ಮಳೆಯಲ್ಲಿ ಬೀದಿ ಪಾಲಾಗಿದ್ದ ಅಸಹಾಯಕ ವೃದ್ಧರ ರಕ್ಷಣೆ ಕುಟುಂಬಿಕರ ಪತ್ತೆಗಾಗಿ ಮನವಿ ಮಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ

72

*ಮಳೆಯಲ್ಲಿ ನೆನೆಯುತ್ತಿದ್ದ 85ರ ಅಸಹಾಯಕ ವೃದ್ಧರ ರಕ್ಷಣೆ:

ಉಡುಪಿ ಜೂ. 12 ಆದಿಉಡುಪಿಯ ಪಂದುಬೆಟ್ಟುವಿನಲ್ಲಿ ಮಳೆಯಲ್ಲಿ ನೆನೆಯುತ್ತಿದ್ದ ಅಸಹಾಯಕರಾಗಿ ದುಃಖಿಸುತ್ತಿದ್ದ ಬೀದಿಪಾಲಾದ ವೃದ್ದರನ್ನು ವಿಶು ಶೆಟ್ಟಿ ಅಂಬಲಪಾಡಿಯವರು ಅಂಬಲಪಾಡಿಯ ಪಂಚಾಯಿತಿ ಸದಸ್ಯೆ ಭಾರತಿ ಭಾಸ್ಕರ್ ಸಹಾಯದಿಂದ ರಕ್ಷಿಸಿ ಉದ್ಯಾವರದ ಕನಸಿನ ಮನೆ ಆಶ್ರಮಕ್ಕೆ ದಾಖಲಿಸಿದ ಘಟನೆ ನಡೆದಿದೆ.

ಸ್ಥಳೀಯರಾಗಿದ್ದ ವೃದ್ಧರು ಶಿವ ಪೂಜಾರಿ (85) ಅವಿವಾಹಿತರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇದೀಗ ವೃದ್ಧಾಪ್ಯದಲ್ಲಿ ಅಸಹಾಯಕರಾಗಿ ಬೀದಿಪಾಲಾಗಿದ್ದಾರೆ.

ಧಾರಾಕಾರವಾಗಿ ಸುರಿಯುವ ಮಳೆಯಲ್ಲಿ ಸರಿಯಾಗಿ ಅನ್ನ ಆಹಾರವಿಲ್ಲದೆ ಸ್ಥಳೀಯ ದೈವಸ್ಥಾನದ ಕಲ್ಲು ಚಪ್ಪಡಿ ಆಡಿಯಲ್ಲಿ ಆಶ್ರಯ ಪಡೆದು ದುಃಖಿತರಾಗಿ ಅತಂತ್ರರಾಗಿದ್ದರು. ಮನೆ ಇಲ್ಲದ ವೃದ್ಧರು ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದಿನಕಳೆಯುತ್ತಿದ್ದರು.

ಈ ಬಗ್ಗೆ ಪಂಚಾಯತ್ ಸದಸ್ಯೆ ವೃದ್ಧರನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ಸ್ಪಂದಿಸುವ ಸಂಬಂಧಿಕರು ಅಥವಾ ಸಂಬಂಧಪಟ್ಟವರು ಉದ್ಯಾವರ ಕನಸಿನ ಮನೆ ಆಶ್ರಮವನ್ನು ಸಂಪರ್ಕಿಸಲು ವಿಶು ಶೆಟ್ಟಿಯವರು ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಕಾರ್ಕಳ ಟೈಗರ್ಸ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ–ಮಧುಮೇಹ ತಪಾಸಣೆ ಶಿಬಿರ

ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್...

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...