲಾಗುತ್ತಿದೆ.