ಭಾರತ ವಿರುದ್ಧ ಡ್ರೋನ್ ದಾಳಿಗೆ ಪಾಕಿಸ್ತಾನದ ಜೊತೆಗೆ ನೇರವಾಗಿ ದಾಳಿಯಲ್ಲಿ ಭಾಗಿಯಾದ ಟರ್ಕಿ

2

“ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಮಿತ್ರರಾಷ್ಟ್ರವೆಂದು ಹೇಳುತ್ತಿದ್ದ ಟರ್ಕಿಯ ದ್ರೋಹ ಬಯಲಾಗಿದೆ.

ಅಗತ್ಯ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಭಾರತದಿಂದ ಸಹಾಯ ಪಡೆದುಕೊಂಡಿದ್ದ ಟರ್ಕಿ ದೇಶವು ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ.

ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ಪ್ರತಿದಾಳಿಯಲ್ಲಿ ಟರ್ಕಿ ರಾಷ್ಟ್ರ ಕೂಡಾ ಭಾಗಿಯಾಗಿತ್ತು ಎಂಬ ಸ್ಫೋಟಕ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಭಾರತದ ವಿರುದ್ಧ ಪಾಕಿಸ್ತಾನಕ್ಕೆ ನೇರ ಬೆಂಬಲ ನೀಡಿದ್ದ ಟರ್ಕಿ, ಡ್ರೋನ್ ಸೇರಿದಂತೆ ಹಲವು ಶಸ್ತ್ರಾಸ್ತ್ರ ನೀಡಿತ್ತು ಎಂಬುದು ಈ ಮೊದಲೇ ಭಾರತೀಯ ಸೇನಾ ಪಡೆಗಳ ಅರಿವಿಗೆ ಬಂದಿತ್ತು.

ಆದರೆ, ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ದಾಳಿಗೆ ಪಾಕ್‌ಗೆ ವಿದೇಶಿ ದೇಶವೊಂದರ ಸೇನಾಪಡೆ ಬೆಂಬಲ ನೀಡಿರುವ ವಿಷಯ ಬೆಳಕಿಗೆ ಬಂದಿದೆ.

ಇದು ಮುಂಬರುವ ದಿನಗಳಲ್ಲಿ ಭಾರತ ಮತ್ತು ಟರ್ಕಿ ದೇಶದ ನಡುವಣ ದ್ವಿಪಕ್ಷೀಯ ಸಂಬಂಧಕ್ಕೆ ಭಾರೀ ಪೆಟ್ಟು ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ವಿರುದ್ಧ 350ಕ್ಕೂ ಹೆಚ್ಚು ಡೋನ್ ದಾಳಿಗೆ ನೆರವು ನೀಡಿತ್ತು. ಜೊತೆಗೆ ಮಿಲಿಟರಿಗೆ ಸೇರಿದ ಡ್ರೋನ್ ಆಪರೇಟರ್ ಗಳನ್ನೂ ಒದಗಿಸಿದ್ದು ಇದೀಗ ಬೆಳಕಿಗೆ ಬಂದಿದೆ

ಪಾಕಿಸ್ತಾನ ದಾಳಿಗೆ ಭಾರತದ ನೀಡಿದ್ದ ದಿಟ್ಟ ಉತ್ತರಕ್ಕೆ ಟರ್ಕಿಯ ಇಬ್ಬರು ಯೋಧರು ಸಾವನ್ನಪ್ಪಿದ್ದು, ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಟರ್ಕಿ ನೇರವಾಗಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ

. ಮೂಲಗಳ ಪ್ರಕಾರ ಟರ್ಕಿಯ ಸಲಹಾಕಾರರು ಭಾರತದ ವಿರುದ್ಧ ಡ್ರೋನ್ ದಾಳಿ ನಡೆಸಲು ಸಮನ್ವಯಕಾರರರಾಗಿ ಕೆಲಸ ಮಾಡಿದ್ದಾರೆಂದು ತಿಳಿದುಬಂದಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಟರ್ಕಿಯ ಸೇನಾಪಡೆ ಪಾಲ್ಗೊಂಡ ಪ್ರತಿಕ್ರಿಯೆಯಾಗಿ, ಭಾರತ ಬುಧವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಟರ್ಕಿಶ್ ರಾಜ್ಯ ಪ್ರಸಾರಕ ಟಿಆರ್‌ಟಿಯ ಖಾತೆಗೆ ಪ್ರವೇಶವನ್ನು ನಿರ್ಬಂಧಿಸಿದೆ.

ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಿ ದಾಳಿಗಳು ಟರ್ಕಿಶ್ ನಿರ್ಮಿತ ಡ್ರೋನ್‌ಗಳನ್ನು ಬಳಸಿಕೊಂಡು ಲೇಹ್‌ನಿಂದ ಸರ್ ಕ್ರೀಕ್‌ವರೆಗಿನ 36 ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಭಾರತೀಯ ಸೇನೆಯು ಈ ಹಿಂದೆ ದೃಢಪಡಿಸಿತು.

ಮೇ.7,8ರ ಮಧ್ಯ ರಾತ್ರಿಯಲ್ಲಿ ಪಾಕಿಸ್ತಾನ ಸೇನಾ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಭಾರತೀಯ ಸೇನಾನೆಲೆಯನ್ನು ಗುರಯಾಗಿಸಿ ಸುಮಾರು 300 ರಿಂದ 400 ಡ್ರೋನ್ಗಳನ್ನು ಬಳಸಿದೆ. ಅಲ್ಲದೆ, ಡ್ರೋನ್ ಅವಷೇಶಗಳ ಬಗ್ಗೆ ವಿಧಿ ವಿಜ್ಞಾನ ತನಿಖೆ ನಡೆಸುತ್ತಿದೆ.

ಆರಂಭಿಕ ವರದಿಗಳ ಅವುಗಳು ಟರ್ಕಿಶ್ ಆಸಿಸ್ಗಾರ್ಡ್ ಸೊಂಗರ್ ಡ್ರೋನ್ಗಳು ಎಂದು ಸೂಚಿಸುತ್ತದೆ ಎಂದು ಕರ್ನಲ್ ಸೋಫಿಯಾ ಖುರೇಷಿ ‘ ಆಪರೇಷನ್ ಸಿಂಧೂರ’ ಕಾರ್ಯಚರಣೆಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು

Leave a comment

Leave a Reply

Your email address will not be published. Required fields are marked *

Related Articles

ಕೇರಳ ನರ್ಸ್ ನಿಮಿಷಾ ಪ್ರಿಯಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಯೆಮೆನ್ ಗಲ್ಲು ಶಿಕ್ಷೆ ರದ್ದಾಗಿಲ್ಲ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ನವದೆಹಲಿ: ಯುದ್ಧಪೀಡಿತ ಯೆಮೆನ್ ದೇಶದಲ್ಲಿ ಮರಣದಂಡನೆ ಎದುರಿಸುತ್ತಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣಕ್ಕೆ...

ಮ್ಯಾನ್ಮಾರ್‌ನಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್?: ಡ್ರೋನ್ ದಾಳಿಯಲ್ಲಿ ಉಲ್ಫಾ-ಐ ಕಮಾಂಡರ್ ನಯನ್ ಮೇಧಿ ಸೇರಿ 19 ಮಂದಿ ಸಾವು

ಮ್ಯಾನ್ಮಾರ್‌ನ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ULFA) ತನ್ನ ಪೂರ್ವ ಪ್ರಧಾನ ಕಚೇರಿಯ...

ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಬಂಧ ಹೊಂದಿದ್ದ ಮೋಸ್ಟ್ ವಾಂಟೆಡ್ ಉಗ್ರ ಪವಿತ್ರ ಸಿಂಗ್ ಬಟಾಲ ಬಂಧನ

“ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಪರ್ಕ ಹೊಂದಿರುವ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಸಂಘಟನೆಯೊಂದಿಗೆ ಸಂಬಂಧ...

ಕೈಲಾಸ ಮಾನಸ ಸರೋವರ ಯಾತ್ರೆ ಸೇತುವೆ ಕುಸಿತದಿಂದ ಗೈರಾ೦ಗ್ ಕೌಂಟಿಯಲ್ಲಿ ಸಿಲುಕಿಕೊಂಡ 23 ಯಾತ್ರಿಗಳು

“ಭೂಕುಸಿತದಿಂದಾಗಿ ಸೇತುವೆ ಕುಸಿದ ಪರಿಣಾಮ, ಕೈಲಾಸ ಮಾನಸಸರೋವರಕ್ಕೆ ತೆರಳುತ್ತಿದ್ದ 23 ಯಾತ್ರಿಕರ ಗುಂಪು ಟಿಬೆಟ್‌ನ ಗೈರಾಂಗ್...