ರಕ್ತದಾನ ಮಹಾದಾನ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಸಿ ರಕ್ತ ಸಂಗ್ರಹಿಸಿ ಬಡ ಜನರಿಗೆ ನೆರವಾಗಿರುವುದು ಒಳ್ಳೆಯ ಕಾರ್ಯ:: ದಿನಕರ್ ಹೇರೂರು

32

ಕಡೆಕಾರು ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರ, ಶ್ರೀ ಬ್ರಹ್ಮ ಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿ,ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮತ್ತು ಜಿಲ್ಲಾಸ್ಪತ್ರೆ ರಕ್ತ ನಿಧಿ ವಿಭಾಗ ಇದರ ಜಂಟಿ ಆಶ್ರಯದಲ್ಲಿ ರಕ್ತ ದಾನ ಶಿಬಿರವು ಕಡೆಕಾರು ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರ ವಠಾರದಲ್ಲಿ ನಡೆಯಿತು.

ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇವತ್ತು ಜಿಲ್ಲಾ ಸರಕಾರಿ ಆಸ್ಪತ್ರೆಯ ಜೊತೆ ಸೇರಿ ರಕ್ತದಾನ ಶಿಬಿರವನ್ನು ಏರ್ಪಡಿಸಿರುವುದು ಶ್ಲಾಘನೀಯ, ಇದರಿಂದ ಜಿಲ್ಲಾಸ್ಪತ್ರೆಗೆ ಬರುವ ರಕ್ತದ ಅವಶ್ಯಕತೆ ಇರುವ ಬಡ ರೋಗಿಗಳಿಗೆ ಸಹಾಯವಾಗುತ್ತದೆ ಎಂದರು.

ಇನ್ನೊರ್ವ ಅತಿಥಿ ಸುನೀಲ್ ಸಾಲ್ಯಾನ್ ಕಡೆಕಾರ್ ಅವರು ಮಾತನಾಡಿ ಸಂಘ ಸಂಸ್ಥೆಗಳಿಂದ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮದೊಂದಿಗೆ ಇಂತಾಹ ಸಾಮಾಜಿಕ ಕಾರ್ಯಕ್ರಮಗಳು ನಡೆದಾಗ ಸಂಘ ಸಂಸ್ಥೆಗಳ ಕೆಲಸಕ್ಕೆ ಹೆಚ್ಚಿನ ಅರ್ಥ ಬರುತ್ತದೆ ಎಂದರು.

ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಸತೀಶ್ ಸಾಲ್ಯಾನ್ ಅವರು ಉಡುಪಿಯಲ್ಲಿ ಪ್ರಸ್ತುತ ರಕ್ತದ ಬೇಡಿಕೆ ಮತ್ತು ತಮ್ಮ ಸಂಸ್ಥೆ ಇದಕ್ಕಾಗಿ ಸ್ಪಂದಿಸುತ್ತಿರುವ ಬಗ್ಗೆ ತಿಳಿಸಿದರು.

ಜಿಲ್ಲಾ ರಕ್ತನಿಧಿ ವಿಭಾಗದ ಡಾ. ಕಾವ್ಯ, ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರದ ಅಧ್ಯಕ್ಷರಾದ ದಿನೇಶ್ ಜೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಶ್ರೀ ಬ್ರಹ್ಮ ಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಪಾಲನ್ ಸ್ವಾಗತಿಸಿದರು, ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರದ ಕಾರ್ಯದರ್ಶಿ ತಾರಾನಾಥ್ ಮೆಂಡನ್ ವಂದಿಸಿದರು.

ವಿಕಾಸ್ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.ಈ ಯಶಸ್ವಿ ರಕ್ತದಾನ ‌ಶಿಬಿರದಲ್ಲಿ 52 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.*

Leave a comment

Leave a Reply

Your email address will not be published. Required fields are marked *

Related Articles

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...

ಪೂರ್ಣಿಮಾ ಶೆಟ್ಟಿಗೆ ‘ಮಾನವ ಹಕ್ಕುಗಳ ಸಬಲೀಕರಣ ಮಾನವೀಯ ಶ್ರೇಷ್ಠತೆ’ ಪ್ರಶಸ್ತಿ ಗೌರವ

ಸಾಮಾಜಿಕ ಸೇವಾ ಕಾರ್ಯಕರ್ತೆ ಹಾಗೂ ‘ವಸುದೈವ ಕುಟುಂಬಕಂ’ ಎನ್‌ಜಿಒ ಸಂಸ್ಥೆಯ ಸಂಸ್ಥಾಪಕಿ ಪೂರ್ಣಿಮಾ ಶೆಟ್ಟಿ ಅವರಿಗೆ...