ಪಾಕಿಸ್ತಾನ ಪರ ಪೋಸ್ಟ್ ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ವಿರುದ್ಧ ಪ್ರಕರಣ ದಾಖಲು

3

“ಅತ್ತ ಗಡಿ ಪ್ರದೇಶಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ನಡೆಯುತ್ತಿರುವಂತೆಯೇ ಇತ್ತ ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಪರ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾಳೆ

. ಹೌದು.. ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ವಿರುದ್ಧ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಕಿಸ್ತಾನದ ಪರ ಸರಣಿ ಪೋಸ್ಟ್ ಮಾಡಿದ ಆರೋಪದ ಮೇರೆಗೆ ಆಕೆಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ವಿದ್ಯಾರ್ಥಿನಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲೂ ವಿದ್ಯಾರ್ಥಿನಿ ನಡೆಗೆ ಅಸಮಾಧಾನ ಏರ್ಪಟ್ಟಿತ್ತು. ಈ ಬೆಳವಣಿಗೆ ಬೆನ್ನಲ್ಲೇ ವಿದ್ಯಾರ್ಥಿನಿ ತನ್ನ ವಿವಾದಿತ ಪೋಸ್ಟ್ ಅನ್ನು ತೆಗೆದುಹಾಕಿದ್ದಾಳೆ

ವಿದ್ಯಾರ್ಥಿನಿ ತಶೌಧ್ ಫಾರೂಕಿ ಶೇಖ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿವಾದಿತ ಪೋಸ್ಟ್ ಹಂಚಿಕೊಂಡಿದ್ದಾರೆ, “ನನ್ನ ಪಾಕಿಸ್ತಾನಿ ಸ್ನೇಹಿತರಿಗೆ, ಐಒಜೆಕೆ (ಭಾರತೀಯ ಆಕ್ರಮಿತ ಜೆಕೆ) ಜನರು ಮಿಲಿಟರಿ, ಸರ್ಕಾರಿ ಸ್ಥಾಪನೆಗಳ ಬಳಿ ಹೋಗುವುದನ್ನು ತಪ್ಪಿಸಿ. ನೀವು ಗಡಿ ವ್ಯಾಪ್ತಿಯಲ್ಲಿ 200 ಕಿಮೀ ಹತ್ತಿರ ವಾಸಿಸುತ್ತಿದ್ದರೆ,

ದಯವಿಟ್ಟು ಒಳನಾಡಿಗೆ ತೆರಳಿ. ಅಲ್ಲಾಹನು ಭಾರತದಿಂದ ನಮ್ಮೆಲ್ಲರನ್ನೂ ರಕ್ಷಿಸಲಿ, ಅಮೀನ್ #SOS. ಎಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಳು. ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರ ಪ್ರಕಾರ, ವಿದ್ಯಾರ್ಥಿನಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪರಿಚಿತ ಮೂಲಗಳಿಂದ ಪಡೆದ ಹಲವಾರು ವಿವಾದಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿನಿ ತನ್ನ ವೈದ್ಯಕೀಯ ಪದವಿ ಮುಗಿದ ನಂತರ ಇಂಟರ್ನ್‌ಶಿಪ್ ಮಾಡುತ್ತಿದ್ದು, ಮುಂಬೈ ನಿವಾಸಿಯಾಗಿದ್ದಾರೆ. ಆಕೆಯ ಎಲ್ಲಾ ಪೋಸ್ಟ್‌ಗಳು ವೈರಲ್ ಆಗದಂತೆ ತಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. “

ನಾವು ತನಿಖೆ ನಡೆಸುತ್ತೇವೆ,” ಎಂದು ಹೇಳಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ವಿರುದ್ಧ ಬಿಎನ್ಎಸ್ ಸೆಕ್ಷನ್ 152 ಮತ್ತು 197 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪೋಸ್ಟ್ ಡಿಲೀಟ್, ಕ್ಷಮೆಯಾಚನೆ ಏತನ್ಮಧ್ಯೆ, ತಶೌಧ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ತನ್ನ ಹೇಳಿಕೆಯಿಂದ ನೋಯಿಸಲ್ಪಟ್ಟ ಎಲ್ಲರಿಗೂ ಕ್ಷಮೆಯಾಚಿಸುವುದಾಗಿ ವಿದ್ಯಾರ್ಥಿನಿ ಹೇಳಿದ್ದಾರೆ. “ಒಬ್ಬ ಭಾರತೀಯಳಾಗಿ, ನಾನು ದೇಶಭಕ್ತ ಮತ್ತು ನನ್ನ ಮಾತೃಭೂಮಿಯನ್ನು ಪ್ರೀತಿಸುತ್ತೇನೆ.

ಅಂತಹ ಹೇಳಿಕೆಗಳನ್ನು ನೀಡಿದ್ದು ನನ್ನ ಕಡೆಯಿಂದ ಮೂರ್ಖತನ. ಇನ್ನು ಮುಂದೆ ನಾನು ಅಂತಹ ಹೇಳಿಕೆಗಳನ್ನು ಎಂದಿಗೂ ಮಾಡುವುದಿಲ್ಲ. ಜೈ ಹಿಂದ್,” ಎಂದು ಇನ್ಸ್ಟಾಗ್ರಾಮ್ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾಳೆ

Leave a comment

Leave a Reply

Your email address will not be published. Required fields are marked *

Related Articles

ಉಡುಪಿ ನಗರ ಸರಣಿ ಮನೆ ಕಳ್ಳತನ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿದ ವಿಶೇಷ ಪೊಲೀಸ್ ತಂಡ

“ನಗರದಲ್ಲಿ ಸರಣಿ ಮನೆಗಳ್ಳತನ ಪ್ರಕರಣದ ಅಂತರ್‌ ರಾಜ್ಯ ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸ್ ವರಿಷ್ಠಾಧಿಕಾರಿ ಅವರ...

ಮೈಸೂರಿನಲ್ಲಿ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಆರು ಮಂದಿ ಬಂಧನ ಮಹಾರಾಷ್ಟ್ರ ಮೈಸೂರು ಪೊಲೀಸರ ಜಂಟಿ ಕಾರ್ಯಚರಣೆ

“ಸಾಂಸ್ಕೃತಿಕ.  ನಗರಿ ಮೈಸೂರಿನಲ್ಲಿ ಸಿಂಥೆಟಿಕ್‌ ಡ್ರಗ್ಸ್ ಎಂಡಿಎಂಎ ತಯಾರಿಕಾ ಘಟಕ   ಪತ್ತೆಯಾಗಿದ್ದು ಕೋಟ್ಯಾಂತರ ರೂ   ಮೌಲ್ಯದ ...

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 40 ಕೋಟಿಗೂ ಅಧಿಕ ಹಣ ವಂಚಿಸಿದ್ದ ಆರೋಪಿಯನ್ನು ಬಂಧಿಸಿದ ಕಾರವಾರ ಪೊಲೀಸ್

‘ಡಿಜಿಟಲ್ ಅರೆಸ್ಟ್’ ವಂಚನೆ: ರಾಷ್ಟ್ರವ್ಯಾಪಿ ರೂ 40 ಕೋಟಿ ವಂಚಿಸಿದ ಆರೋಪಿ ಬಂಧನ ಕಾರವಾರ: ‘ಡಿಜಿಟಲ್...

180 ಜನರ ಸಾವಿಗೆ ಕಾರಣವಾಗಿದ್ದ 7/11 ಮುಂಬೈ ರೈಲು ಬಾಂಬ್ ಸ್ಫೋಟ ಪ್ರಕರಣ: ಸಾಕ್ಷಾಧಾರ ಕೊರತೆ ಎಲ್ಲಾ 12 ಆರೋಪಿಗಳು ಖುಲಾಸೆ.

2006 ರ ಮುಂಬೈ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 12 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ...