ರೊಟರಾಕ್ಟ್ ಕ್ಲಬ್ ಉಡುಪಿಯಿಂದ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಸೇವಾಕಾರ್ಯ

3

ರೊಟರಾಕ್ಟ್ ಕ್ಲಬ್ ಉಡುಪಿಯ ವಾರ್ಷಿಕ ಜಿಲ್ಲಾ ರೊಟರಾಕ್ಟ್ ಪ್ರತಿನಿಧಿಯ ಅಧಿಕೃತ ಭೇಟಿಯ ಪ್ರಯುಕ್ತ, ಕುಕ್ಕಿಕ್ಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.

ರೋಟರಿ ಕ್ಲಬ್ ಉಡುಪಿ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಬಾಲನಿಕೇತನದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪುಸ್ತಕಗಳು, ಛತ್ರಿಗಳು ಹಾಗೂ ಇತರ ಕಚೇರೀ ವಸ್ತುಗಳನ್ನು ವಿತರಿಸಲಾಯಿತು. ಜೊತೆಗೆ, ಹತ್ತನೇ ತರಗತಿ ವ್ಯಾಸಂಗ ಮುಗಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಐದು ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರೊಟರಾಕ್ಟ್ ಪ್ರತಿನಿಧಿ ರೋ. ಚೇತನ್ ಕುಮಾರ್, ಜಿಲ್ಲಾ ರೊಟರಾಕ್ಟ್ ಸಭಾಪತಿ ರೋ. ನವೀನ್ ಅಮೀನ್, ರೋಟರಿ ಉಡುಪಿ ಅಧ್ಯಕ್ಷ ರೋ. ಗುರುರಾಜ್ ಭಟ್, ರೋಟರೀ ಉಡುಪಿಯ ರೊಟರಾಕ್ಟ್ ಸಭಾಪತಿ ರೋ. ಬಿ.ಕೆ. ನಾರಾಯಣ್ ಹಾಗೂ ಮಾಜಿ ಜಿಲ್ಲಾ ಪ್ರತಿನಿಧಿ ರೋ. ಮಹಾಲಸ ಕಿಣಿ ಉಪಸ್ಥಿತರಿದ್ದರು.

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ರೊಟರಾಕ್ಟ್ ಅಸೆಂಬ್ಲಿಯಲ್ಲಿ ಭಾಗವಹಿಸಿ, ನೂತನ ರೊಟರಾಕ್ಟ್ ಸದಸ್ಯರಿಗೆ ದಿಶಾನಿರ್ದೇಶನ ನೀಡಿದ ರೋ. ಮಹಾಲಸ ಕಿಣಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ರೀತಿ, ಪ್ರಸ್ತುತ ಜಿಲ್ಲಾ ಪ್ರತಿನಿಧಿಯಾಗಿ ಶ್ರೇಷ್ಠ ಕಾರ್ಯನಿರ್ವಹಣೆ ಮಾಡುತ್ತಿರುವ ರೋ. ಚೇತನ್ ಕುಮಾರ್ ಅವರಿಗೂ ಕ್ಲಬ್‌ನ ವತಿಯಿಂದ ಸನ್ಮಾನ ನೀಡಲಾಯಿತು.

ಸಭೆಯಲ್ಲಿ ಕ್ಲಬ್‌ನ ಈ ವರ್ಷದ ಸೇವಾ ಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ರೋ. ಅನಂತ ಕೃಷ್ಣ ಓದಿ ಜುಲೈ 1ರಿಂದ ಪ್ರಸ್ತುತವರೆಗೆ ಸುಮಾರು 20 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವುದರಿಂದ, ಸಮುದಾಯದಲ್ಲಿ ಕ್ಲಬ್ ಉತ್ತಮ ಹೆಸರನ್ನು ಗಳಿಸಿದೆ ಎಂಬ ಅಭಿಪ್ರಾಯವನ್ನು ಗಣ್ಯರು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊಟರಾಕ್ಟ್ ಕ್ಲಬ್ ಉಡುಪಿಯ ಅಧ್ಯಕ್ಷ ರೋ. ಅಂಶ್ ಕೋಟ್ಯಾನ್ ವಹಿಸಿದ್ದರು. ಅವರು ಉಪಸ್ಥಿತರಿದ ಎಲ್ಲರಿಗೂ ಸ್ವಾಗತ ಮಾಡಿದರು. ಕಾರ್ಯದರ್ಶಿ ರೋ. ಅನಂತ ಕೃಷ್ಣ ವಂದನಾಪೂರ್ವಕವಾಗಿ ಸಮಾರೋಪಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಬೆಂಗಳೂರು ಮೆಟ್ರೋದಲ್ಲಿ ನಂದಿನಿ ಹಾಗೂ ಅಮೂಲ್ ಮಳಿಗೆಗಳ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಬಿ ಎಂ ಆರ್ ಸಿ ಎಲ್

“ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿ ಅಮುಲ್‌ಗೆ ಮಳಿಗೆ ಹಂಚಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು...

ಕೇದಾರನಾಥ್ ಟೇಕಾಫ್ ವೇಳೆ ತಾಂತ್ರಿಕ ದೋಷ ಹೆದ್ದಾರಿಯಲ್ಲಿ ತುರ್ತುಭೂ ಸ್ಪರ್ಶ ಮಾಡಿದ ಹೆಲಿಕಾಪ್ಟರ್ ಕಾರಿಗೆ ಡಿಕ್ಕಿ

“ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಶನಿವಾರ ಉತ್ತರಾಖಂಡದ ಸಿರ್ಸಿ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆಗುವಾಗ ತಾಂತ್ರಿಕ ದೋಷ...

ಆಪರೇಷನ್ ಸಿಂಧೂರ್ ಸರ್ವ ಪಕ್ಷಗಳ ಸಭೆ ವಿಪಕ್ಷಗಳು ಭಾಗಿ ದೇಶದ ಹಿತದ್ರಷ್ಠಿಯಿಂದ ಸರಕಾರದ ಬೆನ್ನಿಗೆ ನಿಂತ ರಾಜಕೀಯ ಪಕ್ಷಗಳು

“ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ...

ನೀರಿನ ಬಾಟಲ್ ಆರೋಗ್ಯಕ್ಕೆ ಹಾನಿಕರ; ಅಸುರಕ್ಷಿತ ಬಾಟಲ್ ನೀರು ಪೂರೈಕೆದಾರರ ವಿರುದ್ಧ ಕ್ರಮ:ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಮಿನರಲ್ ವಾಟರ್ ಬಾಟಲ್ ಗಳಲ್ಲಿಯೂ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, “ಅಸುರಕ್ಷಿತ” ಮತ್ತು “ಕಳಪೆ ಗುಣಮಟ್ಟದ” ಬಾಟಲ್...