ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆ 3ಲಕ್ಷ 34ಸಾವಿರ ಮೌಲ್ಯದ ಗಾಂಜಾ ವಶ ಇಬ್ಬರ ಬಂಧನ

87

ಕುಂದಾಪುರ ಗುಲ್ವಾಡಿ ಗ್ರಾಮದ ಉದಯನಗರ ಎಂಬಲ್ಲಿ ನಜರುಲ್ಲಾ ಖಾನ್‌ ಎಂಬವರ ಮನೆಯಲ್ಲಿ ಗಾಂಜಾವನ್ನು ಮಾರಾಟ ಮಾಡಲು ದಾಸ್ತಾನು ಇಟ್ಟುಕೊಂಡಿದ್ದಲ್ಲದೇ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಕೊಂಡಿರುವ

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಭೀಮಾಶಂಕರ್ ಸಿನ್ನೋರ  ಸಂಗಣ್ಣ ನೇತೃತ್ವದಲ್ಲಿ ಆರೋಪಿತರ ಮನೆ ಮತ್ತು ಆಪಾದಿತರ ಶೋಧನೆ ನಡೆಸಲು ಮಾನ್ಯ ನ್ಯಾಯಾಲಯದಿಂದ ಶೋಧನಾ ವಾರೆಂಟನ್ನು ಪಡೆದು

ನಂತರ ದಾಳಿ ನಡೆಸಲು ಪೊಲೀಸ್‌ ಅಧೀಕ್ಷಕರ ಅನುಮತಿ ಪಡೆದು ಬಳಿಕ ದಾಳಿ ನಡೆಸುವಾಗ ಸಹಕರಿಸುವರೇ ಪತ್ರಾಂಕಿತ ಅಧಿಕಾರಿ ಮತ್ತು ಸರ್ಕಾರಿ ಪಂಚರನ್ನು ಬರ ಮಾಡಿಕೊಂಡು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆಪಾದಿತರ ಮನೆಗೆ ಹೋಗಿ ಶೋಧನೆ ನಡೆಸಿದಾಗ ಆಪಾದಿತರ ಮನೆಯ ಬೆಡ್‌ ರೂಮಿನಲ್ಲಿ ಟ್ರಾಲಿ ಸೂಟ್‌ ಕೇಸ್‌ ನಲ್ಲಿ ಅಡಗಿಸಿಟ್ಟಿದ್ದ 5 ಪ್ರತ್ಯೇಕ ಪ್ರತ್ಯೇಕ ಗಾಂಜಾ ಪ್ಯಾಕೆಟ್‌ ಗಳು ಸಿಕ್ಕಿದ್ದು

ಅದನ್ನು ಪತ್ರಾಂಕಿತ ಅಧಿಕಾರಿಯವರು ಪರಿಶೀಲಿಸಿ ಪಂಚರ ಸಮಕ್ಷಮ ತೂಕ ಮಾಡಿಸಿ ನೋಡಲಾಗಿ ಪ್ಯಾಕೆಟ್ ಗಳು ಪ್ಲಾಸ್ಟಿಕ್ ಕವರ್ ಸಮೇತ ಕ್ರಮವಾಗಿ 1) 2.016 ಕೆ.ಜಿ, 2) 2.008 ಕೆ.ಜಿ, 3) 2.010 ಕೆ.ಜಿ, 4) 2.00 ಕೆ.ಜಿ, ಮತ್ತು 5) ಅರೆ ತೆರೆದಿರುವ ಪ್ಯಾಕೆಟ್ 0.570 ಕೆ.ಜಿ ತೂಕ ಇದ್ದಿದ್ದು, ಒಟ್ಟು 8.608 ಕೆ.ಜಿ ಇರುತ್ತದೆ.

ಸದ್ರಿ ಗಾಂಜಾವನ್ನು ಪ್ಲಾಸ್ಟಿಕ್‌ ಕವರ್‌ ನಿಂದ ಪ್ರತ್ಯೇಕಿಸಿ ಪಾರದರ್ಶಕ ಪ್ಲಾಸ್ಟಿಕ್‌ ಕವರ್‌ ಗೆ ಹಾಕಿ ತೂಕ ಮಾಡಿ ನೋಡಿದಾಗ 1) 1.972 ಕೆ.ಜಿ, 2) 1.948 ಕೆ.ಜಿ, 3) 1.960 ಕೆ.ಜಿ, 4) 1.966 ಕೆ.ಜಿ, ಮತ್ತು 5) ಅರೆ ತೆರೆದಿರುವ ಪ್ಯಾಕೆಟ್ 0.528 ಕೆ.ಜಿ ತೂಕ ಇದ್ದಿದ್ದು,

ಒಟ್ಟು ತೂಕ 8 ಕೆ.ಜಿ 374 ಗ್ರಾಂ ತೂಕ ಇದ್ದು ಅಂದಾಜು ಮೌಲ್ಯ ಸುಮಾರು 3,34,800/- ರೂಪಾಯಿ ಆಗಿರುತ್ತದೆ. ಸದ್ರಿ ಸ್ವತ್ತನ್ನು ಸ್ವಾದೀನಪಡಿಸಿಕೊಂಡು ನಂತರ ಗಾಂಜಾ ತುಂಬಿಸಿಟ್ಟಿದ್ದ ಕವರ್‌ ಗಳನ್ನು ಹಾಗೂ ಗಾಂಜಾವನ್ನು ಬಚ್ಚಿಡಲು ಬಳಸಿದ ಸುಮಾರು 100/- ರೂಪಾಯಿ ಬೆಲೆ ಬಾಳುವ ಬೂದು ಬಣ್ಣದ ಟ್ರಾಲಿ ಸೂಟ್‌ ಕೇಸ್‌ ಮತ್ತು ಆಪಾದಿತರು ಗಾಂಜಾ ಮಾರಾಟ ಮಾಡಲು ಬಳಸಿದ ಸುಮಾರು 2000/- ರೂಪಾಯಿ ಮೌಲ್ಯದ ವಿವೋ ಮೋಬೈಲ್‌ ಹಾಗೂ 500/- ರೂಪಾಯಿ ಮೌಲ್ಯದ ನೋಕಿಯಾ ಕೀ-ಪ್ಯಾಡ್‌ ಮೊಬೈಲ್‌ ಫೋನ್‌ ಗಳನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ.

ನಂತರ ಆರೋಪಿ 1)ನಜರುಲ್ಲಾ ಖಾನ್‌ (40) ಗುಲ್ವಾಡಿ ಗ್ರಾಮ, ಕುಂದಾಪುರ 2) ಶ್ರೀಮತಿ ಫಾತಿಮಾ (33) ಗುಲ್ವಾಡಿ ಗ್ರಾಮ, ಕುಂದಾಪುರ ಇವರಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗಿ  ಆಪಾದಿತರಿಗೆ ಹಸೈನರ್‌ ಎಂಬ ವ್ಯಕ್ತಿಯು ಗಾಂಜಾವನ್ನು ತಂದುಕೊಟ್ಟಿರುವುದಾಗಿ ತಿಳಿದು ಬಂದಿರುವುದಾಗಿದೆ

. ಈತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ  ಈ ಬಗ್ಗೆ ಕುಂದಾಫುರ ಗ್ರಾಮಾಂತರ ಪೊಲೀಸ್‌ ಠಾಣಾ  ಕಲಂ: 8(c), 20(b)(ii)(B) NDPS ACT ರಂತೆ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಕರಾವಳಿ ಮಂಗಳೂರಿನಿಂದ ಕಾರವಾರದವರೆಗೆ ವ್ಯಾಪಿಸಿದ ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ಬಂಪರ್: 500 ಕೋಟಿ ರೂ ಅನುದಾನ;

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ದೇಶದ ಪ್ರಮುಖ ಪ್ರವಾಸೋದ್ಯಮ ಹೂಡಿಕೆ ವಲಯಗಳಾಗಿ ರೂಪಿಸುವ...

ಅಗ್ರಜ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸದಸ್ಯರಿಗೆ ಶೇ 15% ಡಿವಿಡೆಂಡ್ ಘೋಷಣೆ

ಉಡುಪಿ: ಅಗ್ರಜ ಸೌಹಾರ್ದ ಸಹಕಾರಿ ಸಂಘ(ನಿ), ಉಡುಪಿ ಇದರ ವಾರ್ಷಿಕ ಮಹಾಸಭೆಯು ಬನ್ನಂಜೆಯ ಶ್ರೀ ನಾರಾಯಣ...

ಅಗ್ರಜ ಸೌಹಾರ್ದ ಸಹಕಾರಿ ಸಂಘ (ನಿ.), ಉಡುಪಿಹಾಗೂ ಶ್ರೀ ಧೂಮಾವತಿ ಯುವಕ ಮಂಡಲ (ರಿ.) ನಿಟ್ಟೂರು ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ

ನಿಟ್ಟೂರು: ಆ. 27: ಶ್ರೀ ಧೂಮಾವತಿ ಯುವಕ ಮಂಡಲ (ರಿ.) ವಿಷ್ಣುಮೂರ್ತಿ ನಗರ, ನಿಟ್ಟೂರು, ಹಾಗೂ...