ಸಾಲ ವಸೂಲಾತಿ ಸೊಸೈಟಿಯಲ್ಲಿ ಮಹಿಳೆಯನ್ನು ರಾತ್ರಿವರೆಗೆ ಕುಳ್ಳಿರಿಸಿ ಜಾತಿನಿಂದನೆ,ಜೀವ ಬೆದರಿಕೆ ಒಡ್ಡಿದ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

52

ಉಡುಪಿ ಕಲ್ಯಾಣಪುರ  ಸಂತೆಕಟ್ಟೆ  ಮೇರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿ  ನಿಕಿತ ಎನ್ನುವ ಮಹಿಳೆ ಸಾಲವನ್ನು ಪಡೆದುಕೊಂಡಿದ್ದು, ಸಾಲದ ಕಂತನ್ನು ಸ್ವಲ್ಪ ಸ್ವಲ್ಪ ಕಟ್ಟುತ್ತಿದ್ದು,

ಆದರೂ ಸೊಸೈಟಿಯ ಇಬ್ಬರೂ ಸಿಬ್ಬಂದಿಗಳು ಪದೇ-ಪದೇಇವರ ಮನೆಗೆ ಹಾಗೂ ಅವರ ಗಂಡ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಸಾಲದ ಹಣವನ್ನು ಕಟ್ಟುವಂತೆ ಕಿರುಕುಳ ನೀಡುತ್ತಿದ್ದು,

ಇದೇ ಕಾರಣದಿಂದ ನಿಕಿತಅವರ ಗಂಡನನ್ನು ಕೆಲಸದಿಂದ ತೆಗೆದುಹಾಕಿದ್ದು, ದಿನಾಂಕ:13/03/2025 ರಂದು ಸಂಜೆ 5 ಗಂಟೆಗೆ ದ್ವಿಚಕ್ರ ವಾಹನದಲ್ಲಿ ಬಂದ ಸೊಸೈಟಿಯ ಇಬ್ಬರು ಸಿಬ್ಬಂದಿಗಳು  ದೂರುದಾರರ ಮನೆಯನ್ನು ಅಕ್ರಮವಾಗಿ ಪ್ರವೇಶಮಾಡಿ,

ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಾಳೆ ಸೊಸೈಟಿಗೆ 10,000/- ರೂಪಾಯಿ ಹಣವನ್ನು ಕಟ್ಟಬೇಕು, ಇಲ್ಲವಾದಲ್ಲಿ ಹೇಗೆ ವಸೂಲಿ ಮಾಡಬೇಕು ಗೊತ್ತಿದೆ ಎಂದು ಬೆದರಿಕೆ ಹಾಕಿದ್ದು,

ಮರುದಿನ ದಿನಾಂಕ: 14/03/2025 ರಂದು ನಿಕಿತಅವರು ಸೊಸೈಟಿಗೆ 3000/-ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ಕಟ್ಟಿದ್ದು, ಸೊಸೈಟಿಯವರು ಹಣ ಕಟ್ಟಿರುವುದಕ್ಕೆ  ಯಾವುದೇ ರಶೀದಿಯನ್ನು ನೀಡದೇ

ನಿಕಿತರನ್ನು ಸಂಜೆ 5:30 ಗಂಟೆಯಿಂದ 7 ಗಂಟೆಯವರೆಗೆ ಅಲ್ಲಿಯೇ ಕೂರಿಸಿ ಸೊಸೈಟಿಯ ಮ್ಯಾನೇಜರ್‌ ಹಾಗೂ ಅಲ್ಲಿಯ ಸಿಬ್ಬಂದಿಗಳಾದ 2 ಮಹಿಳೆಯರು ಮತ್ತು 2 ಪುರುಷರು ಅವಾಚ್ಯ ಶಬ್ದಗಳಿಂದ ಕೆಟ್ಟದಾಗಿ ಬೈದಿದ್ದು,

ಮ್ಯಾನೇಜರ್‌ ದೂರುದಾರರಿಗೆ ಜಾತಿ ನಿಂದನೆ ಮಾಡಿ  ನೀನು 10,000/- ರೂಪಾಯಿ ಹಣವನ್ನು ಕಟ್ಟಲೇ ಬೇಕು ಎಂದು ಹೇಳಿ ಬೆದರಿಕೆ ಹಾಕಿರುತ್ತಾರೆ . ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Leave a comment

Leave a Reply

Your email address will not be published. Required fields are marked *

Related Articles

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...

ಪೂರ್ಣಿಮಾ ಶೆಟ್ಟಿಗೆ ‘ಮಾನವ ಹಕ್ಕುಗಳ ಸಬಲೀಕರಣ ಮಾನವೀಯ ಶ್ರೇಷ್ಠತೆ’ ಪ್ರಶಸ್ತಿ ಗೌರವ

ಸಾಮಾಜಿಕ ಸೇವಾ ಕಾರ್ಯಕರ್ತೆ ಹಾಗೂ ‘ವಸುದೈವ ಕುಟುಂಬಕಂ’ ಎನ್‌ಜಿಒ ಸಂಸ್ಥೆಯ ಸಂಸ್ಥಾಪಕಿ ಪೂರ್ಣಿಮಾ ಶೆಟ್ಟಿ ಅವರಿಗೆ...