ಕರಾವಳಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಾರಿ ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿದ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ತಂಡಗಳ ರೋಮಾಂಚಕ ಟೆನ್ನಿಸ್ ಬಾಲ್ ಕ್ರಿಕೆಟ್ ಕದನ ಪಡುಬಿದ್ರೆಯಲ್ಲಿ ನಡೆಯಲಿದೆ. ಕಡಲ್ ಫಿಶ್ ಕ್ರಿಕೆಟರ್ಸ ಪಡುಬಿದ್ರಿ ಇದರ ವತಿಯಿಂದ ಉಭಯ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ” ಕಡಲ್ ಫಿಶ್ ಟ್ರೋಫಿ -2024″ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟವು ನವೆಂಬರ್ 16 ,17 ಮತ್ತು 18 ರಂದು ಪಡುಬಿದ್ರಿ ಬೋರ್ಡ್ ಶಾಲಾ ಮೃೆದಾನದಲ್ಲಿ ನಡೆಯಲಿದ್ದು ಈ ಬಗ್ಗೆ ಕಾಪು ಪತ್ರಿಕಾ ಭಾವನದಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಯಿತು.ಈ ಸಂದರ್ಭದಲ್ಲಿ ಟ್ರೋಫಿ ಅನಾವರಣವೂ ನಡೆಸಲಾಯಿತುಈ ಪಂದ್ಯಕೂಟದಲ್ಲಿ ಪ್ರಥಮ ಬಾರಿಗೆ ಶ್ರೀಲಂಕಾ ಮತ್ತು ಇಂಡಿಯಾದ ಟೆನ್ನಿಸ್ ಬಾಲ್ ತಂಡಗಳು ಹಾಗು , ಮಧ್ಯಪ್ರದೇಶ , ಮಹಾರಾಷ್ಟ್ರ ಸೇರಿ ರಾಜ್ಯದ ಬೆಂಗಳೂರು, ಉಡುಪಿ , ಮಂಗಳೂರಿನ ಪ್ರಸಿದ್ಧ ತಂಡಗಳು ಸೇರಿ 17 ತಂಡಗಳು ಭಾಗವಹಿಸಲಿವೆ.... ಪಂದ್ಯಕೂಟದ ವಿಜೇತ ತಂಡಕ್ಕೆ ರೂ.5 ಲಕ್ಷ. ಹಾಗು ದ್ವಿತೀಯ ಸ್ಥಾನ ತಂಡಕ್ಕೆ ರೂ 3 ಲಕ್ಷ ರೂಪಾಯಿ ಹಾಗು ಟ್ರೋಫಿ ನೀಡಿ ಗೌರವಿಸಲಾಗುವುದು.. ಅಲ್ಲದೆ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ, ಹಾಗು ಉತ್ತಮ ದಾಂಡಿಗ ಹಾಗು ಉತ್ತಮ ಎಸೆತಗಾರ ಪ್ರಶಸ್ತಿ ನೀಡಲಾಗುವುದು…. ಲೀಗ್ ಮಾದರಿಯಲ್ಲಿ ಪಂದ್ಯಕೂಟವು ನಡೆಯಲಿದ್ದು..ನವೆಂಬರ್ 18 ರಂದು ಸಂಜೆ ಹೊನಲು ಬೆಳಕಿನಲ್ಲಿ ಫೃೆನಲ್ ಹಣಾಹಣಿ ನಡೆಯಲಿದೆ.ಈ ಪಂದ್ಯಕೂಟವನ್ನು ಎಮ್.ಅರ್.ಜಿ ಗ್ರೂಪ್ ನ ಅಡಳಿತ ನಿರ್ದೇಶಕ ಡಾ! ಕೆ.ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ… ಸಂಸ್ಥೆಯ ಗೌರವ ಅಧ್ಯಕ್ಷರಾದ ನವೀನಚಂದ್ರ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ… ಮುಖ್ಯ ಅತಿಥಿಯಾಗಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ,ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ , ಪ್ರಮೋದ್ ಮಧ್ವರಾಜ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ , ಜಿತೇಂದ್ರ ಜೆ ಶೆಟ್ಟಿ ಪಡುಬಿದ್ರಿ , ಕಿಶೋರ್ ಅಳ್ವ , ವೃೆ ಸುಧೀರ್ ಕುಮಾರ್ , ಹಾಜಿ ಅಬ್ದುಲ್ ಕಲಾಂ, ವೃೆ.ಸುಕುಮಾರ್ , ಸಂತೋಷ್ ಕುಮಾರ್ ಶೆಟ್ಟಿ , ಪ್ರಕಾಶ್ ಶೆಟ್ಟಿ ಪಾದೆಬೆಟ್ಟು , ಕಿಶೋರ್ ಅಳ್ವ , ಶಶಿಕಲಾ ಪೂಜಾರಿ, ದಯಾನಂದ್ ಹೆಜ್ಮಾಡಿ, ಮತ್ತಿತರರು ಉಪಸ್ಥಿತರಿರುವರು.ಸಮಾರೋಪ ಸಮಾರಂಭದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರ ಶಾಸಕರು , ಮಾಜಿ ಶಾಸಕ ಲಾಲಾಜಿ ಅರ್ ಮೆಂಡನ್ , ಬಾಲಚಂದ್ರ ಶೆಟ್ಟಿ ಪುಣೆ , ಶರತ್ ಶೆಟ್ಟಿ ಪಡುಬಿದ್ರಿ , ಗೌತಮ್ ಶೆಟ್ಟಿ, ರಮೀಜ್ ಹುಸೇನ್, ಕರುಣಾಕರ್ ಪೂಜಾರಿ , ರಚನ್ ಸಾಲ್ಯಾನ್ , ಪಾಂಡುರಂಗ ಕೋಟ್ಯಾನ್ , ಕಡಲ್ ಫಿಶ್ ಕ್ರಿಕೆಟರ್ಸ್ ನ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್ , ಅಶ್ವಿನ್ ಕೋಟ್ಯಾನ್ ಮತಿತ್ತರರು ಭಾಗವಹಿಸಲಿದ್ದಾರೆ…