ಡ್ರೆಸ್ಸಿಂಗ್‌ ರೂಮ್‌ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಸೇವೆಯಿಂದ ವಜಾಗೊಳಿಸಿದ ಬಿಸಿಸಿಐ

3

“ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಸಂದರ್ಭದಲ್ಲಿ ಡ್ರೆಸ್ಸಿಂಗ್‌ ರೂಮ್‌ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಸಹಾಯಕ ಕೋಚ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಬಿಸಿಸಿಐ ಕಿತ್ತೆಸೆದಿದೆ ಎಂದು ವರದಿಯಾಗಿದೆ

ಬ್ಯಾಟಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಮತ್ತು ಮಸಾಜರ್ ಸಿಬ್ಬಂದಿಯನ್ನ ಬಿಸಿಸಿಐ ತೆಗೆದುಹಾಕಿದೆ.

ಇದರಲ್ಲಿ ಟೀಂ ಇಂಡಿಯಾದ ಮುಖ್ಯಕೋಚ್‌ ಗೌತಮ್‌ ಗಂಭೀರ್‌ ಅವರ ಆಪ್ತ ಅಭಿಷೇಕ್‌ ನಾಯರ್‌ ಅವರನ್ನೂ ವಜಾಗೊಳಿಸಿದೆ ಎಂದು ತಿಳಿದು ಬಂದಿದೆ. ಗಂಭೀರ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ ಫ್ರಾಂಚೈಸಿಯಲ್ಲಿದ್ದಾಗಲೇ ನಾಯರ್ ಆಪ್ತರಾಗಿದ್ದರು.

ಗಂಭೀರ್‌ ಟೀಂ ಇಂಡಿಯಾ ಕೋಚ್‌ ಆದ ಬಳಿಕ ಸಹಾಯಕ, ಬ್ಯಾಟಿಂಗ್‌ ಕೋಚ್‌ ಆಗಿ ಅವರನ್ನ ನೇಮಕ ಮಾಡಿಕೊಳ್ಳಲಾಯಿತು. ಸದ್ಯ ಮುಂಬರುವ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯೊಳಗೆ ಈ ಹುದ್ದೆಗೆ ಬೇರೆಯವರನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಇದರ ಹೊರತಾಗಿ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಂ ದೇಸಾಯಿ ಅವರನ್ನು ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ ಹುದ್ದೆಗಳಿಂದ ಕಿತ್ತೆಸೆಯಲಾಗಿದೆ. ಅದೇ ಸಮಯದಲ್ಲಿ, ಒಬ್ಬ ಮಸಾಜ್ (ಫಿಸಿಯೋ ಸಪೋರ್ಟ್ ಸ್ಟಾಫ್) ಅನ್ನು ಸಹ ತೆಗೆದುಹಾಕಲಾಗಿದೆ.

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಸಂದರ್ಭದಲ್ಲಿ ಭಾರತ ತಂಡದ ಡ್ರೆಸ್ಸಿಂಗ್‌ ರೂಮ್‌ ಮಾಹಿತಿಯನ್ನ ಸೋರಿಕೆ ಮಾಡಲಾಗುತ್ತಿತ್ತು. ಟೀಂ ಇಂಡಿಯಾದಲ್ಲಿ ಹಂಗಾಮಿ ನಾಯಕನಾಗಲು ಬಯಸುವ ನಿರ್ದಿಷ್ಟ ಆಟಗಾರನಿದ್ದಾನೆ ಎಂಬ ಸುದ್ದಿಯೂ ಹರಿದಾಡಿತ್ತು.

ಜೊತೆಗೆ ಗೌತಮ್ ಗಂಭೀರ್ ಸರ್ಫರಾಜ್‌ ಖಾನ್‌ ಅವರನ್ನ ದೂಷಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಈ ಬೆಳವಣಿಗೆಯ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಜೂನ್ 20ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಹೊಸ ಸಿಬ್ಬಂದಿಗಳು ಭಾರತೀಯ ತಂಡವನ್ನು ಸೇರುವ ನಿರೀಕ್ಷೆಯಿದೆ.

Leave a comment

Leave a Reply

Your email address will not be published. Required fields are marked *

Related Articles

ಏಷ್ಯಾ ಕಪ್ ಕ್ರಿಕೆಟ್ ಗೆ ಟೀಂ ಇಂಡಿಯಾ ಬಹಿಷ್ಕಾರ ಏಷ್ಯಾಕಪ್ 2025 ರಿಂದ ಭಾರತ ತಂಡ ಹೊರಗುಳಿಯುವ ಸಾಧ್ಯತೆ

ನವದೆಹಲಿ: ಏಷ್ಯಾಕಪ್ ಟೂರ್ನಿಯ 17ನೇ ಆವೃತ್ತಿಗೆ ಸಿದ್ಧತೆಗಳು ಶುರುವಾಗಿರುವಂತೆಯೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಿರುದ್ಧ...

ಒಂಬತ್ತು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಗೆ ಲಗ್ಗೆ

“ಮೊಹಾಲಿಯಲ್ಲಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ XI ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು...

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ – 2025 ಮುಡಿಗೇರಿಸಿಕೊಂಡ ಭಾರತ

“ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಬಗ್ಗುಬಡಿದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದು...

ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಗೇರಿದ ಭಾರತ ತಂಡಕ್ಕೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್...