ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದ  ಟ್ರಂಪ್ ನೀತಿ ವಿರೋಧಿಸಿ ಬೃಹತ್  ಪ್ರತಿಭಟನೆ

64

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಶನಿವಾರ ಅಮೆರಿಕದಾದ್ಯಂತ ದೊಡ್ಡ ಮತ್ತು ಸಣ್ಣ ಸಮುದಾಯಗಳ ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಟ್ರಂಪ್ ನೀತಿ ದೇಶದ ಪ್ರಜಾಪ್ರಭುತ್ವದ ಆದರ್ಶಗಳಿಗೆ ಅಪಾಯ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಶ್ವೇತಭವನದ ಮುಂದೆ ರ್ಯಾಲಿ ನಡೆಸಲಾಯಿತು. 250 ವರ್ಷಗಳ ಹಿಂದೆ 1775ರ ಏಪ್ರಿಲ್ 19 ರಂದು ಕ್ರಾಂತಿಕಾರಿ ಸಮರ ಆರಂಭಗೊಂಡ ಸ್ಮರಣಾರ್ಥ ಮೆರವಣಿಗೆಗಳನ್ನು ನಡೆಸಲಾಯಿತು.

ಅಮೆರಿಕದ್ಯಂತ ಸುಮಾರು 400 ಪ್ರತಿಭಟನಾ ರ್ಯಾಲಿಗಳನ್ನು ಯೋಜಿಸಲಾಗಿತ್ತು. ಪ್ರತಿಭಟನಾಕಾರರು ಫೆಡರಲ್ ಉದ್ಯೋಗ ಕಡಿತ, ಆರ್ಥಿಕ ನೀತಿಗಳು ಮತ್ತು ನಾಗರಿಕ ಸ್ವಾತಂತ್ರ್ಯ ಉಲ್ಲಂಘನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಡೆನ್ಸರ್‌ನಲ್ಲಿ ನೂರಾರು ಪ್ರತಿಭಟನಾಕಾರರು ಕೊಲರಾಡೋ ಯಾ ರಾಜಧಾನಿಯಲ್ಲಿ ನೆರೆದು ವಲಸಿಗರೊಂದಿಗೆ ಸೌಹಾರ್ದ ಸಾರುವ ಮತ್ತು ಹ್ಯಾಂಡ್ಸ್ ಆಫ್ ಎಂಬ ಭಿತ್ತಿಪತ್ರಗಳನ್ನು ಹಿಡಿದಿದ್ದರು. ಶೋಕ ಸೂಚಕವಾಗಿ ಅನೇಕರು ಅಮೆರಿಕದ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಿಡಿದಿದ್ದರು.

ಪೋರ್ಟ್‌ಲ್ಯಾಂಡ್, ಓರೆಗಾನ್‌ಗಳ ಮುಖಾಂತರ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿದರೆ, ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನೂರಾರು ಜನರು ಟ್ರಂಪ್‌ ಅವರನ್ನು ಪದಚ್ಯುತಿಗೊಳಿಸಿ, ಇಲ್ಲವೆ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂದು ಸಮುದ್ರದಂಡೆಯ ಮರಳಿನ ಮೇಲೆ ಬರೆದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಂಪ್ ಸರ್ಕಾರದ ಸರ್ವಾಧಿಕಾರಿ ಮನೋಭಾವದಿಂದ ದೇಶದ ಪ್ರಜಾಪ್ರಭುತ್ವವನ್ನು ಉಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದು ಶಾಂತಿಯುತ ಪ್ರತಿಭಟನೆಯಾಗಿದ್ದು, ಯಾರಿಗೂ ಹಾನಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಗುಂಪಿನ ವಕ್ತಾರೆ ಹೀದರ್ ಡನ್ ಹೇಳಿದ್ದಾರೆ

. ದೇಶವನ್ನು ಒಗ್ಗೂಡಿಸುವುದು ಮತ್ತು ಸಂವಿಧಾನವನ್ನು ರಕ್ಷಿಸುವುದು ಈ ಪ್ರತಿಭಟನೆಯ ಉದ್ದೇಶ ಎಂದಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಭಾರತ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಉದ್ಧಟತನ

“ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ವಿವಾದದ ನಡುವೆ ಭಾರತಕ್ಕೆ ಪಾಕಿಸ್ತಾನ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದೆ....

ತನ್ನ ಪ್ರದೇಶಗಳಿಗೆ ಇಸ್ಲಾಮಿ ಹೆಸರುಗಳ ಕೈ ಬಿಟ್ಟು ಹಿಂದೂ ಹೆಸರು ಮರುನಾಮಕರಣ, ಬದಲಾಗುತ್ತಿದೇಯಾ ಪಾಕಿಸ್ತಾನ??

ಲಾಹೋರ್: ಭಾರತದ ಪ್ರಧಾನಿ ಮೋದಿ ಅಖಂಡ ಭಾರತದ ಕುರಿತು ಮಾಡಿದ್ದ ಭಾಷಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲಿ...

ದೇಶ ರಕ್ಷಣೆಗೆ 92 ಶತಕೋಟಿ ಡಾಲರ್ ಬಜೆಟ್ ವಿಶ್ವದ 5ನೇ ರಾಷ್ಟ್ರವಾಗಿ ಎಲೈಟ್ ಗ್ರೂಪ್ ಸೇರಿದ ಭಾರತ!

ನವದೆಹಲಿ: ರಕ್ಷಣಾ ವಿಭಾಗದಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ದೇಶದ ರಕ್ಷಣಾ ಬಜೆಟ್ 92 ಶತಕೋಟಿ...

ಅಮೆರಿಕ ಶ್ವೇತಭವನದಲ್ಲಿ ಔತಣಕೂಟ ವೇಳೆ ಶೂಟೌಟ್ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್,

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದೆ....