ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷವು(ಆಪ್ ) ಇಂದು ಸೋಮವಾರ ತನ್ನ 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ್ದು, ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಜಂಗ್‌ಪುರ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಇತ್ತೀಚೆಗಷ್ಟೇ ಎಎಪಿಗೆ ಸೇರ್ಪಡೆಗೊಂಡಿರುವ ಶಿಕ್ಷಣತಜ್ಞ ಅವಧ್ ಓಜಾ ಅವರನ್ನು ಪ್ರಸ್ತುತ ವಿಧಾನಸಭೆಯಲ್ಲಿ ಸಿಸೋಡಿಯಾ ಹೊಂದಿರುವ ಪಟ್ಪರ್ಗಂಜ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಈ ಪಟ್ಟಿಯಲ್ಲಿ ಜಿತೇಂದರ್ ಸಿಂಗ್ ಶುಂಟಿ(ಶಹದಾರದಿಂದ ಕಣಕ್ಕಿಳಿದಿದ್ದಾರೆ) ಮತ್ತು ಸುರೀಂದರ್ ಪಾಲ್ ಸಿಂಗ್ ಬಿಟ್ಟು (ತಿಮಾರ್‌ಪುರ್) ಅವರ ಹೆಸರುಗಳೂ ಸೇರಿವೆ,
ಅವರು ಇತ್ತೀಚೆಗೆ ಬಿಜೆಪಿಯನ್ನು ತೊರೆದು ಎಎಪಿ ಸೇರಿದ್ದಾರೆ. ಹಾಲಿ ಎಎಪಿ ಶಾಸಕ ಮತ್ತು ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಬದಲಿಗೆ ಷಂಟಿ ಅವರ ಕ್ಷೇತ್ರದಲ್ಲಿ ನಿಲ್ಲಿಸಿದರೆ
, ಸದನದಲ್ಲಿ ಎಎಪಿಯ ಮುಖ್ಯ ಸಚೇತಕ ದಿಲೀಪ್ ಪಾಂಡೆ ಬದಲಿಗೆ ಸುರೀಂದರ್ ಪಾಲ್ ಸಿಂಗ್ ಬಿಟ್ಟು ಅವರನ್ನು ಕಣಕ್ಕಿಳಿಸಲಾಗಿದೆ.
ಎಎಪಿ ತನ್ನ ಮೊದಲ ಪಟ್ಟಿಯಲ್ಲಿ 11 ಅಭ್ಯರ್ಥಿಗಳನ್ನು ಘೋಷಿಸಿತ್ತು. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿಗೆ ಮುನ್ನ ಚುನಾವಣೆ ನಡೆಯಲಿದೆ
ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ ಆಮ್ ಆದ್ಮಿ ಪಕ್ಷ
ದೆಹಲಿ ಚುನಾವಣೆ: 20 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಆಮ್ ಆದ್ಮಿ ಪಕ್ಷ