ಚೇರ್ಕಾಡಿ ಕಂಬಳ ಗದ್ದೆಯಲ್ಲಿ ತಂಡಗಳ ಹೊಡೆದಾಟ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 09.12.2024 ರಂದು ಚೇರ್ಕಾಡಿ ಕಂಬಳದ ಪ್ರಯುಕ್ತ ಕಂಬಳ ಗದ್ದೆಯಲ್ಲಿ ನಡೆದ ಹಗ್ಗ-ಜಗ್ಗಾಟದ 2ನೇ ಸುತ್ತಿನ ಸ್ಪರ್ಧೆಲ್ಲಿ ಆಟವಾಡಲು ರಾಕೇಶ್, (32)
ಇವರು ತನ್ನ ತಂಡದ ಸದಸ್ಯರಾದ ಕಿರಣ, ರಘು, ಅರುಣ, ರಾಕೇಶ, ಪ್ರಸಾದ್ ಮತ್ತು ಸತೀಶ್ ರವರ ಜೊತೆ ಸೇರಿ ನಿಂತು ಎದುರು ತಂಡದವರೊಂದಿಗೆ ಸಂಜೆ 6:30 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ ಪ್ರಾರಂಭಗೊಂಡಾಗ
ಎದುರಾಳಿ ತಂಡದವರಾದ ಶರತ್, ಸಂದೀಪ್, ರಾಕೇಶ್, ಸುಮಂತ್ ಹಾಗೂ ಇತರೇ 15 ಜನರು ಸೇರಿಕೊಂಡು ಏಕಾ ಎಕಿ ಕಂಬಳಗದ್ದೆಗೆ ನುಗ್ಗಿ ರಾಕೇಶ್ ರನ್ನು ಸೇರಿ ಅವರ ತಂಡದವರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಅವಾಚ್ಯವಾಗಿ ಬೈದು ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ
ರಾಕೇಶ್ ತನ್ನ ತಂಡದವರೊಂದಿಗೆ ಸ್ಪರ್ಧೆಯನ್ನು ಅಲ್ಲಿಯೇ ಕಡಿತಗೊಳಿಸಿ ಕಂಬಳಗದ್ದೆಯಿಂದ ಮೇಲೆ ಬಂದಾಗ, ಆರೋಪಿ ಶರತ್ ಏಕಾ ಏಕಿ ರಾಕೇಶ್ ರ ಕಾಲರ್ ಪಟ್ಟಿಗೆ ಕೈ ಹಾಕಿ, ಅವರ ತಲೆ, ಭುಜಕ್ಕೆ ಕಲ್ಲಿನಿಂದ ಹೊಡೆದು ಜಜ್ಜಿರುತ್ತಾರೆ.
ಅದನ್ನು ತಡೆಯಲು ಬಂದ ಕಿರಣ ಮತ್ತು ರಾಕೇಶ್ ಅವರ ಮೇಲೆಯು ಕೂಡ ಆರೋಪಿಗಳು ಹಲ್ಲೆ ಮಾಡಿರುತ್ತಾರೆ. ಈ ಹಲ್ಲೆಯಲ್ಲಿ ಗಾಯಗೊಂಡ ಕಿರಣ್, ರಾಕೇಶ್ ರವರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ 279/2024 ಕಲಂ: 189(2), 191(2), 115(2), 351(2)(3),118(1) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.