ಸಂಸತ್ ನಲ್ಲಿ ಮಸೂದೆ ಬೆಂಬಲಿಸಲು ವಿಪ್ ಜಾರಿಯಾಗಿದ್ದರು ಮತದಾನದಲ್ಲಿ ಭಾಗವಹಿಸದ ಬಿಜೆಪಿಯ 20 ಕ್ಕೂ ಹೆಚ್ಚು ಸಂಸದರು  ತನಿಖೆಗೆ ಮುಂದಾದ ಬಿಜೆಪಿ

2

ಮತದಾನದ ವೇಳೆ ಬಿಜೆಪಿಯ 20 ಕ್ಕೂ ಹೆಚ್ಚು ಸಂಸದರ ಗೈರು! ತನಿಖೆಗೆ ಮುಂದಾದ ಬಿಜೆಪಿ ಅಚ್ಚರಿ ಎಂದರೆ ವಿಪ್ ಹೊರತಾಗಿಯೂ ಆಡಳಿತಾರೂಢ ಬಿಜೆಪಿಯ 20 ಕ್ಕೂ ಹೆಚ್ಚು ಸಂಸದರು ಮತದಾನದ ವೇಳೆ ಗೈರು ಹಾಜರಾಗಿದ್ದರು. ಒಂದು ದೇಶ ಒಂದು ಚುನಾವಣೆ


ಒಂದು ದೇಶ ಒಂದುಚುನಾವಣೆ ಮಸೂದೆಯನ್ನು ಡಿ.17 ರಂದು ಸಂಸತ್ ನಲ್ಲಿ ಮಂಡಿಸಲಾಗಿದ್ದು ವಿಸ್ತೃತ ಚರ್ಚೆಗೆಂದು ಜಂಟಿ ಸದನ ಸಮಿತಿಗೆ ಶಿಫಾರಸು ಮಾಡಲಾಗಿದೆ.

ಮಸೂದೆಯ ಪ್ರಸ್ತಾವನೆಗೆ ಮತದಾನ ನಡೆದಿದ್ದು ಈ ವೇಳೆ ಮಸೂದೆ ಪರವಾಗಿ 269 ಮತಗಳು ಬಂದಿದ್ದರೆ, 198 ಮತಗಳು ವಿರುದ್ಧವಾಗಿ ಚಲಾವಣೆಯಾಗಿವೆ.

ಅಚ್ಚರಿ ಎಂದರೆ ವಿಪ್ ಹೊರತಾಗಿಯೂ ಆಡಳಿತಾರೂಢ ಬಿಜೆಪಿಯ 20 ಕ್ಕೂ ಹೆಚ್ಚು ಸಂಸದರು ಮತದಾನದ ವೇಳೆ ಗೈರು ಹಾಜರಾಗಿದ್ದರು.

ಮಸೂದೆ ಮಂಡನೆ ವೇಳೆ ಸದನದಲ್ಲಿ ಹಾಜರಿರುವಂತೆ ಸಂಸದರಿಗೆ ವಿಪ್ ಜಾರಿ ಮಾಡಲಾಗಿತ್ತಾದರೂ, ಗೈರಾಗುವ ಮೂಲಕ ಸಂಸದರು ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಆದಾಗ್ಯೂ, ಹಲವು ಸಂಸದರು ವೈಯಕ್ತಿಕ ಮತ್ತು ಕೆಲಸಕ್ಕೆ ಸಂಬಂಧಿಸಿದ ಕಾರಣಗಳಿಂದಾಗಿ ತಮ್ಮ ಗೈರುಹಾಜರಿಯ ಬಗ್ಗೆ ಮುಂಚಿತವಾಗಿ ತಿಳಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. “ನಾವು ಖಂಡಿತವಾಗಿಯೂ ಅವರ ಅನುಪಸ್ಥಿತಿಯ ಹಿಂದಿನ ಕಾರಣಗಳನ್ನು ಪರಿಶೀಲಿಸುತ್ತಿದ್ದೇವೆ.

ಕೆಲವರಿಗೆ ನಿಜವಾದ ಕಾರಣಗಳಿವೆ” ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

ಕೇಂದ್ರ ಸಚಿವ ಸಿ ಆರ್ ಪಾಟೀಲ್ ಸೇರಿದಂತೆ ಕೆಲವು ಸಂಸದರು ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಮಾರಂಭದಲ್ಲಿ ತೊಡಗಿದ್ದರು ಎಂದು ಮೂಲಗಳು ತಿಳಿಸಿವೆ.


ಬಿಜೆಪಿ ಮಿತ್ರಪಕ್ಷಗಳ ನಾಲ್ಕೈದು ಸಂಸದರು ಮತದಾನದ ವೇಳೆ ಹಾಜರಿರಲಿಲ್ಲ, ಈ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮಂಗಳವಾರ 90 ನಿಮಿಷಗಳ ಕಾಲ ನಡೆದ ಚರ್ಚೆಯ ನಂತರ ಲೋಕಸಭೆಯಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಕಾರ್ಯವಿಧಾನವನ್ನು ರೂಪಿಸುವ ಎರಡು ಮಸೂದೆಗಳನ್ನು ಮಂಡಿಸಲಾಯಿತು

. ಸಂವಿಧಾನ (129 ನೇ ತಿದ್ದುಪಡಿ) ಮಸೂದೆಯನ್ನು ಮೇಘವಾಲ್ ಅವರು ಮತಗಳ ವಿಭಜನೆಯ ನಂತರ ಲೋಕಸಭೆಯಲ್ಲಿ ಮಂಡಿಸಿದರು.

Leave a comment

Leave a Reply

Your email address will not be published. Required fields are marked *

Related Articles

ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ ನಲ್ಲಿ ರಮ್ಮಿ ಅಡಿ ಕೃಷಿ ಖಾತೆಯನ್ನು ಕಳೆದುಕೊಂಡ ಸಚಿವ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲಿನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ ತೀರ್ಪು ವಿಶೇಷ ನ್ಯಾಯಾಲಯದಿಂದ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್...

ಅವಧೇಶಾನಂದ ಮಹಾರಾಜ್ ಕೊಲೆ ಪ್ರಕರಣ: ಆರ್ ಎಸ್ಎಸ್ ಮಾಜಿ ಪ್ರಚಾರಕ ಉತ್ತಮ್ ಗಿರಿಗೆ ಜೀವಾವಧಿ ಶಿಕ್ಷೆ

ಸಿರೋಹಿ: 2018 ರಲ್ಲಿ ಏಕಲ್ ವಿದ್ಯಾಲಯದ ಪೋಷಕ ಅವಧೇಶಾನಂದ ಮಹಾರಾಜ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ...

2008 ಮಾಲೆಗಾಂವ್ ಸ್ಫೋಟ ಪ್ರಕರಣ: ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇರಿ 7 ಆರೋಪಿಗಳು ಖುಲಾಸೆ

ಮುಂಬೈ: 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್,...