ರೈಲ್ವೆ ಪರೀಕ್ಷೆಯಲ್ಲಿ ಮಾರ್ಗಸೂಚಿ ಮಂಗಳಸೂತ್ರ ತೆಗೆಯುವ ಷರತ್ತು ಸರಿಯಲ್ಲ :: ನವೀನ್ ಸಾಲ್ಯಾನ್ ಆಕ್ರೋಶ

62

ರೈಲ್ವೆ ನೇಮಕಾತಿ ಮಂಡಳಿಯು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಯನ್ನು ಎ. 29ರಂದು ಹಮ್ಮಿಕೊಂಡಿದೆ.

ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತವಾದ ಮಂಗಳಸೂತ್ರ ಧರಿಸುವಂತಿಲ್ಲ ಎಂದು ಪರೀಕ್ಷೆ ಪ್ರವೇಶಪತ್ರದಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ

.ರೈಲ್ವೆ ನೇಮಕಾತಿ ಮಂಡಳಿಯ ಈ ಕ್ರಮಕ್ಕ್ಕೆ ಕಾಂಗ್ರೆಸ್ ಮುಖಂಡ ನವೀನ್ ಸಾಲ್ಯಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.”

ಮಾನ್ಯ ಜಿಲ್ಲಾಧಿಕಾರಿಗಳೇ, ಇಂತಹ ಆದೇಶವನ್ನು ಕೈಬಿಟ್ಟು ನಡೆಯಲಿರುವ ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ”, ಎಂದು ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಮುಖಂಡ ನವೀನ್ ಸಾಲ್ಯಾನ್ ಆಗ್ರಹಿಸಿದ್ದಾರೆ.

ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಚಿಹ್ನೆಯಾದ ಮಂಗಳಸೂತ್ರ ತೆಗೆಯಬೇಕೆಂದು ಸೂಚನೆ ನೀಡಿರುವುದು ಸರಿಯಲ್ಲ.

ಹೆಣ್ಣುಮಕ್ಕಳು ತಾಳಿ ಸರ ಕಳಚುವಂತೆ, ಸಿಂಧೂರ ಅಳಿಸುವಂತೆ ಮಾಡುವುದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗುತ್ತದೆ.

ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕ್ರಮಕೈಗೊಳ್ಳಬೇಕು” ಎಂದು ನವೀನ್ ಸಾಲ್ಯಾನ್ ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...