ಹೆಬ್ರಿ ನಕ್ಸಲೆಟ್ ಎನ್ ಕೌಂಟರ್ ಪ್ರಕರಣ ತನಿಖೆಗಾಗಿ ಅಮಾಯಕನ ಬಂಧನ ಸಿಡಿದೆದ್ದ ಗ್ರಾಮಸ್ಥರು ಬಳಿಕ ಬಿಡುಗಡೆ

2

ಪೊಲೀಸ್ ಇಲಾಖೆ,ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ ಒಳಗಾಗಿ ಕಾಡಿನ ಬದಿಯಲ್ಲಿ ಜೀವನ ನೆಡೆಸುತ್ತಿದ್ದ ಅಮಾಯಕ ಜನರ ಕಷ್ಟ ಇನ್ನೂ ಮುಗಿದ್ದಂತೆ ಇಲ್ಲ ಎನ್ನುವಂತೆ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್‌ ಕೌಂಟರ್ ಪ್ರಕರಣದಲ್ಲಿ

ತನಿಖೆಯ ಕುರಿತಾಗಿ ಘಟನೆ ನಡೆದ ಸ್ಥಳದ ನಿವಾಸಿ ಜಯಂತ್ ಗೌಡ ಅವರನ್ನು ಹೆಬ್ರಿ ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದುಕೊಂಡಿದ್ದು, ಈ ಕುರಿತು ಗ್ರಾಮಸ್ಥರು ವಿರೋಧಿಸಿ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನ. 22 ರಂದು ಶುಕ್ರವಾರ ನಡೆದಿದೆ.

ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಶುಕ್ರವಾರ ಬೆಳಗ್ಗೆ ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆತನನ್ನು ವಶಪಡಿಸಿಕೊಂಡು ಹೆಬ್ರಿ ಠಾಣೆಗೆ ಕರೆ ತಂದಿದ್ದಾರೆ.

ಈ ಬಗ್ಗೆ ಆತ ಅಮಾಯಕ ಆತನಿಗೆ ಏನು ತಿಳಿದಿಲ್ಲ ಅಂತವನನ್ನು ಯಾಕೆ ಠಾಣೆಗೆ ಕರೆದುಕೊಂಡು ಬಂದಿದ್ದೀರಿ ಅಲ್ಲಿಯ ವಿಚಾರಿಸಬಹುದಿತ್ತಲ್ಲ ಎಂದು ಮಲೆಕುಡಿಯ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಠಾಣಾಧಿಕಾರಿ ಅವರಲ್ಲಿ ಮನವಿ ಮಾಡಿ ಆತನನ್ನು ಕೂಡಲೇ ಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನಾಕಾರರ ಹೋರಾಟಕ್ಕೆ ಮಣಿದ ಪೊಲೀಸ್ ಇಲಾಖೆ ಮಧ್ಯಾಹ್ನ 3 ಗಂಟೆ ಗೆ ಜಯಂತ್ ಗೌಡರನ್ನು ಬಿಡುಗಡೆಗೊಳಿಸಿತು  ಈ ಸಂದರ್ಭದಲ್ಲಿ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಬಂಗೇರ, ಬಿಜೆಪಿ ಮುಖಂಡ ಸುಧಾಕರ ಹೆಗ್ಡೆ, ಶೇಖರ್ ತಾಣ  ಮತ್ತಿತರು ಉಪಸ್ಥಿತರಿದ್ದರು.

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...