ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿರುವ ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ) ಗುರುವಾರ ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
11 ಅಭ್ಯರ್ಥಿಗಳಲ್ಲಿ ಆರು ಮಂದಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಇತ್ತೀಚೆಗೆ ಎಎಪಿ ಸೇರಿದ್ದಾರೆ.
ಬಿಜೆಪಿಯ ಮಾಜಿ ನಾಯಕರಾದ ಬ್ರಹ್ಮ್ ಸಿಂಗ್ ತನ್ವರ್, ಅನಿಲ್ ಝಾ ಮತ್ತು ಬಿಬಿ ತ್ಯಾಗಿ, ಮಾಜಿ ಕಾಂಗ್ರೆಸ್ ನಾಯಕರಾದ ಚೌಧರಿ ಜುಬೇರ್ ಅಹ್ಮದ್, ವೀರ್ ದಿಂಗನ್ ಮತ್ತು ಸುಮೇಶ್ ಶೋಕೀನ್ ಅವರನ್ನು ಆಮ್ ಆದ್ಮಿ ಪಕ್ಷ ಕಣಕ್ಕಿಳಿಸಿದೆ.
ಸರಿತಾ ಸಿಂಗ್, ರಾಮ್ ಸಿಂಗ್ ನೇತಾಜಿ ಮತ್ತು ದೀಪಕ್ ಸಿಂಘಾಲ್, ಗೌರವ್ ಶರ್ಮಾ ಮತ್ತು ಮನೋಜ್ ತ್ಯಾಗಿ ಅವರಿಗೂ ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿದೆ.
ದೆಹಲಿ ವಿಧಾನಸಭೆಯ ಎಲ್ಲಾ 70 ಸ್ಥಾನಗಳಿಗೆ ಫೆಬ್ರವರಿ 2025 ರಲ್ಲಿ ಚುನಾವಣೆ ನಡೆಯಲಿದೆ.
Leave a comment