ಶಿವಸೇನಾ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

59

“ಗುರುವಾರ ತಡರಾತ್ರಿ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಶಿವಸೇನಾ ನಾಯಕನೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೈಕ್ ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಮೊಗಾದಲ್ಲಿ ನಡೆದಿದೆ. ದಾಳಿಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಶಿವಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಗತ್ ರೈ ಅಲಿಯಾಸ್ ಮಂಗಾ ಹಾಲು ಖರೀದಿಸುತ್ತಿದ್ದಾಗ ಈ ಘಟನೆ ನಡೆದಿದೆ.

ರಾತ್ರಿ 10 ಗಂಟೆ ಸುಮಾರಿಗೆ ಮೂವರು ಅಪರಿಚಿತ ವ್ಯಕ್ತಿಗಳು ಶಿವಸೇನಾ ನಾಯಕನ ಮೇಲೆ ಗುಂಡು ಹಾರಿಸಿದರು. ಆದರೆ, ಮಂಗತ್‌ ಬದಲಿಗೆ 11 ವರ್ಷದ ಬಾಲಕನಿಗೆ ತಗುಲಿತು.

ದಾಳಿಕೋರರು ಬೆನ್ನಟ್ಟಿದಾಗ ಮಂಗಾ ತಕ್ಷಣ ದ್ವಿಚಕ್ರ ವಾಹನದಲ್ಲಿ ಆ ಪ್ರದೇಶದಿಂದ ಪರಾರಿಯಾಗಲು ಯತ್ನಿಸಿದರು. ಬೆನ್ನಟ್ಟಿ ಮತ್ತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಗಾಯಗೊಂಡ ಬಾಲಕನನ್ನು ಆರಂಭದಲ್ಲಿ ಮೋಗಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಾ ಯಾವ ಶಿವಸೇನಾ ಬಣದ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ವೈಯಕ್ತಿಕ ದ್ವೇಷದ ಪ್ರಕರಣವಾಗಿದೆ.

ಮೃತರ ಕುಟುಂಬ ಉಲ್ಲೇಖಿಸಿರುವ ಆರು ಶಂಕಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಅಧಿಕಾರಿಯೊಬ್ಬರು ಹೇಳಿದರು.

Leave a comment

Leave a Reply

Your email address will not be published. Required fields are marked *

Related Articles

ಪಶ್ಚಿಮ ಬಂಗಾಳ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ನಾಳೆ ಪ್ರಮಾಣವಚನ ಸ್ವೀಕಾರ

“ಕೋಲ್ಕತ್ತಾ: ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಶಾಸಕಾಂಗ...

ವೀಟೋ ಅಧಿಕಾರ ಬಳಸಿ ಮಮತಾ ಬ್ಯಾನರ್ಜಿ ಮಂತ್ರಿಮಂಡಲ ವಿಸರ್ಜಿಸಿದ ರಾಜ್ಯಪಾಲ ಆರ್‌ಎನ್ ರವಿ

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಪ್ರಮುಖ ಸಾಂವಿಧಾನಿಕ ಬಿಕ್ಕಟ್ಟು ಭುಗಿಲೆದ್ದಿತು. ರಾಜ್ಯಪಾಲ ಆರ್.ಎನ್. ರವಿ ತಮ್ಮ ವಿಶೇಷ...

ಪಂಜಾಬ್‌ನ ಜಲಂಧರ್‌ ಹಾಗೂ ಅಮೃತಸರ ಸೇನಾ ಕಂಟೋನ್ಮೆಂಟ್ ಬಳಿ ಎರಡು ಬಾಂಬ್ ಸ್ಫೋಟ ಕಚ್ ಜಿಲ್ಲೆಯ ತೊರೆ ಪ್ರದೇಶದಲ್ಲಿ ಶಂಕಿತ ಪಾಕಿಸ್ತಾನಿ ದೋಣಿ ಪತ್ತೆ

“ಪಂಜಾಬ್‌ನ ಜಲಂಧರ್‌ ಹಾಗೂ ಅಮೃತಸರ ಸೇನಾ ಕಂಟೋನ್ಮೆಂಟ್ ಬಳಿ ಸತತ ಎರಡು ಬಾಂಬ್ ಸ್ಫೋಟಗಳು ಸಂಭವಿಸಿದ...

ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ, ಒದ್ದು ಹೊರಹಾಕಿ ::ವಕೀಲ ಮಹೇಶ್ ಜೇಠ್ಮಲಾನಿ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶಗಳ ನಂತರ ರಾಜಕೀಯ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಮತಾ ಬ್ಯಾನರ್ಜಿ...