ರಾಜ್ಯದ ಭಟ್ಕಳದಲ್ಲಿದ್ದಾರೆ 15 ಮಂದಿ ಪಾಕಿಸ್ತಾನೀಯರು ಸದ್ಯಕ್ಕೆ ಅವರನ್ನು ಗಡಿ ಪಾರು ಮಾಡುವುದು ಸಾಧ್ಯವಿಲ್ಲ ::ಉತ್ತರ ಕನ್ನಡ ಎಸ್ ಪಿ

36

ಭಟ್ಕಳದಲ್ಲಿ 15 ಮಂದಿ ಪಾಕಿಸ್ತಾನಿ ಪ್ರಜೆಗಳಿದ್ದು, ಅವರೆಲ್ಲರೂ ದೀರ್ಘಾವಧಿ ವೀಸಾ ಹೊಂದಿರುವುದರಿಂದ ಭಾರತದಲ್ಲೇ ನೆಲೆಸಲಿದ್ದಾರೆಂದು ತಿಳಿದುಬಂದಿದೆ.


ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗಲು 48 ಗಂಟೆ ಕೇಂದ್ರ ಸರ್ಕಾರ ಗಡುವು ನೀಡಿದೆ.

ಆದರೆ, ಇಲ್ಲಿರುವ ಬಹುತೇಕರು ಮಹಿಳೆಯರಾಗಿದ್ದು, ಅವರನ್ನು ಸ್ಥಳೀಯರನ್ನು ವಿವಾಹವಾಗಿದ್ದಾರೆ. ಅಲ್ಲದೆ, ದೀರ್ಘಕಾಲೀನ ವೀಸಾ ಹೊಂದಿದ್ದಾರೆ

. ಹೀಗಾಗಿ ಅವರನ್ನು ಗಡಿಪಾರು ಅವರನ್ನು ವಾಪಸ್ ಕಳುಹಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ 15 ಪಾಕಿಸ್ತಾನಿ ಪ್ರಜೆಗಳಿದ್ದು, ಅವರಲ್ಲಿ 14 ಮಂದಿ ಭಟ್ಕಳದಲ್ಲಿ ಮತ್ತು ಒಬ್ಬರು ಕಾರವಾರದಲ್ಲಿದ್ದಾರೆ. ಈ 15 ಜನರಲ್ಲಿ 14 ಮಂದಿ ಮಹಿಳೆಯರಿದ್ದು, ಒಂದು ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ

. ಪಾಕಿಸ್ತಾನದ ಈ ಮಹಿಳೆಯರು ಭಟ್ಕಳದಲ್ಲಿರುವ ತಮ್ಮ ಮುಸ್ಲಿಂ ಸಂಬಂಧಿಕರನ್ನು ಮದುವೆಯಾಗಿದ್ದಾರೆ. ಅವರ ವೀಸಾಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನವೀಕರಿಸಲಾಗುತ್ತದೆ.

ಅವರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ, ಆದರೆ ಇಲ್ಲಿಯವರೆಗೆ ಅವರ ಅರ್ಜಿಗಳನ್ನು ಪರಿಗಣಿಸಲಾಗಿಲ್ಲ. ಭಟ್ಕಳದ ನವಾಯತ್ ಸಮುದಾಯದಲ್ಲಿ

ಪಾಕಿಸ್ತಾನಿಯರೊಂದಿಗಿನ ವೈವಾಹಿಕ ಸಂಬಂಧಗಳು ಸಾಮಾನ್ಯವಾಗಿದ್ದು, ಮದುವೆಯ ನಂತರ ಭಾರತಕ್ಕೆ ಪ್ರವೇಶಿಸುವವರಿಗೆ ಸರ್ಕಾರ ದೀರ್ಘಾವಧಿಯ ವೀಸಾಗಳನ್ನು ನೀಡುತ್ತದೆ.

ಹಲವು ರೀತಿಯ ವೀಸಾಗಳಿವೆ. ದೀರ್ಘಾವಧಿಯ ವೀಸಾ ಹೊಂದಿರುವವರನ್ನು ಗಡೀಪಾರು ಮಾಡದಂತೆ ಸರ್ಕಾರ ನಮಗೆ ಸೂಚನೆ ನೀಡಿದೆ.

ಈ ನಿಟ್ಟಿನಲ್ಲಿ, ಇಲ್ಲಿರುವ ಬಹುತೇಕ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ ಕಳುಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 88 ಪಾಕಿಸ್ತಾನಿ ಪ್ರಜೆಗಳಿದ್ದು, ಅವರಲ್ಲಿ 84 ಮಂದಿ ದೀರ್ಘಾವಧಿಯ ವೀಸಾದಲ್ಲಿದ್ದಾರೆ ಮತ್ತು ನಾಲ್ವರು ವಿಸಿಟರ್ಸ್ ವೀಸಾದಲ್ಲಿದ್ದಾರೆ. ಹೊನ್ನಾವರದ ವಾಲ್ಕಿ ಗ್ರಾಮದ ಹುಡುಗಿ ಪಾಕಿಸ್ತಾನಿ ಪ್ರಜೆಯನ್ನು ವಿವಾಹವಾಗಿದ್ದಾರೆ

. ಮದುವೆ ಪಾಕಿಸ್ತಾನದಲ್ಲಿ ನಡೆದಿದ್ದು, ಅವರು ಪಾಕಿಸ್ತಾನಿ ವೀಸಾಕ್ಕಾಗಿ ಕಾಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...