thekarnatakatoday.com
News

ರಾಜ್ಯರಾಜಕಾರಣದಲ್ಲಿ ಈಗಿನ ರಾಜಕೀಯ ಸ್ಥಿತಿ ಯಾವ ರೀತಿಯಲ್ಲಿ ಬೇಕಾದರೂ ಬದಲಾವಣೆಯಾಗಬಹುದು :: ಗೃಹ ಸಚಿವ ಜಿ ಪರಮೇಶ್ವರ್

ಇವತ್ತಿನ ರಾಜಕೀಯ ಬೆಳವಣಿಗೆ ನೋಡಿದರೆ ಏನೂ ಹೇಳಲಿಕ್ಕೆ ಆಗಲ್ಲಾ. ರಾಜ್ಯ ರಾಜಕೀಯ ಪರಿಸ್ಥಿತಿ ಯಾವಾಗ ಬೇಕಾದರೂ ಬದಲಾಗಬಹುದು ಎಂದು ಗೃಹ ಸಚಿವ ಪರಮೇಶ್ವರ್ ಅವರು ಹೇಳಿದ್ದು, ಈ ಹೇಳಿಕೆ ಹಲವರ ಹುಬ್ಬೇರುವಂತೆ ಮಾಡಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಮೈಸೂರಿನ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸ್ಥಳ ಪಡೆಯಲು ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಚಂದ್ರಪ್ರಭಾ ಅರಸು ಅವರ ಜೊತೆ ಸಾಕಷ್ಟು ಬಾರಿ ಸಭೆ ಮಾಡಿದ್ದೇನೆ.

ಈಗ ಶೀಘ್ರದಲ್ಲೇ 15 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಂಗ್ರೆಸ್ ಕಚೇರಿಯನ್ನ ಕಟ್ಟಲು ಸಿಎಂ ಹೊರಟಿದ್ದಾರೆ. ಆದಷ್ಟು ಬೇಗ ಕಚೇರಿ ಕಟ್ಟುಬಿಡಿ, ಮುಂದೆ ಏನಾಗುತ್ತೋ ಗೊತ್ತಾಗಲ್ಲ. ಇವತ್ತಿನ ರಾಜಕೀಯ ಬೆಳವಣಿಗೆ ನೋಡಿದರೆ ಏನೂ ಹೇಳಲಿಕ್ಕೆ ಆಗಲ್ಲ.

ನಮ್ಮ ಸರ್ಕಾರ ಇರುವಾಗಲೇ ಬೇಗ ಶಂಕುಸ್ಥಾಪನೆ ನೆರವೇರಿಸಿ ಎಂದು ಹೇಳಿದರು. ಸಚಿವರ ಈ ಹೇಳಿಕೆ ಕಾಂಗ್ರೆಸ್ಸಿಗರು ಹಾಗೂ ಪಕ್ಷದ ಅಭಿಮಾನಿಗಳಲ್ಲಿ ಸರ್ಕಾರದ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಇದೇ ವೇಳೆ ಶಾಸಕರಿಗೆ ಆಮಿಷ ಒಡ್ಡುತ್ತಿರುವ ವಿಚಾರ ಕುರಿತು ಮಾತನಾಡಿ, ಕಾಂಗ್ರೆಸ್ ಸರ್ಕಾರ ಸ್ಥಿರವಾಗಿದ್ದು, 50 ಕೋಟಿ ಅಥವಾ 100 ಕೋಟಿ ನೀಡಿ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು

ಏನೇ ಆರೋಪ ಮಾಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಟ್ಟಿಯಾಗುತ್ತಾರೆ. ಪ್ರತಿಪಕ್ಷಗಳು ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತರೆ.

ಕೊಟ್ಟ ಮಾತಿನಿಂದ ನಮ್ಮ ಸರ್ಕಾರ ಹಿಂದೆ ಸರಿಯುವುದಿಲ್ಲ. ಈ ವಿಚಾರವನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಜಾತಿ ಮತ್ತು ಸಾಮಾಜಿಕ-ಆರ್ಥಿಕ ಗಣತಿ ಕುರಿತು ಕಾಂತರಾಜ್ ಆಯೋಗದ ವರದಿಯನ್ನು ಶೀಘ್ರದಲ್ಲೇ ಜನರ ಮುಂದಿಡಲಾಗುವುದು ಎಂದು ತಿಳಿಸಿದರು.

160 ಕೋಟಿ ವೆಚ್ಚದಲ್ಲಿ ಸರ್ಕಾರ ಸಮೀಕ್ಷೆ ನಡೆಸಿದ್ದು, ನೀತಿಗಳನ್ನು ರೂಪಿಸಲು ಜಾತಿವಾರು ಜನಸಂಖ್ಯೆಯನ್ನು ತಿಳಿಯಲು ಸಮೀಕ್ಷೆಯ ಅಗತ್ಯವಿದೆ ಎಂದು ತಿಳಿಸಿದರು.

ಇದೇ ವೇಳೆ ಹಣಕಾಸಿನ ನಿರ್ವಹಣೆಗಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಶ್ಲಾಘಿಸಿದರು. ನಿಗಮ-ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರ ನಾಮನಿರ್ದೇಶನ ಪಟ್ಟಿ ಸಿದ್ಧವಾಗಿದ್ದು, ಉಪಚುನಾವಣೆ ನಂತರ ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

Related posts

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಶ್ಲೀಲ ಪದಗಳಿಂದ  ನಿಂದಿಸಿದ ಆರೋಪ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನದೂರು ನೀಡಿದ ಹೆಬ್ಬಾಳ್ಕರ್ ಸಿಟಿ ರವಿ ಬಂಧನ

The Karnataka Today

ಮುಡಾ ಹಗರಣ ಸಿದ್ದರಾಮಯ್ಯ ಮೆಲ್ಮನವಿ ವಿಚಾರಣೆಯನ್ನು ಜನವರಿ 25, 2025 ಕ್ಕೆ ಮುಂದೂಡಿದ ಹೈಕೋರ್ಟ್

The Karnataka Today

ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ಸುಬ್ಬಣ್ಣ ಆತ್ಮಹತ್ಯೆ ಪ್ರಕರಣ ಮರುತನಿಖೆ ಆಗಬೇಕು:: ನವೀನ್ ಸಾಲಿಯನ್

The Karnataka Today

Leave a Comment