ಮಲ್ಪೆ ಅಪರಾಧ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಮಗನನ್ನು ಪೊಲೀಸರಿಂದ ರಕ್ಷಿಸಿದ ತಂದೆ ಮೇಲೆ ಪ್ರಕರಣ ದಾಖಲು

53

ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣದಲ್ಲಿ ತೊಡಗಿಕೊಂಡಿದ್ದ ದರ್ಶನ್ ಎಂಬುವನನ್ನು ಆತನ ಮನೆಗೆ ತೆರಳಿದಾಗ ಆತನ ತಂದೆ ಮಗನನ್ನು ರಕ್ಷಿಸಿ ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿ ಹೊರಗೆ ಕಳಿಸಿದ್ದ ಕಾರಣ ಪೊಲೀಸರು ಆರೋಪಿಯ ತಂದೆ ಮೇಲೆ ತಂದೆ ವಿರುದ್ಧ ಪ್ರಕರಣದ ಮಾಡಿದ್ದಾರೆ

ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 33/2025 ಕಲಂ: 309(4) BNS  ಪ್ರಕರಣದಲ್ಲಿ  ಪ್ರಕರಣದ  ಆರೋಪಿ  ಪತ್ತೆಯ ಬಗ್ಗೆ ಸ್ಥಳೀಯ  ಕೆಲವು  ಸಿ.ಸಿ  ಟಿವಿ. ಪೂಟೇಜನ್ನು  ಪರಿಶೀಲನೆ  ಮಾಡಲಾಗಿದ್ದು 

ಸ್ಥಳೀಯವಾಗಿ  ಮಾಹಿತಿ  ಸಂಗ್ರಹಿಸಿದಾಗ  ಬಡಾನಿಡಿಯೂರು  ಗ್ರಾಮದ  ನಾರಾಯಣ  ಬಂಗೇರಾ ರವರ ಮಗ  ದರ್ಶನ್ ಕುಮಾರ್ ಎಂಬುವವನು  KA-20-EZ- 1502  ಮೋಟಾರು ಸೈಕಲಿನಲ್ಲಿ  ಬಂದು  ಸುಲಿಗೆ  ಮಾಡಿರುವುದಾಗಿ  ಖಚಿತ ಮಾಹಿತಿ  ತಿಳಿದುಬಂದಿರುತ್ತದೆ

. ನಾರಾಯಣ  ರವರಲ್ಲಿ ದರ್ಶನ್ ಬಗ್ಗೆ ವಿಚಾರಿಸಲಾಗಿ 3 ದಿನಗಳಿಂದ ಮನೆಗೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಇಲಾಖಾ ಜೀಪಿನಲ್ಲಿ ಠಾಣಾ ಸಿಬ್ಬಂದಿಯವರೊಂದಿಗೆ ಆರೋಪಿ ದರ್ಶನ್ ಕುಮಾರ್ ಮನೆಯ  ಬಳಿ  ತೆರಳಿದಾಗ   ನಾರಾಯಣ  ರವರು ಮನೆಯಿಂದ ಹೊರಗೆ  ಬಂದು  ಇನ್ನು ದರ್ಶನ್  ಮನೆಗೆ  ಬಂದಿರುವುದಿಲ್ಲ ಎಂದು  ಮಾಹಿತಿ  ನೀಡಿರುತ್ತಾರೆ. 

ಕಂಪೌಂಡಿನಿಂದ  ಒಳಗೆ   ಹೋಗಲು   ಅವಕಾಶವನ್ನು  ನೀಡಿರುವುದಿಲ್ಲ. ಹಾಗೂ  ಮಾತನಾಡುತ್ತಾ  ಒಂದು  ನಿಮಿಷ ನೀವು  ಇಲ್ಲೇ  ಇರಿ  ಬರುತ್ತೇನೆ  ಎಂದು  ಹೇಳಿ  ಮನೆಯ  ಒಳಗೆ  ಹೋದ ನಾರಾಯಣ  ರವರು ಹಿಂಬದಿಯ  ಬಾಗಿಲಿನಿಂದ  ದರ್ಶನ್ ನನ್ನು ಕರೆದುಕೊಂಡು  ಬಂದು  ಅವನ  ದ್ವಿಚಕ್ರ ವಾಹನದಲ್ಲಿ  ಅವನನ್ನು  ಅಲ್ಲಿಂದ  ತಪ್ಪಿಸಿಕೊಂಡು  ಹೋಗಲು ಅವಕಾಶ ಮಾಡಿಕೊಟ್ಟಿರುತ್ತಾರೆ.

ಇದನ್ನು ನೋಡಿ  ಕಂಪೌಂಡ್  ಬಳಿ ಹೋಗುವಷ್ಟರಲ್ಲಿ   ಆತನು  ದ್ವಿಚಕ್ರ  ವಾಹನದಲ್ಲಿ  ಅಲ್ಲಿಂದ  ಪರಾರಿಯಾಗಿರುತ್ತಾನೆ. ಪ್ರಕರಣದ  ಆರೋಪಿತ ದರ್ಶನ್  ಕುಮಾರ್ ಈತನು  ಆರೋಪಿ ಎಂದು ತಿಳಿದಿದ್ದರೂ 

ಅವನನ್ನು  ಮರೆ ಮಾಡುವ  ಉದ್ದೇಶದಿಂದ  ಪೊಲೀಸರಿಗೆ  ಸುಳ್ಳು ಮಾಹಿತಿ  ನೀಡಿ, ಆಶ್ರಯ ನೀಡಿ  ಆತನನ್ನು  ಅಲ್ಲಿಂದ  ತಪ್ಪಿಸಿಕೊಂಡು ಹೋಗಲು ನಾರಾಯಣ  ರವರು  ಸಹಾಯ ಮಾಡಿ ಅಪರಾಧವೆಸಗಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2025 ಕಲಂ:249(b),212 BNS ರಂತೆ ಪ್ರಕರಣ ದಾಖಲಾಗಿರುತ್ತದೆ

Leave a comment

Leave a Reply

Your email address will not be published. Required fields are marked *

Related Articles

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...