ಪುಷ್ಪಲತಾ ಬಡಾ ಗ್ರಾಮ, ಕಾಪು ಇವರು ಸುಮಾರು 6 ತಿಂಗಳ ಹಿಂದೆ ಅಂದರೆ 2024 ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ಮುಕ್ಕದ ಸಾನಿಧ್ಯ ಪೈನಾನ್ಸ್ ನಲ್ಲಿ ರೂ 30000/- ಸಾಲ ಪಡೆದುಕೊಂಡಿದ್ದು
ಸಾಲದ ಕಂತುಗಳನ್ನು ಪ್ರತೀ ತಿಂಗಳು ಗೂಗಲ್ ಪೇ ಹಾಗೂ ಕೆಲವೊಮ್ಮೆ ನಗದಾಗಿ ಮುಖಾಂತರ ಪೈನಾನ್ಸ್ ನವರಿಗೆ ಪಾವತಿ ಮಾಡುತ್ತಿದ್ದು,
ಸಾಲ ಮರುಪಾವತಿ ಮಾಡಲು ತಡವಾದುದಕ್ಕೆ ಇತ್ತೀಚೆಗೆ ಒಂದು ವಾರದಿಂದ ಸದ್ರಿ ಪೈನಾನ್ಸ್ ನ ರಿಕವರಿ ಆಫೀಸರ್ ಅಶ್ರಫ್ ಹಾಗೂ ಇತರರು ಪುಷ್ಪಲತಾರ
ಮನೆಗೆ ಪದೇ ಪದೇ ಬಂದು ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟದಿದ್ದರೆ ತಲೆ ಒಡೆದು ಸಾಯಿಸುತ್ತೇವೆ ಎಂಬುದಾಗಿ ಜೀವ ಬೆದರಿಕೆ ಹಾಕುತ್ತಿದ್ದು, ಅಲ್ಲದೆ ಅವಮಾನ ಮಾಡಿರುವುದಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 48/2025 ಕಲಂ: 8, 12 ಕರ್ನಾಟಕ ಮೈಕ್ರೋ ಲೋನ್ ಅಂಡ್ ಸ್ಮಾಲ್ ಲೋನ್ ಪ್ರಿವೆನ್ಷನ್ ಆಫ್ ಕಾನ್ ಕ್ರೀವ್ ಆಕ್ಷನ್ ಆರ್ಡಿನೆನ್ಸ್ 2025 ಮತ್ತು ಕಲಂ: 329(3), 126(2), 351(2)(3) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
Leave a comment