ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ದಾಖಲು

79

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ  ಶ್ರೀಮತಿ ಸಾಕು  ಇವರ ಗಂಡ ರಘು ರವರು ಧಮಸ್ಥಳ ಸಂಘದಲ್ಲಿ ಸದಸ್ಯರಾಗಿದ್ದು ಅವರ ಜೊತೆಯಲ್ಲಿ ಶೇಖರ, ಸಂತೋಷ,ರಮೇಶ, ಚಂದ್ರ ರವರು ಇದ್ದು ಸಂಘದ ಹಣವನ್ನು ವಾರಕ್ಕೊಮ್ಮೆ ಕಟ್ಟುತ್ತಿದ್ದರು

ಅದರಂತೆ 04/02/2025 ರಂದು ರಘು  ಸಂಘದ ಹಣವನ್ನು ಒಟ್ಟು ಮಾಡಿದ್ದು ಅದೇ ದಿನ ಸಂಜೆ ಸಂತೋಷ ಹಾಗೂ ಶೇಖರ ರವರು ರಘು ಅವರ ಮನೆಗೆ ಬಂದು ಸಂಘದ ಹಣವನ್ನು ಕೊಟ್ಟು ಹೋಗಿದ್ದು

ಅದೇ ದಿನ ಸಂತೋಷನು ಅವರ ಬಳಿ ಇದ್ದ ರೂ 5000/- ಹಣವನ್ನು ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿ ವಾಪಾಸ್ಸು ಮನೆಗೆ ಬಂದು  ಹುಡುಕಾಡಿದ್ದಲ್ಲಿ ಹಣವು ಸಿಕ್ಕಿರುವುದಿಲ್ಲ

ಮರುದಿನ  ಹಣದ ತೊಟ್ಟೆಯು ಸಿಕ್ಕಿದ್ದು ಅದನ್ನು ವಾಪಾಸ್ಸು ಸಂತೋಷನಿಗೆ ನೀಡಿದ್ದು ದಿನಾಂಕ 11/02/2025 ರಂದು ಸಾಕು ಅವರು ಗಂಡನೊಂದಿಗೆ ತಮ್ಮ ಬೈಕಿನಲ್ಲಿ ಅಮಾಸೆಬೈಲಿನ ತೋಟದಿಂದ ಮನೆಗೆ ಹೊಗುವಾಗ ಸಮಯ ಸುಮಾರು ರಾತ್ರಿ 09:15 ಗಂಟೆಗೆ ಹೆಂಗವಳ್ಳಿ ಪೇಟೆಯಲ್ಲಿ  ರಘು ಅವರು ಅಂಗಡಿಗೆ ಪುಸ್ತಕ ತರಲು ಹೋದಾಗ

ಬೈಕಿನ ಬಳಿ ಸಾಕು ಅವರು ನಿಂತುಕೊಂಡಾಗ ಆ ಸ್ಥಳಕ್ಕೆ ಸಂತೋಷ ರವರು ಬಂದು ಕಳೆದು ಹೋದ ಹಣ ಬಾಕಿ ಇದೆ ಎಂದು ಹೇಳಿ ಗಲಾಟೆ ಮಾಡುತ್ತಿದ್ದು ಆಗ ರಘು ಅವರು ಅಲ್ಲಿಗೆ ಬರುವಾಗ ಸಂತೋಷ ರವರು ರಘು ರವರನ್ನು ಅಡ್ಡಕಟ್ಟಿ ತಡೆದು ನಿಲ್ಲಿಸಿ ಮೊನ್ನೆ ನೀನು 5000/- ರೂಪಾಯಿ ಕೊಟ್ಟು ನೀನು 5000/- ರೂಪಾಯಿ ಇಟ್ಟುಕೊಂಡಿದ್ದಿಯಾ

ಎಂದು ಹೇಳಿ ಕೈಯಿಂದ ಮುಖಕ್ಕೆ, ಕೆನ್ನೆಗೆ ಹೊಡೆದು ದೂಡಿದ್ದು ಆಗ ನೆಲಕ್ಕೆ ಬಿದ್ದ ರಘು ರವರಿಗೆ ಕಾಲಿನಿಂದ ತುಳಿದಿದ್ದು ಈ ಹಿಂದೆ ಕೂಡ ಸುಮಾರು4 ತಿಂಗಳ ಹಿಂದೆ ಸಂತೋಷ ರವರು ಹೆಂಗವಳ್ಳಿ ಶಾಲೆ ಗುಡ್ಡೆ ಬಳಿ  ರಘು ಇವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದು ಈಗ ಬೆಳಕಿಗೆ ಬಂದಿದೆ .

ಈ ಬಗ್ಗೆ  ರಘು ಅವರ ಪತ್ನಿ ಸಾಕು ದೂರು ನೀಡಿದ್ದು ಶಂಕರನಾರಾಯಣ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Leave a comment

Leave a Reply

Your email address will not be published. Required fields are marked *

Related Articles

ಪಡುಬಿದ್ರಿ  ಕಡಲು ಕೊರೆತದಿಂದ ರಕ್ಷಣೆಗೆ  ತಡೆಗೋಡೆ ನಿರ್ಮಾಣಕ್ಕೆ ಸಚಿವ ಯು.ಟಿ. ಖಾದರ್ ಅವರಿಗೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ ವಿ ಅಮೀನ್ ಮನವಿ

ಪಡುಬಿದ್ರಿ, ಜು. 4:** ಉಡುಪಿ ಜಿಲ್ಲೆಯ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ಟಣ ಪ್ರದೇಶದಲ್ಲಿ ತೀವ್ರಗೊಳ್ಳುತ್ತಿರುವ...

ಕಾರ್ಕಳ ಟೈಗರ್ಸ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ–ಮಧುಮೇಹ ತಪಾಸಣೆ ಶಿಬಿರ

ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್...

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...