thekarnatakatoday.com
National

ಮಣಿಪುರ್ ಅಸ್ಸಾಂ ರೈಫಲ್ಸ್ ಯೋಧರಿಂದ 10 ಉಗ್ರರ ಹತ್ಯೆ ಮುಂದುವರಿದ ಕಾರ್ಯಾಚರಣೆ

“: ಮಣಿಪುರದ ಚಂದೇಲ್‌ ಜಿಲ್ಲೆಯಲ್ಲಿ ಉಗ್ರರು ಮತ್ತು ಅಸ್ಸಾಂ ರೈಫಲ್ಸ್ ಘಟಕದೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 10 ಮಂದಿ ಉಗ್ರರು ಹತ್ಯೆಯಾಗಿದ್ದಾರೆ.

ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತು ಸೇನೆಯ ಪೂರ್ವ ಕಮಾಂಡ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.,


‘ಭಾರತ-ಮ್ಯಾನ್ಮಾರ್ ಗಡಿಗೆ ಸಮೀಪವಿರುವ ಚಂದೇಲ್ ಜಿಲ್ಲೆಯ ಖೆಂಗ್‌ಜಾಯ್ ತಹಸಿಲ್‌ನ ನ್ಯೂ ಸಮ್ತಾಲ್ ಗ್ರಾಮದ ಬಳಿ ಉಗ್ರರ ಚಲನವಲನಗಳ ಬಗ್ಗೆ ಗುಪ್ತಚರ ಅಧಿಕಾರಿಗಳು ನೀಡಿದ ಖಚಿತ ಮಾಹಿತಿ ಆಧರಿಸಿ ಅಸ್ಸಾಂ ರೈಫಲ್ಸ್ ಘಟಕವು ಮೇ 14 ರಂದು (ಬುಧವಾರ) ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ಈ ವೇಳೆ ಶಂಕಿತರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಸೇನಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ.

ಒಟ್ಟು 10 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related posts

ಮತ್ತೆ ಭುಗಿಲೆದ್ದ  ಮಣಿಪುರದಲ್ಲಿ ಹಿಂಸಾಚಾರ ಇಂಟರ್ನೆಟ್ ಸೇವೆ ಸ್ಥಗಿತ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ

The Karnataka Today

ರೈಲ್ವೆ ಯೋಜನೆಗಳು ಮತ್ತು ಪ್ಯಾನ್ ಕಾರ್ಡ್ 2.0ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

The Karnataka Today

ವಯನಾಡು ಶಬರಿಮಲೆ ಯಾತ್ರಿಗಳ ಬಸ್ ಅಪಘಾತ 27 ಮಂದಿಗೆ ಗಾಯ ಆಸ್ಪತ್ರೆಗೆ ದಾಖಲು

The Karnataka Today

Leave a Comment

Join our WhatsApp community