ಉಡುಪಿ ಜಿಲ್ಲಾ ಗಣಿ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ಅಕ್ರಮಗಳ ವಿರುದ್ಧ ದೂರು ನೀಡಿದರೆ ದಂಡ ಕಟ್ಟಿಸಿ  ಕಣ್ಣೋರೆಸುವ ತಂತ್ರ  ಮಾಡುತ್ತಿರುವ ಗಣಿ ಭೂ ವಿಜ್ಞಾನ ಅಧಿಕಾರಿಗಳು

76

ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲಾ ಗಣಿ ಭೂ ವಿಜ್ಞಾನ ಅಧಿಕಾರಿಗಳ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಲೋಕಾಯುಕ್ತಾಹಾಗೂ ಸಂಬಂಧಪಟ್ಟ ಇಲಾಖೆಗಳು ಉಡುಪಿ ಜಿಲ್ಲಾ ಗಣಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ

ಈ ಬಗ್ಗೆ ಕಾರ್ಕಳ ಹಾಗೂ ಉಡುಪಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ಬಗ್ಗೆ ದೂರು ನೀಡಿದರು ಕೂಡ ದೂರು ನೀಡಿದ ವರ ಮಾಹಿತಿಯನ್ನ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ ನೀಡುತ್ತಿರುವ ಬಗ್ಗೆ ಕೂಡ ಅಧಿಕಾರಿಗಳ ವಿರುದ್ಧ ಆರೋಪವಿದೆ

ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಅಕ್ರಮವಾಗಿ ಬಂಡೆಗಲ್ಲು ತೆರವುಗೊಳಿಸಿ  ಹೊಸದಾಗಿ ರಸ್ತೆ ನಿರ್ಮಿಸಿದ ಪ್ರಕರಣದಲ್ಲಿ ಗಣಿ ಇಲಾಖೆ ಹಾಗು ಸಂಬಂಧ ಪಟ್ಟ ಇಲಾಖೆಗಳು ಜಾಣ ಕುರುಡು ಪ್ರದರ್ಶನ ಮಾಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾರ್ವಜನಿಕ ವಲಯದಲ್ಲಿ ವ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ

.ದೂರ ಬಂದ ಹಿನ್ನೆಲೆಯಲ್ಲಿ ಗಣಿ ಅಧಿಕಾರಿಗಳು ಕೇವಲ  ದಂಡ ಕಟ್ಟಿಸಿ ಪ್ರಕರಣವನ್ನು ಮುಗಿಸಿದ ಘಟನೆ ನಡೆದಿದೆ ದೂರು ಅರ್ಜಿ ಗಣಿ ಇಲಾಖೆಯ ಅಧಿಕಾರಿಗಳ  ಸೂಚನಾನುಸಾರ ದಿನಾಂಕ:29.05.2025 ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಅಲೆವೂರು ಗ್ರಾಮ ಪಂಚಾಯತ್ ಅಧಿಕಾರಿಗಳು,

ಉಡುಪಿ ತಾಲ್ಲೂಕು ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪರಿಶೀಲಿಸಿಲಾಗಿ ಸದರಿ ರಸ್ತೆಯಲ್ಲಿ ಹಳೆಯ ರಸ್ತೆಯಿದ್ದು ಮತ್ತು ಕೊಡಂಗಳ ರಸ್ತೆಯಿಂದ ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಲ್ಲನ್ನು ತೆಗೆದು ರಸ್ತೆ ನಿರ್ಮಾಣ ಮಾಡಿರುವುದು ಪರಿಶೀಲನೆ ಸಮಯದಲ್ಲಿ ಕಂಡುಬಂದಿರುತ್ತದೆ.

ಸದರಿ ಜಾಗದಲ್ಲಿ ಅಂದಾಜು 13 ಮೆಟನ್‌ಷ್ಟು ಕಲ್ಲನ್ನು ತೆಗೆದಿರುವುದು ಕಂಡುಬಂದಿದ್ದು ಸದರಿ ಕಲ್ಲಲ್ಲಿ ಸ್ವಲ್ಪ ಪ್ರಮಾಣ ದೇವಸ್ಥಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯ ತಗ್ಗು ಜಾಗದಲ್ಲಿ ಹಾಗೂ ರಸ್ತೆಯ ಬದಿಯಲ್ಲಿ ಹಾಕಿ ರಸ್ತೆ ಮಾಡಿರುವುದು ಪರಿಶೀಲನೆ ಸಮಯದಲ್ಲಿ ಕಂಡುಬಂದಿರುತ್ತದೆ.

ಅನಧಿಕೃತವಾಗಿ ಕಲ್ಲನ್ನು ತೆಗೆದಿರುವುದಕ್ಕೆ ಶ್ರೀ ವಾಸುದೇವ ಭಟ್ ರವರಿಗೆ ನಿಯಮಾನುಸಾರ ಈ ಕಛೇರಿಯಿಂದ ದಿನಾಂಕ:02.06.2025 ರಂದು ನೊಟೀಸ್ 220,410/- 4 : MG06250043114958200 ಮುಖಾಂತರ ಸರ್ಕಾರಕ್ಕೆ ಪಾವತಿಸಿಕೊಳ್ಳಲಾಗಿರುತ್ತದೆ.

ಮುಂದುವರೆದು ಕಛೇರಿಯಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಲಾಗಿ ಸದರಿ ಪ್ರದೇಶದಲ್ಲಿ ರಸ್ತೆ ಪಕ್ಕದ ಕಲ್ಲನ್ನು ತೆಗೆಯಲು ಅನುಮತಿಗಾಗಿ ಈ ಕಛೇರಿಗೆ ಅರ್ಜಿ ಸಲ್ಲಿಸಿರುವುದಿಲ್ಲ ಹಾಗೂ ಅನುಮತಿ ಪಡೆದಿರುವುದು ಕಂಡುಬಂದಿರುವುದಿಲ್ಲ. ಈ ಮಾಹಿತಿಯನ್ನು ತಮ್ಮ ಅವಗಾಹನೆಗಾಗಿ ಹಾಗಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ. ಎಂದು ತಿಳಿಸಿ ಪ್ರಕರಣದಲ್ಲಿ ಕೈ ತೊಳೆದುಕೊಂಡಿದೆ

Leave a comment

Leave a Reply

Your email address will not be published. Required fields are marked *

Related Articles

ನಮ್ಮಿಂದ ಬಿಜೆಪಿ ಹಾಳಾಗಿಲ್ಲ: ನಮ್ಮಿಂದಾಗಿ ಮಂತ್ರಿಯಾಗಿ ಲಂಚ ಪಡೆದು ನೀವು ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ನೀವು ಕಾರಣರಾದೀರಿ ಈಶ್ವರಪ್ಪಗೆ:: ಬಿ ಸಿ ಪಾಟೀಲ್ ತಿರುಗೇಟು

ಬೆಂಗಳೂರು: ಈ ಹಿಂದೆ ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ...

ಪಿ ಎಚ್ ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಿ ಪ್ರಾಧ್ಯಾಪಕನ ಅಮಾನತು

“ಧಾರವಾಡ: ಪಿ ಎಚ್ ಡಿ  ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ...

ಕೊಲ್ಲೂರು ದೇವಿಗೆ 1 ಕೆಜಿ 600 ಗ್ರಾಮದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್

“ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಮೂಕಾಂಬಿಕೆ...

ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ, ಮೆಟ್ರೋ ಮೂರನೇ ಹಂತ ಯೋಜನೆಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

“ನವದೆಹಲಿ: ಸಿಎಂ ಡಿಕೆ ಶಿವಕುಮಾರ್ ಅವರು ಇಂದು ಕೇಂದ್ರ ಇಂಧನ, ವಸತಿ ಮತ್ತು ನಗರಾಭಿವೃದ್ಧಿ ಸಚಿವ...