ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ವತಿಯಿಂದ ಬಡ ಮಹಿಳೆಯ ಮನೆ ನಿರ್ಮಾಣಕ್ಕಾಗಿ ಭೂಮಿ ಪೂಜೆ

68

ಅವಿಭಜಿತ  ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ  ಇತರ ಸಂಘಟನೆಗಳಿಗೆ ಸಾರ್ವಜನಿಕರಿಗೆ ಮಾದರಿಯಾಗಿರುವಂತೆ ಕಾರ್ಯನಿರ್ವಹಿಸುತ್ತಿರುವ ಮಂಜಣ್ಣ ಸೇವಾ  ಬ್ರಿಗೇಡ್ ಟ್ರಸ್ಟ್ ವತಿಯಿಂದ   ಸುಮಾರು 200ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ 60ಲಕ್ಷಕ್ಕೂ ಅಧಿಕ ಮೊತ್ತದ ಸೇವಾ ಯೋಜನೆಯನ್ನು ಮಾಡುವ ಮೂಲಕ ಬಡವರ ಕಣ್ಣೀರು ವರೆಸುವ ಕಾರ್ಯ ಮಾಡಿದೆ.
ಇದೀಗ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಇದರ ವತಿಯಿಂದ ಮತ್ತೊಂದು ಯೋಜನೆ ಮೂಲಕ ಬಡವರ ಕಣ್ಣೀರು ಒರೆಸಲು ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದೆ.
ದಿನ ಕಳೆಯಲು ಕಷ್ಟದಲ್ಲಿದ್ದ ಕುಟುಂಬಕ್ಕೆ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಮೊದಲ ಹಂತವಾಗಿ ಭೂಮಿ ಪೂಜೆ ನೆರವೇರಿದೆ. ಮಂಗಳೂರಿನ ಪಡೀಲ್ ನಿವಾಸಿ ಸುನಿತಾ ಎಂಬವರಿಗೆ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಮನೆ ಕೆಲಸ ಮಾಡುತ್ತಾ ಮಾನಸಿಕ ಸ್ಥಿತಿ ಸರಿಯಿಲ್ಲದ ಅಣ್ಣನ ಜೊತೆ ಬದುಕು ಕಳೇಯುತ್ತಿರುವ ಸುನಿತಾ ಅವರ ಪರಿಸ್ಥಿತಿ ದಿನದೂಡಲು ಕಷ್ಟಕರವಾಗಿದೆ. ಇವರ ಕಷ್ಟ ನೋಡಿದ ಮನೋಜ್ ಅಳಪೆ ಭಟ್ರಬೆಟ್ಟು ಇವರು ಸದಾ ಸೇವೆಯಲ್ಲಿ ತೊಡಗಿರುವ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಸಂಸ್ಥೆಗೆ ಮನವಿ ಮಾಡಿದ್ದಾರೆ.
ತಕ್ಷಣ ಮನವಿಗೆ ಸ್ಪಂದಿಸಿದ ಸಂಸ್ಥೆ ಮಹಿಳೆಯ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲಲು ತೀರ್ಮಾನಿಸಿತು. ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆರ್ಚಕರಾದ ಸುಬ್ರಹ್ಮಣ್ಯ ಐತಾಳ್ ಸಮ್ಮುಖದಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಇದರ ಸ್ಥಾಪಕಾಧ್ಯಕ್ಷರಾದ ಮನೋಜ್ ಕೋಡಿಕೆರೆ ಇವರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯ ವಿಧಿವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ್ ಗರೋಡಿ, ವಾಮನ್ ಅಳಪೆ ಗರೋಡಿ ದೇವಸ್ಥಾನದ ಟ್ರಸ್ಟ್ ಸದಸ್ಯರು, ಚರಣ್ ಅಳಪೆ ಭಟ್ರಬೆಟ್ಟು, ಶೋಭಾ ಪೂಜಾರಿ ಕಾರ್ಪೊರೇಟರ್ ಅಳಪೆ ಭಟ್ರಬೆಟ್ಟು, ವಿಕ್ಕಿ ಪೂಜಾರಿ ಪಡೀಲ್  ಪಡೀಲ್ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರು, ಗೆಳೆಯರ ಬಳಗ ಸುರತ್ಕಲ್ ಇದರ ಸ್ಥಾಪಕಾಧ್ಯಕ್ಷರಾದ ನಾಗೇಶ್ ಪೂಜಾರಿ ತೋಕೂರು, ಮನೋಜ್ ಅಳಪೆ ಭಟ್ರಬೆಟ್ಟು ಸೇರಿದಂತೆ ಮಂಜಣ್ಣ ಸೇವಾ ಬ್ರಿಗೇಡ್  ಇದರ ಅಧ್ಯಕ್ಷರು ರಂಜಿತ್ ಜೆ ಶೆಟ್ಟಿ, ಕಾರ್ಯದರ್ಶಿ ಗಂಗಾಧರ್ ಶೆಟ್ಟಿ ತೋಕೂರು, ಕೋಶಾಧಿಕಾರಿ ರೇವಂತ್ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು

Leave a comment

Leave a Reply

Your email address will not be published. Required fields are marked *

Related Articles

ಕರಾವಳಿ ಮಂಗಳೂರಿನಿಂದ ಕಾರವಾರದವರೆಗೆ ವ್ಯಾಪಿಸಿದ ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ಬಂಪರ್: 500 ಕೋಟಿ ರೂ ಅನುದಾನ;

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ದೇಶದ ಪ್ರಮುಖ ಪ್ರವಾಸೋದ್ಯಮ ಹೂಡಿಕೆ ವಲಯಗಳಾಗಿ ರೂಪಿಸುವ...

ಅಗ್ರಜ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸದಸ್ಯರಿಗೆ ಶೇ 15% ಡಿವಿಡೆಂಡ್ ಘೋಷಣೆ

ಉಡುಪಿ: ಅಗ್ರಜ ಸೌಹಾರ್ದ ಸಹಕಾರಿ ಸಂಘ(ನಿ), ಉಡುಪಿ ಇದರ ವಾರ್ಷಿಕ ಮಹಾಸಭೆಯು ಬನ್ನಂಜೆಯ ಶ್ರೀ ನಾರಾಯಣ...

ಅಗ್ರಜ ಸೌಹಾರ್ದ ಸಹಕಾರಿ ಸಂಘ (ನಿ.), ಉಡುಪಿಹಾಗೂ ಶ್ರೀ ಧೂಮಾವತಿ ಯುವಕ ಮಂಡಲ (ರಿ.) ನಿಟ್ಟೂರು ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ

ನಿಟ್ಟೂರು: ಆ. 27: ಶ್ರೀ ಧೂಮಾವತಿ ಯುವಕ ಮಂಡಲ (ರಿ.) ವಿಷ್ಣುಮೂರ್ತಿ ನಗರ, ನಿಟ್ಟೂರು, ಹಾಗೂ...