ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ಬಿಜೆಪಿ ಬಲಿಷ್ಠ ಸಂಘಟನೆಯಾಗಿದೆ ಇಂಡಿಯಾ ಒಕ್ಕೂಟ ಒಡೆದ ಮನೆಯಂತಾಗಿದೆ:: ಪಿ ಚಿದಂಬರಂ

4

“ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಹಳಿತಪ್ಪಿರುವಂತೆ ಕಂಡು ಬರುತ್ತಿದೆ. ಅವುಗಳ ಮಧ್ಯೆ ಒಗ್ಗಟ್ಟಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ ಚಿದಂಬರಂ ಅವರು ಕಳವಳ ವ್ಯಕ್ತಪಡಿಸಿದ್ದಾರೆ

. ಸಲ್ಮಾನ್ ಖುರ್ಷಿದ್ ಮತ್ತು ಮೃತ್ಯುಂಜಯ್ ಸಿಂಗ್ ಯಾದವ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿದಂಬರಂ, 2029ರ ಚುನಾವಣೆ ಇಂಡಿಯಾ ಮೈತ್ರಿಕೂಟಕ್ಕೆ ನಿರ್ಣಾಯಕವಾಗಲಿದೆ. ಸದ್ಯದ ಮಟ್ಟಿಗೆ ನಮ್ಮ ಮೈತ್ರಿಕೂಟವು ಒಡೆದಂತೆ ಕಾಣುತ್ತದೆ ಎಂದು ಚಿದಂಬರಂ ಅಭಿಪ್ರಾಯ ಪಟ್ಟಿದ್ದಾರೆ.

ಇಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ನನ್ನ ಅನುಭವದ ಪ್ರಕಾರ ಹೇಳುವುದಾದರೇ ಬಿಜೆಪಿ ಬಲಿಷ್ಠ ಸಂಘಟನೆಯಾಗಿದೆ ಎಂದು ಹೇಳುವುದರಲ್ಲಿ ನನಗೆ ಯಾವುದೇ ಹಿಂಜರಿಕೆ ಇಲ್ಲ. ಅದೇ, ಇನ್ನೊಂದು ಕಡೆ ನಮ್ಮ ಮೈತ್ರಿಕೂಟ ಒಡೆದ ಮನೆಯಂತಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

ಮೃತ್ಯುಂಜಯ್ ಸಿಂಗ್ ಯಾದವ್ ಹೇಳಿದಂತೆ ಇಂಡಿಯಾ ಒಕ್ಕೂಟದ ಭವಿಷ್ಯವು ಅಷ್ಟೊಂದು ಉಜ್ವಲವಾಗಿಲ್ಲ. ಮೈತ್ರಿಕೂಟದಲ್ಲಿ ಇನ್ನೂ ಒಗ್ಗಟ್ಟು ಇದೆ ಎಂದು ಅವರು ಭಾವಿಸುತ್ತಿರುವಂತೆ ತೋರುತ್ತದೆ.

ಆದರೆ ಆ ಬಗ್ಗೆ ನನಗೆ ಖಚಿತತೆ ಇಲ್ಲ. ಈ ಬಗ್ಗೆ ಸಲ್ಮಾನ್ ಖುರ್ಷಿದ್ ಅವರು ಮಾತ್ರ ಉತ್ತರಿಸಬಹುದು. ಏಕೆಂದರೆ ಸಲ್ಮಾನ್ ಅವರು ಇಂಡಿಯಾ ಒಕ್ಕೂಟದ ಮಾತುಕತೆ ನಡೆಸಿದ ತಂಡದ ಭಾಗವಾಗಿದ್ದರು.

ಚುನಾವಣಾ ಆಯೋಗದಿಂದ ಹಿಡಿದು ಪೊಲೀಸ್ ಠಾಣೆಯವರೆಗೆ ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಬಿಜೆಪಿಗಿದೆ, ಇದು ವಾಸ್ತವತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುಮತಿಸಬಹುದಾದ ಬಲಿಷ್ಠ ಯಂತ್ರವಿದು.

ಸಲ್ಮಾನ್ ಖುರ್ಷಿದ್ ಮತ್ತು ಯಾದವ್ ಅವರ ಪುಸ್ತಕವು, ಕಾಂಗ್ರೆಸ್ ಪಾರ್ಟಿಯ ಪುನಶ್ಚೇತನದ ಬಗ್ಗೆ ಬೆಳಕು ಚೆಲ್ಲುತ್ತದೆ. ನಮ್ಮ ದೇಶದ ಏಕತೆ ಕಾಪಾಡಿಕೊಳ್ಳಲು ವಿರೋಧ ಪಕ್ಷಗಳು ಒಗ್ಗೂಡಿದ್ದವು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಪಿ.ಚಿದಂಬರಂ ಹೇಳಿದ್ದಾರೆ

. ಮೈತ್ರಿಕೂಟ ಸಂಪೂರ್ಣವಾಗಿ ಒಗ್ಗಟ್ಟಿನಿಂದ ಇದ್ದರೆ, ನಾನು ತುಂಬಾ ಸಂತೋಷಪಡುತ್ತೇನೆ. ಆದರೆ ಅಲ್ಲಿ ಒಗ್ಗಟ್ಟು ಇಲ್ಲ ಎಂಬುದು ಕ್ಷಣಾರ್ಧದಲ್ಲಿ ತಿಳಿದು ಬರುತ್ತದೆ ಎಂದು ಚಿದಂಬರಂ ಹೇಳಿದರು. ಮೈತ್ರಿಕೂಟವನ್ನು ಒಟ್ಟಿಗೆ ಸೇರಿಸಬಹುದು, ಇನ್ನೂ ಅದಕ್ಕೆ ಸಮಯವಿದೆ.

ಇಂಡಿಯಾ ಒಕ್ಕೂಟವು ಅಸಾಧಾರಣ ವ್ಯವಸ್ಥೆಯೊಂದರ ವಿರುದ್ಧ ಹೋರಾಡುತ್ತಿದೆ. ಅದನ್ನು ಎದುರಿಸಲು ಎಲ್ಲಾ ರಂಗಗಳಲ್ಲಿಯೂ ಹೋರಾಡಬೇಕು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವರೂ ಆದ ಪಿ. ಚಿದಂಬರಂ ಎಚ್ಚರಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಇತಿಹಾಸ ಜ್ಞಾನ ಎಳ್ಳಷ್ಟೂ ಇಲ್ಲದ ಸಚಿವ ಮಹದೇವಪ್ಪ ಇತಿಹಾಸ ತಿಳಿದು ಮಾತನಾಡಲಿ ::ಸಂಸದ ಯದುವೀರ್ ಒಡೆಯರ್

“ಕೃಷ್ಣರಾಜ ಸಾಗರ ಜಲಾಶಯಕ್ಕೆ ಟಿಪ್ಪುಸುಲ್ತಾನ್‌ ಮೊದಲ ಅಡಿಗಲ್ಲು ಹಾಕಿದ್ದರು ಎಂಬ ಸಚಿವ ಮಹದೇವಪ್ಪ ಅವರ ಹೇಳಿಕೆ...

ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಾಗಿ 50 ಕೋಟಿ ಅನುದಾನ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

“ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ. 50...

ರಾಜ್ಯ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಸಂಚಲನ ಮೂಡಿಸಿದ್ದ ಆರೋಪದ ಆಡಿಯೋ ನನ್ನದೇ, ನನ್ನ ಆರೋಪಕ್ಕೆ ನಾನು ಬದ್ಧ; ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ್‌

ಬೆಂಗಳೂರು: ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ಫ‌ರಾಜ್‌...

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಬಡವರ ಬದುಕಿಗಾಗಿ ಕಾರ್ಯಕ್ರಮ :: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ದಾವಣಗೆರೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಬಡವರ ಬದುಕಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಸಮಾಜದಲ್ಲಿ ಪುಟಾಣಿ ಮಕ್ಕಳಿಂದ...