ಕರ್ನಾಟಕದಲ್ಲಿ ಬಿಜೆಪಿ ನರಸತ್ತಿದೆ, ಪಕ್ಷಕ್ಕೆ ಧಮ್ ಇಲ್ಲ’ ಪಕ್ಷಕ್ಕೆ ದುಡಿದವರಿಗಿಲ್ಲ ಟಿಕೆಟ್ ರಾತ್ರಿ ಯಾರು ಸೂಟ್ ಕೇಸ್ ತಂದು ಕೊಡುತ್ತಾರೋ ಅವರಿಗೆ ಟಿಕೆಟ್ :::ಬಸನಗೌಡ ಪಾಟೀಲ್ ಯತ್ನಾಳ್

21
ವಿಜಯಪುರ: ಸಿದ್ದರಾಮಯ್ಯ ಪಾಪ ಬಹಳ ಅತ್ಯಂತ ಸ್ವಚ್ಛ ರಾಜಕಾರಣಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲು ಮುಖ್ಯಮಂತ್ರಿಯಾಗಿದ್ದಾಗ ಒಳ್ಳೆಯವರಾಗಿದ್ದರು. ಆದರೆ ಈಗ ಕಲುಷಿತರಾಗಿದ್ದಾರೆ, ಅವರ ಮಗ ಮಾಡಿದ ಕರ್ಮಕಾಂಡದಿಂದ ಅವರು ಕಲುಷಿತರಾಗಿದ್ದಾರೆ ಎಂದರು.


ಸಿದ್ದರಾಮಯ್ಯ ಕಲುಷಿತಗೊಳ್ಳಲು ಅವರ ಮಗ ಮತ್ತು ಭೈರತಿ ಸುರೇಶ್ ಕಾರಣ ಎಂದು ಯತ್ನಾಳ್ ಆರೋಪಿಸಿದ್ದಾರೆ. ಜಾತಿ ವ್ಯವಸ್ಥೆ, ಬಾಯಿತೆರೆದ್ರೆ ಅಲ್ಪ ಸಂಖ್ಯಾತರಿಗೆ ಅಷ್ಟು ಕೋಟಿ, ಇಷ್ಟು ಕೋಟಿ ಎಂದು ಹೇಳ್ತಾರೆ, ಅವರಿಗೆ ದಲಿತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ, ತಮ್ಮ ಸಮುದಾಯಕ್ಕೆ ಅವರು ಹೆಚ್ಚಿನದಾಗಿ ಏನು ಮಾಡಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸಂಪೂರ್ಣವಾಗಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯಬೇಕು. ಕಾಂಗ್ರೆಸ್ ಮಣ್ಣಾಗಬೇಕು ಎಂದರು. ಸಿಎಂ ಡಿಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ, ರಾಜ್ಯದಲ್ಲಿ 4. 80 ಲಕ್ಷ ಹುದ್ದೆಗಳು ಖಾಲಿಯಿವೆ, ಕೆಪಿಎಸ್ ಸಿ ಹಗರಣ ಸಂಬಂಧ ಮೊದಲು ಡಿ.ಕೆ ಶಿವಕುಮಾರ್ ರಾಜಿನಾಮೆ ನೀಡಬೇಕು. ಕೆಪಿಎಸ್ ಸಿ ಯನ್ನು ಮೊದಲು ವಿಸರ್ಜನೆ ಮಾಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ನರಸತ್ತಿದೆ. ಪಕ್ಷಕ್ಕೆ ಧಮ್ ಇಲ್ಲ. ಇದರಿಂದ ಕಾಂಗ್ರೆಸ್ ನವರಿಗೆ ವಿರೋಧ ಪಕ್ಷಗಳ ಬಗ್ಗೆ ಯಾವುದೇ ಭಯವಿಲ್ಲ. ವಿಜಯೇಂದ್ರನ ಕ್ಯಾಂಡಿಡೇಟ್ ಒಬ್ಬ 2 ಕೋಟಿ ಹಣ ಕೊಟ್ಟು ಕೆ ಪಿ ಎಸ್ ಸಿ ನಲ್ಲಿ ಕೆಲಸ ತೆಗೆದುಕೊಂಡಿರುವುದು ಬಹಿರಂಗ ಸತ್ಯವಾಗಿದೆ. ಪ್ರತಾಪ್ ಸಿಂಹನನ್ನು ಮೂಲೆಗುಂಪು ಮಾಡಿದ್ದಾರೆ. ಯಾವ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ ಎಂಬುದನ್ನು ಇದುವರೆಗೆ ತಿಳಿಸಿಲ್ಲ ಎಂದರು. ಪಕ್ಷಕ್ಕೆ ದುಡಿದವರಿಗಲ್ಲ ರಾತ್ರಿ ಯಾರು ಸೂಟ್ ಕೇಸ್ ತಗೊಂಡು ಹೋಗಿ ಕೊಡ್ತಾರೋ ಅವರಿಗೆ ಟಿಕೆಟ್ ಇಲ್ಲ ಎಂದರು
ಕೆಪಿಎಸ್ಸಿ ಅಧ್ಯಕ್ಷರ ಮನೆಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಫೋಟೋ ಇದೆ, ದೇಶದ ಹೋರಾಟಗಾರರ ಯಾವುದೇ ಫೋಟೋ ಇಲ್ಲ,ವಿಜಯೇಂದ್ರ ಎಲ್ಲಾದ್ರೂ ಬಾಯಿ ಬಿಟ್ಟಿದ್ದಾನಾ.ಅಂತ ಭ್ರಷ್ಟನನ್ನ ಮೇಲಿನವರು ಹೇಗೆ ರಾಜ್ಯಾಧ್ಯಕ್ಷ ನನ್ನಾಗಿ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಗುತ್ತಿಗೆ ತಗೊಂಡಿದ್ದಾನಾ ಎಂದು ಪ್ರಶ್ನಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

50 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ  ತಹಶೀಲ್ದಾರ್ ಬಂಧನ

ಧಾರವಾಡ: ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಖರಾಬು ಜಮೀನಿನ ದಾಖಲೆ ತಿದ್ದುಪಡಿ ಮಾಡಿ ಕೊಡಲು 50...

ಜಮ್ಮು ಮತ್ತು ಕಾಶ್ಮೀರ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ಒಬ್ಬ ಉಗ್ರನ ಹತ್ಯೆ

ಬುಡ್ಗಾಮ್: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಅಶ್ದಾರ್ ಗಲಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಡೆದ...

ಮಹಿಳಾ ಸಬ್ ಇನ್ಸ್ಪೆಕ್ಟರ್ ಗೆ ಕಪಾಳಮೋಕ್ಷ ಪ್ರಕರಣ ಬಿಜೆಪಿ ಶಾಸಕ ಸುರೇಶ್‌ಗೌಡ ಪುತ್ರಿ ಜಾಮೀನು ಅರ್ಜಿ ವಜಾ ಐಶ್ವರ್ಯ ಬಂಧನಕ್ಕಾಗಿ ತೀವ್ರ ಶೋಧ

ಮಂಡ್ಯ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಶಾಸಕ ಸುರೇಶ್...

ಅಧಿಕಾರಿ ಸೋಗಿನಲ್ಲಿ ಜನರಿಗೆ ವಂಚನೆ: ಮಂಗಳೂರು ಸಿಸಿಬಿ ಕಾರ್ಯಾಚರಣೆ; ಆರೋಪಿ ಬಂಧನ

ಮಂಗಳೂರು: ರಾಷ್ಟ್ರೀಯ ಅಪರಾಧ ತನಿಖಾ ದಳದ ಅಧಿಕಾರಿ ಎಂದು ಹೇಳಿಕೊಂಡು ಜನರಿಂದ ಹಣ ವಸೂಲಿ ಮಾಡಿದ್ದ...