ಉಡುಪಿ -ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜುಗಲ್ ಬಂದಿ ಭಜನಾ ಸ್ಪರ್ಧೆ ಬೆಳ್ತಂಗಡಿಯ ಸುನಾದ ವಿನೋದಿನಿ ಭಜನಾ ತಂಡಕ್ಕೆ ಪ್ರಶಸ್ತಿ

40

ಉಡುಪಿ-ದ.ಕ. ಜಿಲ್ಲಾಮಟ್ಟದ ಭಜನೆ ಜುಗಲ್ ಬಂದಿ ಸ್ಪರ್ಧೆ

ಭಕ್ತಿಯ ಅಂತರಾಳಕ್ಕಿಳಿದಲ್ಲಿ ಭಗವಂತನ ಕೃಪೆ ಸಾಧ್ಯ ಮನದ ಅಂತರಾತ್ಮನೊಂದಿಗೆ ಸಖ್ಯ ಬೆಳೆಸಿ ಭಕ್ತಿಯ ಪರಿಪೂರ್ಣತೆ ಬೆಳೆಸಿಕೊಂಡು ಭಗವಂತನನ್ನು ಭಜಿಸಿದಾಗ ಆತ ಖಂಡಿತವಾಗಿಯೂ ನಿಮ್ಮೊಂದಿಗೆ ಸಂವಹಿಸುತ್ತಾನೆ

. ದೇವರನ್ನು ಒಲಿಸಿಕೊಳ್ಳಲು ಭಜನೆಯೇ ಸುಲಭದ ದಾರಿ ಎಂದು ನಮ್ಮ ಪೂರ್ವಜರು ಮನೆ ಮನೆಗಳಲ್ಲಿ ದೇವರ ನಾಮವನ್ನು ಭಜಿಸುತ್ತಿದ್ದರು. ವಿದ್ಯಾವಂತ ಮಕ್ಕಳಲ್ಲಿ ಈ ಸಂಸ್ಕೃತಿ ನಶಿಸುತ್ತಿರುವುದು ಖೇದದ ಸಂಗತಿ ಎಂದು ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ನುಡಿದರು.

ಅವರು ಮಲ್ಪೆ ಪಡುಕರೆಯ ಶ್ರೀದೇವಿ ಭಜನಾ ಮಂದಿರ ಪರಿಸರದ ಕಡಲತಡಿಯಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ, ಪೆರ್ಡೂರು ಹಾಗೂ ಮತ್ತ್ವರಾಜ್ ಗ್ರೂಪ್, ಮಲ್ಪೆ ಇವರ ಸಹಯೋಗದಲ್ಲಿ ಶ್ರೀದೇವಿ ಭಜನಾ ಮಂದಿರದ ಸಹಕಾರದಲ್ಲಿ ನಡೆಯುತ್ತಿರುವ ಉಡುಪಿ-ದ.ಕ. ಜಿಲ್ಲಾಮಟ್ಟದ ಆಯ್ದ ತಂಡಗಳ ಭಜನಾ ಜುಗಲ್ ಬಂದಿ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಸ್ಪರ್ಧೆಯನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಉದ್ಯಮಿಗಳಾದ ನಾಗರಾಜ ಸುವರ್ಣ, ಶೇಖರ್ ಪುತ್ರನ್, ಮತ್ತ್ವರಾಜ್ ಗ್ರೂಪ್‌ನ ಅಧ್ಯಕ್ಷ ಕೇಶವ ಎಂ. ಕೋಟ್ಯಾನ್, ಅಭಿನಂದನ್ ಕೋಟ್ಯಾನ್, ಶ್ರೀದೇವಿ ಭಜನಾ ಮಂದಿರದ ಗೌರವಾಧ್ಯಕ್ಷ ಗಂಗಾಧರ್ ಜಿ, ಅಧ್ಯಕ್ಷರಾದ ಗಿರೀಶ್ ಎ. ಕುಂದರ್, ಶ್ರೀದೇವಿ ಆಂಜನೇಯ ಫ್ರೆಂಡ್ಸ್ ನ ಹೇಮಂತ್ ಖಾರ್ವಿ, ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ರವೀಂದ್ರ ನಾಡಿಗ್, ತೀರ್ಪುಗಾರರಾದ ರಾಧಾಕೃಷ್ಣ ಭಟ್ ಕುತ್ಪಾಡಿ, ಉಷಾ ಹೆಬ್ಬಾರ್, ಮಣಿಪಾಲ ಹಾಗೂ ಅಕ್ಷತಾ ವಿಶುರಾವ್ ಹಾವಂಜೆ ಉಪಸ್ಥಿತರಿದ್ದರು.

ಉಪೇಂದ್ರ ಆಚಾ‌ರ್ ಕಾರ್ಯಕ್ರಮ ನಿರೂಪಿಸಿದರು, ಪ್ರಭಾಕರ ಶೆಟ್ಟಿ ಸ್ವಾಗತಿಸಿದರು.

ಉಡುಪಿ-ದ.ಕ. ಜಿಲ್ಲಾಮಟ್ಟದ ಭಜನೆ ಜುಗಲ್ ಬಂದಿ ಸಮಾರೋಪ:

ಬೆಳ್ತಂಗಡಿಯ ಸುನಾದ ವಿನೋದಿನಿ ತಂಡ ಪ್ರಥಮ

ಮಲ್ಪೆ, ಮಲ್ಪೆ ಪಡುಕರೆಯ ಶ್ರೀದೇವಿ ಭಜನಾ ಮಂದಿರ ಪರಿಸರದ ಕಡಲತಡಿಯಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ, ಪೆರ್ಡೂರು ಹಾಗೂ ಮತ್ಸರಾಜ್ ಗ್ರೂಪ್. ಮಲ್ಪೆ ಇವರ ಸಹಯೋಗದಲ್ಲಿ ಶ್ರೀದೇವಿ ಭಜನಾ ಮಂದಿರದ ಸಹಕಾರದಲ್ಲಿ ಮಾ.2ರಂದು ಜರಗಿದ ಉಡುಪಿ-ದ.ಕ. ಜಿಲ್ಲಾಮಟ್ಟದ ಆಯ್ದ ತಂಡಗಳ ಭಜನಾ ಜುಗಲ್ ಬಂದಿ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಸುನಾದ ವಿನೋದಿನಿ ಭಜನಾ ತಂಡ ಪ್ರಥಮ ಬಹುಮಾನವನ್ನು ಪಡೆದಿದೆ.

ಅಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮತ್ತ್ವರಾಜ್ ಗ್ರೂಪ್‌ನ ಕೇಶವ ಎಂ. ಕೋಟ್ಯಾನ್ ಮಾತನಾಡಿ ನಮ್ಮ ಪೂರ್ವಜರು ಮಾನವ-ದೇವ ಸಂಬಂಧವನ್ನು ಬೆಸೆಯಲು ಪ್ರತಿ ಊರುಗಳಲ್ಲಿ ಗುಡಿ ಗೋಪುರಗಳನ್ನು, ಭಜನಾ ಮಂದಿರಗಳನ್ನು ಕಟ್ಟಿದರು. ಇಲ್ಲಿ ಸತ್ಸಂಗದ ಜತೆಗೆ ದೇವರ ಭಜನೆಗಳನ್ನು ಹಾಡುವ ಮೂಲಕ ಮುಂದಿನ ಪೀಳಿಗೆಗಳು ಸುಸಂಸ್ಕೃತರಾಗಿ, ಆಸ್ತಿಕರಾಗಿ ಬೆಳೆಯಬೇಕು ಎಂಬುದು ಅವರ ಮನದಿಚ್ಛೆಯಾಗಿತ್ತು. ಅಂತಹ ವ್ಯವಸ್ಥೆಯನ್ನು ಇಂದಿನ, ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಸ್ಪರ್ಧೆಗೆ ಪಡುಕರೆಯ ಈ ಸ್ಥಳ ಆಯುಕೊಂಡ ಕಾರಣ ಆದಿಪರಾಶಕ್ತಿ ಸಹಿತ ಹಲವು ಶಕ್ತಿಗಳ ಸ್ನಾನವಾಗಿರುವ ಮಲ್ಲಿ ದ್ವೀಪದ ಸಮೀಪದಲ್ಲಿ ಕಡಲ ಕಿನಾರೆಯಲ್ಲಿರುವುದು. ಇಲ್ಲಿ ನಡೆಯುವ ಭಜನೆಯ ತರಂಗಗಳು ಆ ಶಕ್ತಿಗಳಿಗೂ ತಲುಪಿ ಸಕಲರಿಗೂ ಸನ್ಮಂಗಳ ಉಂಟಾಗಲಿ ಎಂಬ ಉದ್ದೇಶದಿಂದ ಎಂದು ಆ ದ್ವೀಪದ ಮಹಾತ್ಮಿಯನ್ನು ವಿವರಿಸಿದರು. ಹಾಗೂ ಈ ಯೋಗ ನಮಗೆ ಲಭಿಸಿರುವುದು ನಮ್ಮ ಪುಣ್ಯ ಎಂದರು.

ದೇವರ ನಾಮಗಳು ಅಥವಾ ಭಜನೆಗಳು ಜೀವನದ, ಬದುಕಿನ ಉತ್ತಮ ಸಂದೇಶ ನೀಡುತ್ತವೆ. ಅವುಗಳನ್ನು ಅರ್ಥೈಸಿಕೊಂಡು ಭಗವಂತನ ಆರಾಧನೆ ಮಾಡುವುದರ ಮೂಲಕ ಬದುಕಿನ ಸಾರ್ಥಕತೆ ಮೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಭಜನೆಯತ್ತ ಯುವ ಜನಾಂಗವನ್ನು ಕೊಂಡೊಯ್ಯು ಭಜನೆಯಲ್ಲಿರುವ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತನ್ನು ಅವರಿಗೆ ಕಲಿಸ ಬೇಕಾಗಿದೆ ಎಂದು ತಿಳಿಸಿ, ಜನ ಮನೆಗಳಲ್ಲಿ ಪ್ರಾಣಿಗಳಿಗೆ ಕೊಡುತ್ತಿರುವ ಪ್ರಾಮುಖ್ಯತೆಯನ್ನು ಹೆತ್ತವರಿಗೆ ಕೊಡುತ್ತಿಲ್ಲ, ನಾಯಿ ಕಳೆದು ಹೋದರೆ 1 ಲಕ್ಷ ಬಹುಮಾನ ಸಾರುವ ಜನ ಹೆತ್ತವರನ್ನು ವ್ಯದ್ಯಾಶ್ರಮಕ್ಕೆ ಸೇರಿಸುತ್ತಿರುವುದು ಖೇದಕರ ಎಂದರು

.

ಒಬ್ಬರು ವಿಚ್ಛೇದನವಾದದ್ದನ್ನು ಸಂಭ್ರಮಿಸಿ ಗೆಳೆಯರನ್ನು ಕರೆದು ಪಾರ್ಟಿ ಮಾಡಿರುವುದನ್ನು

ನೋಡಿದರೆ ಕುಟುಂಬ ವ್ಯವಸ್ಥೆ ಅಧಃಪತನಕ್ಕೆ ಹೋಗುತ್ತಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿ ಯುವ ಜನರಲ್ಲಿ ಇಂದು ಮದುವೆ ಎಂದರೇನು, ದಾಂಪತ್ಯ ಜೀವನ ಎಂದರೇನು, ಬಾಂಧವ್ಯ ಎಂದರೇನು ಎನ್ನುವುದನ್ನು ಕಲಿಸಿ ಕುಟುಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾಗಿದೆ ಎಂದರು

ಇಂದಿನ ದಿನಗಳಲ್ಲಿ ಮನುಷ್ಯನ ಮನಸ್ಥಿತಿ ಹೇಗಿದೆ ಎಂದರೆ ಎಲ್ಲಿಗೂ ಆಗದ ಫಲವಸ್ತುಗಳನ್ನು ದೇವಸ್ಥಾನಕ್ಕೆ ನೀಡಿದರಾಯಿತು ಎಂದು ಆದರೆ ನಮ್ಮ ಮನಸ್ಥಿತಿ ಹೇಗಿರಬೇಕೆಂದರೆ ಅಂದು ಶಬರಿ ತನಗೆ

ಕಣ್ಣುಗಳಿಲ್ಲದಿದ್ದರೂ ತನ್ನ ಬಾಯಿಯಲ್ಲಿ ಕಚ್ಚಿನೋಡಿ ರಾಮನಿಗೆ ರುಚಿ ಮತ್ತು ಶುಚಿಯಾದ

ಹಣ್ಣುಗಳನ್ನೇ ನೀಡಬೇಕು ಎನ್ನುವ ಮನಸ್ಥಿತಿ ನಮ್ಮದಾಗಬೇಕು ಎಂದರು

ಈ ಸಂದರ್ಭದಲ್ಲಿ ಶ್ರೀದೇವಿ ಭಜನಾ ಮಂದಿರದ ಗೌರವಾಧ್ಯಕ್ಷ ಗಂಗಾಧರ ಜಿ. ಅವರು ಇಂದಿನ ಈ ಭಜನಾ ಯಜ್ಞವನ್ನು ನಮ್ಮ ಮಂದಿರದ ಪರಿಸರದಲ್ಲಿ ನಡೆಸಿ ಈ ಸ್ಥಳವನ್ನು ಪಾವನ ಗೊಳಿಸಿದ್ದೀರಿ ಎಂದು ಸಮಿತಿ ಮತ್ತು ಮಸ್ಯರಾಜ್ ಗ್ರಾಪ್ ಹಮ್ಮಿಕೊಳ್ಳುತ್ತಿರುವ ಸಮಾಜಮುಖೀ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಸಮಾರೋಪ ಸಮಾರಂಭದಲ್ಲಿ ಭಜನೆ ಕ್ಷೇತ್ರದ ಸಾಧಕರಾದ ಪಡುಕರೆ ಕುದುಕರೆ ಶ್ರೀ ರಾಮಮಿತ್ರ ಭಜನಾ ಮಂಡಳಿಯ ಗೌರವಾಧ್ಯಕ್ಷ ಪಾಂಡು ಜಿ. ಮೆಂಡನ್ ಹಾಗೂ ಪಡುಕರೆ ಕನಕೊಡ ಶ್ರೀ ಪಂಡರೀನಾಥ ಭಜನಾ ಮಂಡಳಿಯ ಶಿವರಾಮ ಪುತ್ರನ್ ಅವರನ್ನು ಸಮ್ಮಾನಿಸಲಾಯಿತು.

ಸ್ಪರ್ಧೆಯ ವಿಜೇತರ ಪಟ್ಟಿ:

ಸುನಾದ ವಿನೋದಿನಿ, ಬೆಳ್ತಂಗಡಿ (ಪ್ರಥಮ), ಗಾನ ಸುರಭಿ, ಹೊಸತೋಟ, ಮಲ್ಪೆ (ದ್ವಿತೀಯ), ಶಿವರಂಜಿನಿ, ಸುರತ್ಕಲ್ (ತೃತೀಯ), ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಕಾಪು ಪೊಲಿಪು ಮತ್ತು ಬೈಕಂಪಾಡಿ ಮಹಿಳಾ ಸಮಾಜ, ಬೈಕಂಪಾಡಿ (ಸಮಾಧಾನಕರ). ಉತ್ತಮ ಹಾಡುಗಾರರು: ಬಾಲಕೃಷ್ಣ, ಗಾನ ಸುರಭಿ ಮಲ್ಪೆ, ಮಮತಾ, ಶಿವರಂಜಿನಿ, ಸುರತ್ಕಲ್, ಪ್ರೋತ್ಸಾಹಕ ಬಹುಮಾನ: ಯಶಿಕಾ, ಬಾಲಕರ ಶ್ರೀರಾಮ ಬಾಲವೃಂದ ಭಜನಾ ಮಂಡಳಿ, ಮಲ್ಪೆ, ಸಂಚರಿ, ಭಕ್ತಿ ವಿಕಾಸ, ಪಿತ್ರೋಡಿ ಉದ್ಯಾವರ.

ಉತ್ತಮ ತಬಲಾ ವಾದಕರು: ಮಕ್ಕಳ ಶ್ರೀ ಮಹಾಲಕ್ಷ್ಮೀ, ಕಾಪು, ಸುನಾದ ವಿನೋದಿನಿ, ಬೆಳ್ತಂಗಡಿ, ಉತ್ತಮ ಹಾರ್ಮೋನಿಯಂ ವಾದಕರು: ಸುನಾದ ವಿನೋದಿನಿ, ಬೆಳ್ತಂಗಡಿ.

ವೇದಿಕೆಯಲ್ಲಿ ಉದ್ಯಮಿಗಳಾದ ಮತ್ಸರಾಜ್ ಗ್ರೂಪ್‌ನ ಅಧ್ಯಕ್ಷ ಕೇಶವ ಎಂ. ಕೋಟ್ಯಾನ್, ಅಭಿನಂದನ್

ಕೋಟ್ಯಾನ್, ಶ್ರೀದೇವಿ ಭಜನಾ ಮಂದಿರದ ಗೌರವಾಧ್ಯಕ್ಷ ಗಂಗಾಧರ್ ಜಿ., ಅಧ್ಯಕ್ಷರಾದ ಗಿರೀಶ್ ಎ.

ಕುಂದ‌ರ್, ಅಂಬಲಪಾಡಿ ಗ್ರಾ.ಪಂ. ಸದಸ್ಯೆ ಸುಭಾಷಿಣಿ ಕಾಂಚನ್ ಕಿದಿಯೂರು, ಶ್ರೀದೇವಿ ಆಂಜನೇಯ

ಫ್ರೆಂಡ್ಸ್ ನ ಹೇಮಂತ್ ಖಾರ್ವಿ, ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ರವೀಂದ್ರ ನಾಡಿಗ್,

ತೀರ್ಪುಗಾರರಾದ ಉಷಾ ಹೆಬ್ಬಾರ್, ಮಣಿಪಾಲ ಉಪಸ್ಥಿತರಿದ್ದರು.

ಉಪೇಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಸಿ ಕಾರ್ಯ ಕ್ರಮದ ಆಯೋಜನೆಗೆ ಸಹಕರಿಸಿದ ಸರ್ವರನ್ನು ನೆನೆದು ವಂದಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಕನ್ನಡ ಶಾಲೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ – ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ

ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹರಿದು ಬಂದ ಜನ ಸಾಗರ ಜನವರಿ ತಿಂಗಳಲ್ಲಿ ಕಾಣಿಕೆಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹ

ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಜನವರಿಯಲ್ಲಿ 1.39...

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯನ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ...

ಮಂಗಳೂರು ಬಾಂಗ್ಲಾದೇಶದ ಪ್ರಜೆಯೆಂದು ತಪ್ಪು ತಿಳಿದು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಹಲ್ಲೆ

ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ...