ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ದೂರುದಾರರಿಗೆ ಮಾಹಿತಿ ನೀಡದಿದ್ದ ಕಾರಣಕ್ಕಾಗಿ ಉಡುಪಿ ಹಸಿಮೀನು ಮಾರಾಟಗಾರರ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ದಂಡ

3

ಉಡುಪಿ ಹಸಿ ಮೀನು ಮಾರಾಟಗಾರ ಸಹಕಾರಿ ಸಂಘದಿಂದ ತಮಗೆ ಬೇಕಾದ ದಾಖಲೆಗಳನ್ನು ಕೇಳಿದ್ದ ದೂರುದಾರರಾದ ಶಿವಕುಮಾರ್ ಅವರ ಪರವಾಗಿ ಖ್ಯಾತ ವಕೀಲರಾದ ಬಿ ಪ್ರಕಾಶ್ ಭಟ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದೂರು ದಾಖಲಿಸಿ ವಾದ ಮಂಡಿಸಿದ್ದರು

ಈ ಪ್ರಕರಣದಲ್ಲಿ ಉಡುಪಿ ಹಸಿ ಮೀನು ಮಾರಾಟಗಾರರ ಸಹಕಾರಿ ಸಂಘದ ಸೇವಾ ನ್ಯೂನ್ಯತೆಗಳನ್ನು ಗಮನಿಸಿ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ

ಪ್ರಕರಣದಲ್ಲಿ ಹಸಿಮೀನು ಮಾರಾಟಗಾರರ ಸಂಘ ಶಾಖಾ ಪ್ರಬಂಧಕರು ಸಂಪೂರ್ಣ ಕಾಗದ ಪತ್ರಗಳ ವಿನಿಮಯಗಳನ್ನು ಮರೆಮಾಡಿ ಬೆಂಗಳೂರಿನಲ್ಲಿ ಕ್ರೈಮ್ ಅರ್ಜಿಯನ್ನು ಸಲ್ಲಿಸಿದ್ದರು

. ದೂರುದಾರರು ಕೇಳಿರುವ ದಾಖಲೆಗಳನ್ನು ಎದುರುದಾರರು ಹಾಜರುಪಡಿಸಿರುವುದಿಲ್ಲ ಸಾಲದ ಒಪ್ಪಂದವನ್ನು ಹೊರತುಪಡಿಸಿ ದೂರುದಾರರು ತಿಳಿಸಿರುವ ಒಂದೇ ಒಂದು ಕಾಗದವನ್ನು ಎದುರುದಾರರು ನೀಡಿರುವುದಿಲ್ಲ.

ಸದರಿ ದೂರು ಸೇವಾ ನ್ಯೂನ್ಯತೆಗೆ ಹೊರತು ಪ್ರಧಾನ ಸಾಲಗಾರನಿಂದ ಬಾಕಿ ಇರುವ ಸಾಲದ ಮೊತ್ತಕ್ಕೆ ಸಂಬಂಧಿಸಿದಂತೆ ಎದುರುದಾರರ ಯಾವುದೇ ಕ್ರೈಮ್‌ಗೆ ಸಂಬಂಧಿಸಿದಂತೆ ಅಲ್ಲ ಎದುರುದಾರರು ದಾಖಲೆಗಳನ್ನು ಪೂರೈಸದೇ ಸೇವಾ ನ್ಯೂನ್ಯತೆ ಮಾಡಿರುತ್ತಾರೆ.

ದಾಖಲೆಗಳನ್ನು ಪೂರೈಸಲು ಎದುರುದಾರರು ಜವಾಬ್ದಾರರಾಗಿರುತ್ತಾರೆ. ಎದುರುದಾರರಿಂದ ಸೇವಾ ನ್ಯೂನ್ಯತೆ ಆಗಿರುವುದಾಗಿ ತಿಳಿಸಿ ದಾಖಲೆಗಳನ್ನು ಮತ್ತು ಪರಿಹಾರ ಕೋರಿ ಆಯೋಗದ ಮುಂದೆ ದೂರು

4. ತದನಂತರ ಆಯೋಗವು ದೂರುದಾರರ ದೂರನ್ನು ಪರಿಗಣಿಸಿ ಎದುರುದಾರರಿಗೆ ನೋಟಿಸ್ ನೀಡಿರುತ್ತದೆ. ಸದರಿ ನೋಟಿಸ್ ಜಾರಿಯಾಗಿದ್ದು ಎದುರುದಾರರು ಆಯೋಗದ ಮುಂದೆ ಹಾಜರಾಗಿರುತ್ತಾರೆ. ಆದರೆ ದೂರುದಾರರ ಆರೋಪಗಳನ್ನು ಅಲ್ಲಗಳೆಯಲು ತಕರಾರನ್ನು ಸಲ್ಲಿಸಿರುವುದಿಲ್ಲ.

ದೂರುದಾರರು ತಮ್ಮ ದೂರನ್ನು ಸಾಬೀತು ಪಡಿಸಲು ತಮ್ಮ ವಿಚಾರಣಾ ವೇಳೆಯಲ್ಲಿ ಪೂರಕ ಪ್ರಮಾಣಪತ್ರವನ್ನು ಸಲ್ಲಿಸಿರುತ್ತಾರೆ.

ಅದನ್ನು ಸಿ.ಡಬ್ಲ್ಯು-01 ಎಂದು ಗುರುತಿಸಲ್ಪಟ್ಟಿರುತ್ತದೆ. ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಕ್ರಮವಾಗಿ ನಿತಾನೆ 5-01 ರಿಂದ ಸಿ-97 ಎಂದು ಗುರುತಿಸಲ್ಪಟ್ಟಿರುತ್ತದೆ,

ಅದರಂತೆ, ಎದುರುದಾರನು ಯಾವುದೇ ಪ್ರಮಾಣಪತ್ರವನ್ನು ಮತ್ತು ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ಉಭಯ ಪಕ್ಷಗಳ ಪರ ವಕೀಲರ ವಾದವನ್ನು ಕೇಳಲಾಯಿತು. ವಾರವನ್ನು ಆಲಿಸಿ ದೂರದಾರರ ಪರವಾಗಿ ಆದೇಶ ನೀಡಿದೆ

ದೂರುದಾರರು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಕಲಂ 35ರಲ್ಲಿ ಸಲ್ಲಿಸಿರುವ ದೂರನ್ನು ಎದುರುದಾರರ ವಿರುದ್ಧ ಭಾಗಶ: ಪುರಸ್ಕರಿಸಲಾಗಿದೆ.

* ಎದುರುದಾರರು ದೂರುದಾರರಿಗೆ ಆದ ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂ.3,000/- (ರೂಪಾಯಿ ಮೂರು ಸಾವಿರಗಳನ್ನು ಮತ್ತು ವ್ಯಾಜ್ಯದ ಖರ್ಚು ವೆಚ್ಚ ಸೇರಿದಂತೆ ರೂ.2,000/- (ರೂಪಾಯಿ ಎರಡು ಸಾವಿರ )ಗಳನ್ನು ನೀಡತಕ್ಕದೆಂದು ಆದೇಶಿಸಲಾಗಿದೆ.

* ಎದುರುದಾರರಿಗೆ ಈ ಆದೇಶದ ಪ್ರತಿತಲುಪಿದ ದಿನಾಂಕದಿಂದ 30 ಆದೇಶವನ್ನು ವಾಲಿಸತಕ್ಕದೆಂದು ಆದೇಶಿಸಲಾಗಿದೆ. ದೂರುದಾರರಾದ ಶಿವಕುಮಾರ್ ಪರವಾಗಿ ಖ್ಯಾತ ನ್ಯಾಯವಾದಿ ಬಿಪಿ ಭಟ್ ವಾದ ಮಂಡಿಸಿದರು

Leave a comment

Leave a Reply

Your email address will not be published. Required fields are marked *

Related Articles

900ವರ್ಷ ಪುರಾತನ ಹಿಂದೂ ದೇವಾಲಯಕ್ಕಾಗಿ ಥಾಯ್ಲೆಂಡ್-ಕಾಂಬೋಡಿಯಾ ಸಂಘರ್ಷ

ನವದೆಹಲಿ: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ತೀವ್ರ ಸೇನಾ ಸಂಘರ್ಷ ಆರಂಭವಾಗಿದ್ದು, ಕಾಂಬೋಡಿಯಾ ಮೇಲೆ ಥಾಯ್ಲೆಂಡ್...

ಬಡ ಜನರಿರುವ ಗ್ರಾಮವನ್ನು ದತ್ತು ಸ್ವೀಕಾರ ಮಾಡಿದ  ಡಾಕ್ಟರ್ ರಾಜನ್ ದೇಶಪಾಂಡೆ ನೇತೃತ್ವದ ಸಂಸ್ಥೆ

“ಅತೀವ್ರ ಬಡತನದಿಂದ ನಲುಗಿರುವ ಧಾರವಾಡ ಜಿಲ್ಲೆಯ ಗ್ರಾಮವೊಂದನ್ನು ಡಾ. ರಾಜನ್ ದೇಶಪಾಂಡೆ ನೇತೃತ್ವದ ವಿಟ್ಟಲ್ ಮಕ್ಕಳ...

ಸುರತ್ಕಲ್ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರಿನ ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾ ಲಯದಲ್ಲಿ (ಎನ್‌ಐಟಿಕೆ) ಖಾಲಿ ಇರುವ ಲೈಬ್ರರಿ ಟ್ರೈನಿ ಹುದ್ದೆಗಳ...