ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿ ಮಗುಚಿ ಬಿದ್ದ ವಿಮಾನ 18 ಮಂದಿಗೆ ಗಾಯ

54

“ಟೊರೊಂಟೊದ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಡೆಲ್ಟಾ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾದ ನಂತರ ಕನಿಷ್ಠ 18 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಹಿಮಭರಿತ ನೆಲದ ಮೇಲೆ ವಿಮಾನ ಮಗುಚಿ ಬಿದ್ದಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ. ಆರಂಭಿಕ ವರದಿಯಲ್ಲಿ ಯಾವುದೇ ಸಾವು- ನೋವುಗಳನ್ನು ಖಚಿತಪಡಿಸಿಲ್ಲ.

ಗಾಯಗೊಂಡ 18 ಪ್ರಯಾಣಿಕರನ್ನು ಪ್ರದೇಶ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತದಿಂದ ತೊಂದರೆಯಾದವರತ್ತ ನಮ್ಮ ಗಮನ ಕೇಂದ್ರೀಕರಿಸಿರುವುದಾಗಿ ಡೆಲ್ಟಾ ಏರ್ ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಮಿನ್ನಿಯಾಪೋಲಿಸ್‌ನಿಂದ ಬರುತ್ತಿದ್ದ 80 ಜನರಿದ್ದ ವಿಮಾನ ರನ್‌ವೇಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

. ತುರ್ತು ಭೂಸ್ಪರ್ಶದ ವೇಳೆ ಅಪಘಾತ, ಎರಡು ತುಂಡಾದ ಕಾರ್ಗೊ ವಿಮಾನ ಘಟನೆ ಹಿನ್ನಲೆಯಲ್ಲಿ ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಎಲ್ಲಾ ವಿಮಾನಗಳನ್ನು ಏರ್ ಲೈನ್ಸ್ ರದ್ದುಗೊಳಿಸಿತ್ತು.

ಘಟನೆ ನಂತರ ತುರ್ತು ಕಾರ್ಯಾಚರಣೆ ತಂಡಗಳು ಕಾರ್ಯಾಚರಣೆ ನಡೆಸಿರುವುದಾಗಿ ಟೊರೊಂಟಾ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ.

Leave a comment

Leave a Reply

Your email address will not be published. Required fields are marked *

Related Articles

ದಿಗ್ಬಂಧನ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗು ಸಾಗಲು ಇರಾನ್ ಭರವಸೆ

ಟೆಹರಾನ್: ಅಮೆರಿಕ ಇರಾನ್ ಬಂದರುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆ...

ಹೊರ್ಮುಜ್ ಜಲಸಂಧಿ ಕದನ ವಿರಾಮದ ತಪ್ಪು ತಿಳುವಳಿಕೆಯಿಂದ ಅನುಮತಿ ಇಲ್ಲದೆ ಬಂದರೆ ನಿಮ್ಮ ಸರಕು ಸಾಗಾಣಿಕ ಹಡಗುಗಳನ್ನು ಹೊಡೆದುರುಳಿಸ್ತೀವಿ:: ಇರಾನ್ ಎಚ್ಚರಿಕೆ

ಟೆಹ್ರಾನ್: ಕದನ ವಿರಾಮ ಘೋಷಣೆಯಾಗಿದೆ ಎಂದು ಇಡೀ ಜಗತ್ತು ಖುಷಿ ಪಡ್ತಿದ್ರೆ… ಅದ್ಯಾಕೋ ಇರಾನ್ ಯುದ್ಧ...

 ಬ್ರಿಟನ್ ಆಹ್ವಾನದ ಮೇರೆಗೆ    ಹಾರ್ಮುಜ್ ಜಲಸಂಧಿಯ  ಅಂತರರಾಷ್ಟ್ರೀಯ ಮಾತುಕತೆಯಲ್ಲಿ ಭಾರತ ಭಾಗಿ

ನವದೆಹಲಿ: ಯುನೈಟೆಡ್ ಕಿಂಗ್‌ಡಮ್‌(ಬ್ರಿಟನ್)ನ ಆಹ್ವಾನದ ಮೇರೆಗೆ ಭಾರತವು ಹಾರ್ಮುಜ್ ಜಲಸಂಧಿಯ ಕುರಿತು ಅಂತರರಾಷ್ಟ್ರೀಯ ಮಾತುಕತೆಯಲ್ಲಿ ಭಾಗವಹಿಸುತ್ತಿದೆ...

ಯುಎಇ ಮೇಲೆ ಇರಾನ್ ಕ್ಷಿಪಣಿ ಮತ್ತು  ಡ್ರೋನ್ ದಾಳಿ ಐವರು ಐವರು ಭಾರತೀಯರಿಗೆ ಗಾಯ

“ಇರಾನ್‌ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಕೈಗಾರಿಕಾ ವಲಯದಲ್ಲಿ ಭಾರೀ...