ಉಡುಪಿ ಜಿಲ್ಲಾ ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಕಾರ್ಯಕರ್ತರ ಆಕ್ರೋಶ ಜಿಲ್ಲಾ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ???

52

ವ್ಯಕ್ತಿ ಪೂಜೆಯಲ್ಲಿ ನಿರತರಾದ ಉಡುಪಿ ಜಿಲ್ಲೆಯ ಕಾಂಗ್ರೆಸ್ಸಿಗರು ಕಾರ್ಯಕರ್ತರ ಆಕ್ರೋಶ

ಕಾಂಗ್ರೆಸ್ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರು ಪಕ್ಷದ ಎಲ್ಲ ವೇದಿಕೆಗಳಲ್ಲಿ ಪದೇ ಪದೇ ಹೇಳುತ್ತಾ ಬಂದಿರುವ ಮಾತು ಏನೆಂದರೇ *ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡಿ* ಎಂದು.

ಆದರೆ ಕೆಪಿಸಿಸಿ ಅಧ್ಯಕ್ಷರ ಮಾತಿಗೆ ಕ್ಯಾರೇ ಎನ್ನದೇ ತೀರಾ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವ *ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ನಾಯಕರುಗಳು* .

ಕೇಂದ್ರ ಸರಕಾರದ ಬೆಲೆ ಏರಿಕೆಯ ವಿರುದ್ದ ನಾಳೆ ಕಾಪುವಿನಲ್ಲಿ ವಿನಯ ಕುಮಾರ್ ಸೊರಕೆರವರ ನೇತೃತ್ವದಲ್ಲಿ ಉಡುಪಿ ಕಾಂಗ್ರೆಸ್ಸಿಗರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದು ನೋಡಿದರೆ ಉಡುಪಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಸೊರಕೆ ರವರು ಬಾಸಿಸಮ್ ಮೈಂಟೈನ್ ಮಾಡುತ್ತಿದ್ದಾರೆ ಎಂಬುದು ಮೆಲ್ನೊಟಕ್ಕೆ ಸ್ಪಷ್ಟವಾಗುತ್ತಿದೆ.

ತನ್ನ ಕ್ಷೇತ್ರ ಕಾಪುವಿನಲ್ಲಿ ಬೃಹತ್ ಪ್ರತಿಭಟನೆ ಇಟ್ಟುಕೊಂಡು ತನ್ನದೇ ನೇತೃತ್ವ ಎಂದು ಬಿಂಬಿಸಕೊಳ್ಳುತ್ತಿರುವುದು ,ಬ್ಯಾನರ್, ಪೊಸ್ಟರ್ ಗಳು ನೋಡಿದರೆ ಉಡುಪಿ ಕಾಂಗ್ರೆಸ್ಸಿನ ಈ ಬಾಸಿಸಮ್ ಪದ್ದತಿಯನ್ನು ಕಾರ್ಯಕರ್ತರು ಪ್ರಶ್ನೆ ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಎನ್ನುವುದು ಸ್ಥಳೀಯ ಕಾಂಗ್ರೆಸ್ ಮುಖಂಡರ ಆರೋಪ ಆಗಿದೆ

ಉಡುಪಿ ಜಿಲ್ಲೆಯ ಉಸ್ತುವಾರಿಗಳು ಹಾಗೂ ಮಂತ್ರಿಗಳಾದ ಲಕ್ಷ್ಮಿ ಹೆಬ್ಬ್ಳಾಕರ್ ,ರಾಜ್ಯ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ಎಂ ಎ ಗಫೂರ್,ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿರವರು,ರಾಜ್ಯ ಕಾಂಗ್ರೆಸ್ಸಿನ ಉಪಾಧ್ಯಕ್ಷ ಹಾಗೂ ಎಮ್,ಎಲ್,ಸಿ ಗಳಾದ ಐವನ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಅಶೋಕ್ ಕೊಡವೂರು,

ಜಿಲ್ಲಾ ಕಾಂಗ್ರೆಸ್ಸಿನ ಕಾರ್ಯಧ್ಯಕ್ಷರಾದ ಕಿಶನ್ ಹೆಗ್ಡೆ,ಹಿರಿಯರಾದ ಗೋಪಾಲ ಪೂಜಾರಿ, ಸೊರಕೆಯವರನ್ನು ಉಡುಪಿಗೆ ಬರುವಲ್ಲಿ ಮನವೊಲಿಸಿದ ಹಿರಿಯ ಧುರಿಣರಾದ ಪ್ರತಾಪ್ ಚಂದ್ರ ಶೆಟ್ಟಿ ರವರಂತಹ ನಾಯಕರುಗಳನ್ನು ಕಡೆಗಣಿಸುವುದರೊಂದಿಗೆ ಅವರುಗಳು ಇದ್ದರು ಇಲ್ಲದಿರುವವರಂತಾಗಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಹಿರಿಯ ಕಾಂಗ್ರೆಸ್ ನಾಯಕರುಗಳುಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕಾಂಗ್ರೆಸ್ಸಿಗೆ ಪ್ರಮುಖ ಬೆನ್ನೆಲುಬಾದಂತಹ ಜಿಲ್ಲಾ ಮಹಿಳಾ ಕಾಂಗ್ರೆಸ್ ಮತ್ತು ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್, ಜಿಲ್ಲಾ ಯುವಕ ಕಾಂಗ್ರೆಸ್ಸನ್ನು ಕೇವಲ ಕಾಟಾಚಾರಕ್ಕೆ ಇಟ್ಟುಕೊಂಡಂತೆ ಅವುಗಳನ್ನು ಕಡೆಗಣಿಸುತ್ತಿರುವುದು ನೋಡಿದರೆ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ಚೇತರಿಕೆ ಪಡೆಯಲು ಜಿಲ್ಲೆಯ ಹಿರಿಯ ಅನುಭವಿ ನಾಯಕರೆ ಅಡ್ಡಗಾಲು ಹಾಕುತ್ತಿರುವುದು ಇತ್ತೀಚಿನ ದಿನಗಳಲ್ಲಿ ಉಡುಪಿಯಲ್ಲಿ ಬಿಜೆಪಿಗೆ ವರದಾನವಾಗುತ್ತಿದೆ. ಎನ್ನುವ ಅಭಿಪ್ರಾಯ ಮೂಡುತ್ತಿದೆ

Leave a comment

Leave a Reply

Your email address will not be published. Required fields are marked *

Related Articles

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...