ಅಮೃತಸರ  ದೇವಾಲಯದ ಬಳಿ ಬಾಂಬ್ ಸ್ಫೋಟ ಬೈಕ್ ನಲ್ಲಿ ಬಂದ ದುಷ್ಕರ್ಮಿ ಗಳು

48

ಪಂಜಾಬ್‌ ರಾಜ್ಯದ ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಸ್ಫೋಟ ಸಂಭವಿಸಿದ್ದು, ಗೋಡೆ ಹಾಗೂ ಕಿಟಕಿಗಳಿಗೆ ಹಾನಿಯಾಗಿರುವ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಆದರೆ, ಸ್ಫೋಟದ ಶಬ್ದಕ್ಕೆ ಖಂಡ್ವಾಲಾ ಪ್ರದೇಶದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ಘಟನೆಯ ವಿಡಿಯೋ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಗಳು ದೇವಾಲಯದ ಬಳಿ ಬೈಕ್‌ನಲ್ಲಿ ಬಂದಿರುವುದು, ಕೆಲ ಸೆಕೆಂಡುಗಳ ಕಾಲ ಕಾದು ದೇವಾಲಯದತ್ತ ಸ್ಫೋಟಕಗಳನ್ನು ಎಸೆದು, ಪರಾರಿಯಾಗಿರುವ ದೃಶ್ಯ ಕಂಡು ಬಂದಿದೆ.

ಬೆಳಗಿನ ಜಾವ 2 ಗಂಟೆಗೆ ಸುಮಾರಿಗೆ ಘಟನೆ ಕರಿತು ದೇವಾಲಯದ ಅರ್ಚಕರು ಮಾಹಿತಿ ನೀಡಿದರು ಎಂದು ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲಾರ್‌ ಅವರು ಹೇಳಿದ್ದಾರೆ. ಮಾಹಿತಿ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸ್ಫೋಟಕಗಳನ್ನು ಎಸೆದ ವ್ಯಕ್ತಿಗಳ ಪತ್ತೆಗೆ ತಂಡ ರಚಿಸಲಾಗಿದೆ.

ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಇದೀಗ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಮೃತಸರ ಹಾಗೂ ಗುರುದಾಸಪುರ ಪ್ರದೇಶಗಳಲ್ಲಿ ಪೊಲೀಸ್ ಠಾಣೆಯನ್ನೇ ಗುರಿಯಾಗಿಸಿಕೊಂಡು ಹಲವು ದಾಳಿಗಳು ನಡೆದಿವೆ

Leave a comment

Leave a Reply

Your email address will not be published. Required fields are marked *

Related Articles

ಪ್ರೀತಿ ನಾಟಕವಾಡಿ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಕೈಕೊಟ್ಟು ಪರಾರಿಯಾದ ಮುಸ್ಲಿಂ ಯುವಕ

“ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ,...

ತಾಯಿಯ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಮಗಳು ಪ್ರಕರಣ ದಾಖಲು

“ಬೆಂಗಳೂರು: ತಾಯಿಯ ಒಪ್ಪಿಗೆ ಇಲ್ಲದೆ ಆಕೆಯ ಖಾಸಗಿ ಪೋಟೋಗಳನ್ನು ತನ್ನ ಲವರ್ ಗೆ ಕಳುಹಿಸಿದ 23...

10ನೇ ತರಗತಿ ಬಾಲಕಿ ಗರ್ಭಿಣಿ,ಪೋಕ್ಸೊ ಪ್ರಕರಣದಾಖಲು ಆರೋಪಿ ಬಂಧನ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಸತಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ....

ಅನ್ಯಕೋಮಿನ  ಗಂಡ ಹೆಂಡತಿ ಜಗಳ ನಿಲ್ಲಿಸಲು ಹೋದ ನೆರೆಮನೆಯ ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ

ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಹಿಂದೂ ಯುವಕನೊಬ್ಬನ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ...